ಬೆಂಗಳೂರು: KL Rahul Excusive : ಐಪಿಎಲ್ (IPL 2023) ವೇಳೆ ಸ್ನಾಯು ಸೆಳೆತದ ಗಾಯಕ್ಕೊಳಗಾಗಿ ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್, ಕನ್ನಡಿಗ ಕೆಎಲ್ ರಾಹುಲ್ (KL Rahul) ಮುಂದಿನ ವಾರದಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy – NCA) ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಕ್ನೋದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಫೀಲ್ಡಿಂಗ್ ನಡೆಸುವ ವೇಳೆ ಕೆ.ಎಲ್ ರಾಹುಲ್ ಬಲ ತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದರು. ನಂತರ ಐಪಿಎಲ್ ಟೂರ್ನಿಗೆ ಅಲಭ್ಯರಾಗಿದ್ದ ರಾಹುಲ್, ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾದ ನಂತರ 10 ದಿನಗಳ ಕಾಲ ಲಂಡನ್’ನಲ್ಲೇ ಉಳಿದುಕೊಂಡಿದ್ದ ರಾಹುಲ್, ಕಳೆದ ವಾರ ಮುಂಬೈಗೆ ವಾಪಸ್ಸಾಗಿದ್ದರು. ಸದ್ಯ ಮುಂಬೈನಲ್ಲಿರುವ ರಾಹುಲ್ ರೆಸ್ಟೋರೆಂಟ್ ಒಂದಕ್ಕೆ ತೆರಳುತ್ತಿರುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.
ಈ ವಾರಾಂತ್ಯದಲ್ಲಿ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್ ಮುಂದಿನ ವಾರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಟ್ರೈನಿಂಗ್ ಆರಂಭಿಸಲಿದ್ದಾರೆ. ಶಸ್ತ್ರಚಿಕಿತ್ಸೆಯ ಕಾರಣದಿಂದ 31 ವರ್ಷದ ರಾಹುಲ್ ಲಂಡನ್’ನ ಓವಲ್ ಮೈದಾನದಲ್ಲಿ ಬುಧವಾರ ಆರಂಭವಾಗಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World test championship final 2023 – WTC final 2023) ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. WTC ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ರಾಹುಲ್ ಅವರ ಚೇತರಿಕೆಗೆ ಕನಿಷ್ಠ 2 ತಿಂಗಳು ಹಿಡಿಯಲಿರುವ ಕಾರಣ ಜುಲೈನಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯರಾಗಲಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಹುಲ್ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿದ್ದು, ಸೆಪ್ಟೆಂಬರ್ 2ರಿಂದ 17ರವರೆಗೆ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ. ಭಾರತ ಪರ ಟೆಸ್ಟ್ ಕ್ರಿಕೆಟ್’ನಲ್ಲಿ ಇನ್ನಿಂಗ್ಸ್ ಆರಂಭಿಸುವ ಕೆ.ಎಲ್ ರಾಹುಲ್, ಏಕದಿನ ಕ್ರಿಕೆಟ್’ನಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ.
ಇದನ್ನೂ ಓದಿ : Rashid Khan : ಐಪಿಎಲ್ ಮುಗಿದ ಬೆನ್ನಲ್ಲೇ ಅಡುಗೆ ಭಟ್ಟನಾದ ಆಫ್ಘನ್ ಸ್ಪಿನ್ ಮಾಂತ್ರಿಕ ರಶೀನ್ ಖಾನ್
ಇದನ್ನೂ ಓದಿ : ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್, ಭಾರತ Vs ವೆಸ್ಟ್ ಇಂಡೀಸ್ ಸರಣಿ ಜಿಯೋ ಸಿನಿಮಾದಲ್ಲಿ ಫ್ರೀ ಸ್ಟ್ರೀಮಿಂಗ್
KL Rahul Excusive Practice Start in National Cricket Academy NCA