ಮಂಗಳವಾರ, ಏಪ್ರಿಲ್ 29, 2025
HomeSportsCricketKKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್...

KKR Head Coach Chandrakant Pandit : ಕೋಲ್ಕತಾ ನೈಟ್ ರೈಡರ್ಸ್‌ಗೆ ರಣಜಿ ಹೀರೋ ಚಂದ್ರಕಾಂತ್ ಪಂಡಿತ್ ಹೆಡ್ ಕೋಚ್

- Advertisement -

ಕೋಲ್ಕತಾ: (KKR Head Coach Chandrakant Pandit) ರಣಜಿ ಟ್ರೋಫಿಯಲ್ಲಿ ಕೋಚ್ ಆಗಿ ಅದ್ಭುತ ಪ್ರದರ್ಶನ ತೋರಿರುವ ದೇಶೀಯ ಕ್ರಿಕೆಟ್ ದಿಗ್ಗಜ ಚಂದ್ರಕಾಂತ್ ಪಂಡಿತ್, ಐಪಿಎಲ್’ನಲ್ಲಿ (Indian Premier League – IPL) ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡದ ಹೊಸ ಮುಖ್ಯ ಕೋಚ್ ಆಗಿ ನೇಮಕ ಗೊಂಡಿದ್ದಾರೆ. ಇದುವರೆಗೆ ಕೆಕೆಆರ್ ಕೋಚ್ ಆಗಿದ್ದ ನ್ಯೂಜಿಲೆಂಡ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ ಇಂಗ್ಲೆಂಡ್ ತಂಡದ ಕೋಚ್ ಆಗಿರುವ ಕಾರಣ, ಕೋಲ್ಕತಾ ತಂಡಕ್ಕೆ ಚಂದ್ರಕಾಂತ್ ಪಂಡಿತ್ (Chandrakant Pandit) ಅವರನ್ನು ಹೆಡ್ ಕೋಚ್ ಕೆಕೆಆರ್ ಫ್ರಾಂಚೈಸಿ ನೇಮಕ ಮಾಡಿದೆ.

ಚಂದ್ರಕಾಂತ್ ಪಂಡಿತ್ ಅವರದ್ದು ದೇಶೀಯ ಕ್ರಿಕೆಟ್’ನಲ್ಲಿ ದೊಡ್ಡ ಹೆಸರು. ಆಟಗಾರನಾಗಿ ರಣಜಿ ಟ್ರೋಫಿ ಗೆಲ್ಲಲು ವಿಫಲರಾಗಿದ್ದ 60 ವರ್ಷದ ಪಂಡಿತ್, ಕೋಚ್ ಆಗ ಆರು ರಣಜಿ ಟ್ರೋಫಿಗಳನ್ನು ಗೆದ್ದಿದ್ದಾರೆ. ಈ ವರ್ಷ ಮಧ್ಯ ಪ್ರದೇಶ ತಂಡದ ಕೋಚ್ ಆಗಿ ಮೊದಲ ಬಾರಿ ರಣಜಿ ಟ್ರೋಫಿ ಗೆಲ್ಲಲು ಕಾರಣರಾಗಿದ್ದರು. ಚಂದ್ರಕಾಂತ್ ಪಂಡಿತ್ ಕೋಚ್ ಆಗಿದ್ದಾಗ ಮುಂಬೈ ತಂಡ 2002-03, 2003-04 ಹಾಗೂ 2015-16ರಲ್ಲಿ ರಣಜಿ ಟ್ರೋಫಿ ಗೆದ್ದಿತ್ತು. ನಂತರ ವಿದರ್ಭ ತಂಡದ ಚಂದ್ರಕಾಂತ್ ಪಂಡಿತ್ ಗರಡಿಯಲ್ಲಿ 2017-18 ಹಾಗೂ 2018-19ರಲ್ಲಿ ಸತತ ಎರಡು ಬಾರಿ ರಣಜಿ ಟ್ರೋಫಿ ಮುಡಿಗೇರಿಸಿಕೊಂಡಿತ್ತು. ಈ ಅಮೋಘ ಸಾಧನೆಗಾಗಿ ಈಗ ಐಪಿಎಲ್’ನಲ್ಲಿ ಕೆಕೆಆರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಒದಗಿ ಬಂದಿದೆ.

2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ, 2021ರಲ್ಲಿ ಫೈನಲ್ ತಲುಪಿ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟಿತ್ತು. 2022ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು. ದೇಶೀಯ ಕ್ರಿಕೆಟ್’ನಲ್ಲಿ ಅಪಾರ ಅನುಭವ ಹೊಂದಿರುವ ಚಂದ್ರಕಾಂತ್ ಪಂಡಿತ್ ಪ್ರಥಮದರ್ಜೆ ಕ್ರಿಕೆಟ್’ನಲ್ಲಿ 138 ಪಂದ್ಯಗಳಿಂದ 22 ಶತಕಗಳ ಸಹಿತ 8,209 ರನ್ ಕಲೆ ಹಾಕಿದ್ದಾರೆ.

ರಣಜಿ ಟ್ರೋಫಿ ವಿನ್ನಿಂಗ್ ಕೋಚ್: ಚಂದ್ರಕಾಂತ್ ಪಂಡಿತ್ (KKR Head Coach Chandrakant Pandit appointed as Kolkata Knight Riders Coach IPL)


ಮುಂಬೈ: 2002-03, 2003-04, 2015-16
ವಿದರ್ಭ: 2017-18, 2018-19
ಮಧ್ಯಪ್ರದೇಶ: 2021-22

ಇದನ್ನೂ ಓದಿ : KL Rahul : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಜಿಂಬಾಬ್ವೆ ಯಾಕೆ ಸ್ಪೆಷಲ್ ಗೊತ್ತಾ ?

ಇದನ್ನೂ ಓದಿ : Yuvraj Singh comeback : ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಶ್ವಕಪ್ ಹೀರೋ, ಕಂಬ್ಯಾಕ್ ಸುಳಿವು ಕೊಟ್ಟ ಯುವರಾಜ್ ಸಿಂಗ್

KKR Head Coach Chandrakant Pandit appointed as Kolkata Knight Riders Coach IPL

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular