KKR Vs SRH IPL 2024 Qualifier-1 : ಅಹ್ಮದಾಬಾದ್: ಐಪಿಎಲ್-2024 ಟೂರ್ನಿಯ (IPL 2024) ಮೊದಲ ಕ್ವಾಲಿಫೈಯರ್ ಪಂದ್ಯ (IPL Qualifier-1) ಇಂದು (ಮಂಗಳವಾರ) ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, 2 ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಮತ್ತು ಸನ್ ರೈಸರ್ಸ್ ಹೈದರಾಬಾದ್ (Sunrisers Hyderaad) ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯವನ್ನು ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದ್ರೆ, ಸೋತ ತಂಡಕ್ಕೆ ಫೈನಲ್ ತಲುಪಲು ಮತ್ತೊಂದು ಅವಕಾಶವಿದೆ. ಲೀಗ್ ಹಂತದಲ್ಲಿ ಕೆಕೆಆರ್ ಆಡಿರುವ 14 ಪಂದ್ಯಗಳಲ್ಲಿ 9 ಗೆಲುವು, 3 ಸೋಲು ಹಾಗೂ ಒಂದು ನೋ ರಿಸಲ್ಟ್’ನೊಂದಿಗೆ ಒಟ್ಟು 20 ಅಂಕ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. ಮತ್ತೊಂದೆಡೆ ಸನ್ ರೈಸರ್ಸ್ ಹೈದರಾಬಾದ್ 14 ಪಂದ್ಯಗಳಲ್ಲಿ 8 ಗೆಲುವು, 5 ಸೋಲು ಮತ್ತು ಒಂದು ನೋ ರಿಸಲ್ಟ್ ಫಲಿತಾಂಶದೊಂದಿಗೆ 17 ಅಂಕ ಗಳಿಸಿ 2ನೇ ಸ್ಥಾನ ಪಡೆದಿತ್ತು.
ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣಸಾಡಲಿವೆ. ಇಲ್ಲಿ ಸೋಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಬೇಕಿದೆ. ಮೇ 22ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ಮಧ್ಯೆ ಅಹ್ಮದಾಬಾದ್’ನಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದ ತಂಡ 2ನೇ ಕ್ವಾಲಿಫೈಯರ್’ಗೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ : 1% ಚಾನ್ಸ್, 99% ನಂಬಿಕೆ.. ಭರವಸೆಗಳೇ ಬತ್ತಿ ಹೋಗಿದ್ದವರ ಎದೆಯಲ್ಲಿ ಗೆಲುವಿನ ಕಿಚ್ಚು ಹೊತ್ತಿಸಿದ ಧೀರನೊಬ್ಬನ ಕಥೆ..!
ಲೀಗ್ ಹಂತದಲ್ಲಿ ಕೆಕೆಆರ್ ಮತ್ತು ಹೈದರಾಬಾದ್ ಒಮ್ಮೆ ಮುಖಾಮುಖಿಯಾಗಿದ್ದು, ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ 4 ರನ್’ಗಳ ರೋಚಕ ಗೆಲುವು ಸಾಧಿಸಿತ್ತು. ಕೋಲ್ಕತಾ ನೈಟ್ ರೈಡರ್ಸ್ ತಂಡ 2012 ಮತ್ತು 2014ರಲ್ಲಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ್ರೆ, ಸನ್ ರೈಸರ್ಸ್ ಹೈದರಾಬಾದ್ 2016ರಲ್ಲಿ ಚಾಂಪಿಯನ್ ಆಗಿತ್ತು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ತಂಡ ಐಪಿಎಲ್ ಪ್ರಶಸ್ತಿ ಗೆದ್ದಿತ್ತು.
ಇದನ್ನೂ ಓದಿ : Chris Gayle Play For RCB Next Year : ಮುಂದಿನ ವರ್ಷ ಆರ್’ಸಿಬಿ ಪರ ಆಡ್ತಾರಾ ಕ್ರಿಸ್ ಗೇಲ್ ? ಗೇಲ್’ಗೆ ಬಿಗ್ ಆಫರ್ ಕೊಟ್ಟ ಕೊಹ್ಲಿ!
ಐಪಿಎಲ್-2024: ಮೊದಲ ಕ್ವಾಲಿಫೈಯರ್
ಕೋಲ್ಕತಾ ನೈಟ್ ರೈಡರ್ಸ್ Vs ಸನ್ ರೈಸರ್ಸ್ ಹೈದರಾಬಾದ್
ಯಾವಾಗ: ಮೇ 21, 2024 (ಮಂಗಳವಾರ)
ಎಲ್ಲಿ: ನರೇಂದ್ರ ಮೋದಿ ಕ್ರೀಡಾಂಗಣ, ಅಹ್ಮದಾಬಾದ್
ಎಷ್ಟು ಗಂಟೆಗೆ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೋ ಸಿನಿಮಾ

ಕೋಲ್ಕತಾ ನೈಟ್ ರೈಡರ್ಸ್ ಸಂಭಾವ್ಯ XI:
1. ಸುನಿಲ್ ನರೈನ್, 2. ರಹಮನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), 3. ಶ್ರೇಯಸ್ ಅಯ್ಯರ್ (ನಾಯಕ), 4. ವೆಂಕಟೇಶ್ ಅಯ್ಯರ್, 5. ನಿತೀಶ್ ರಾಣಾ, 6. ರಿಂಕು ಸಿಂಗ್, 7. ಆ್ಯಂಡ್ರೆ ರಸೆಲ್, 8. ರಮಣ್ದೀಪ್ ಸಿಂಗ್, 9. ಮಿಚೆಲ್ ಸ್ಟಾರ್ಕ್, 10. ವೈಭವ್ ಅರೋರ, 11. ಹರ್ಷಿತ್ ರಾಣಾ 12. ವರುಣ್ ಚಕ್ರವರ್ತಿ (ಇಂಪ್ಯಾಕ್ಟ್ ಪ್ಲೇಯರ್)
ಸನ್ ರೈಸರ್ಸ್ ಹೈದರಾಬಾದ್ ಸಂಭಾವ್ಯ XI:
1. ಟ್ರಾವಿಸ್ ಹೆಡ್ (ಇಂಪ್ಯಾಕ್ಟ್ ಪ್ಲೇಯರ್) 2. ಅಭಿಷೇಕ್ ಶರ್ಮಾ, 3. ರಾಹುಲ್ ತ್ರಿಪಾಠಿ, 4. ನಿತೀಶ್ ಕುಮಾರ್ ರೆಡ್ಡಿ, 5. ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), 6. ಶಹಬಾಜ್ ಅಹ್ಮದ್, 7. ಅಬ್ದುಲ್ ಸಮದ್, 8. ಪ್ಯಾಟ್ ಕಮಿನ್ಸ್ (ನಾಯಕ), 9. ಸನ್ವೀರ್ ಸಿಂಗ್, 10. ಭುವನೇಶ್ವರ್ ಕುಮಾರ್, 11. ವಿಜಯಕಾಂತ್ ವಿಯಸ್’ಕಾಂತ್, 12. ಟಿ.ನಟರಾಜನ್.
KKR Vs SRH IPL 2024 Qualifier-1 Today First Qualifier Match Winner Directly to Final, Loser Second Chance