KL Rahul : ರೂಮರ್ಸ್’ಗಳಿಗೆ ಬ್ರೇಕ್ ಹಾಕಿದ ರಾಹುಲ್, ಎನ್‌ಸಿಎನಲ್ಲಿ ಶುರು ಕನ್ನಡಿಗನ ಬ್ಯಾಟಿಂಗ್ ತಾಲೀಮು

ಬೆಂಗಳೂರು : ಭಾರತ ತಂಡಕ್ಕೆ ಕಂಬ್ಯಾಕ್ ಮಾಡುವ ಗುರಿಯಲ್ಲಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) , ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (Nataional Cricket Academy – NCA) ಬ್ಯಾಟಿಂಗ್ ಅಭ್ಯಾಸ ಆರಂಭಿಸುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಯಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ. ಅದಕ್ಕೂ ಮೊದಲು ಏಷ್ಯಾ ಕಪ್ ಟೂರ್ನಿಯನ್ನು ರಾಹುಲ್ ಟಾರ್ಗೆಟ್ ಮಾಡಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ತಾಲೀಮು ಶುರು ಮಾಡಿದ್ದಾರೆ.

ರಾಹುಲ್ ಏಷ್ಯಾ ಕಪ್ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂಬ ಊಹಾಪೋಹಗಳು ಕೇಳಿ ಬಂದಿದ್ದವು. ಆದರೆ ಬ್ಯಾಟಿಂಗ್ ಅಭ್ಯಾಸ ಆರಂಭಿಸುವ ಮೂಲಕ ತಾವು ಫಿಟ್ ಆಗುತ್ತಿರುವ ಸಂದೇಶವನ್ನು ರಾಹುಲ್ ರವಾನಿಸಿದ್ದಾರೆ. ಟೀಮ್ ಇಂಡಿಯಾ ಏಕದಿನ ತಂಡದ ಮಧ್ಯಮ ಕ್ರಮಾಂಕದ ಆಧಾರಸ್ಥಂಭವಾಗಿರುವ ಕೆ.ಎಲ್ ರಾಹುಲ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಲಭ್ಯರಾಗುವ ಸಾಧ್ಯತೆಯಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ನವೆಂಬರ್ 23ರವರೆಗೆ ಭಾರತದ ಆತಿಥ್ಯದಲ್ಲೇ ನಡೆಯಲಿದ್ದು, ವಿಶ್ವಕಪ್ ತಂಡದಲ್ಲಿ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

31 ವರ್ಷದ ಕೆ.ಎಲ್ ರಾಹುಲ್ ಕಳೆದ ಐಪಿಎಲ್ ಟೂರ್ನಿಯ ವೇಳೆ ಬಲತೊಡೆಯ ಸ್ನಾಯು ಸೆಳೆತಕ್ಕೊಳಗಾಗಿ ಐಪಿಎಲ್ ಟೂರ್ನಿಯಿಂದ ಅರ್ಧದಲ್ಲೇ ಹೊರ ಬಿದ್ದಿದ್ದರು. ನಂತರ ಲಂಡನ್’ನಲ್ಲಿ ರಾಹುಲ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಹೀಗಾಗಿ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ (ICC World Test Championship Final – WTC) ಪಂದ್ಯಕ್ಕೆ ರಾಹುಲ್ ಅಲಭ್ಯರಾಗಿದ್ದರು.

ಇದನ್ನೂ ಓದಿ : VVS Laxman : ಏಷ್ಯನ್ ಗೇಮ್ಸ್’ನಲ್ಲಿ ಆಡಲಿರುವ ಯಂಗ್ ಇಂಡಿಯಾಗೆ ವಿವಿಎಸ್ ಲಕ್ಷ್ಲ್ಮಣ್ ಕೋಚ್

ಇದನ್ನೂ ಓದಿ : Virat Kohli : ವಿಕಿಪೀಡಿಯಾದಲ್ಲೂ ವಿರಾಟ್ ಕೊಹ್ಲಿ ದಾಖಲೆ, ಕಿಂಗ್ ಕೊಹ್ಲಿ ಜನಪ್ರಿಯತೆ ಮುಂದೆ ಧೋನಿಯೂ ಇಲ್ಲ, ಕ್ರಿಕೆಟ್ ದೇವರೂ ಇಲ್ಲ!

ವೆಸ್ಟ್ ಇಂಡೀಸ್ ಪ್ರವಾಸವನ್ನೂ ತಪ್ಪಿಸಿಕೊಂಡಿರುವ ರಾಹುಲ್ ಏಷ್ಯಾ ಕಪ್ ಟೂರ್ನಿಗೆ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಗುರಿ ಹೊಂದಿದ್ದಾರೆ. ಏಷ್ಯಾ ಕಪ್ ಟೂರ್ನಿ (Asia Cup 2023) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ನಡೆಯಲಿದೆ. ಏಷ್ಯಾ ಕಪ್ ಬೆನ್ನಲ್ಲೇ ಭಾರತ ತಂಡ ತವರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡಲಿದ್ದು, ಟೀಮ್ ಇಂಡಿಯಾ ಯಶಸ್ಸಿನಲ್ಲಿ ಕೆ.ಎಲ್ ರಾಹುಲ್ ಅವರ ಪಾತ್ರ ವಿಶ್ವಕಪ್’ನಲ್ಲಿ ಮಹತ್ವದ್ದಾಗಲಿದೆ.

KL Rahul: Rahul, who broke the rumours, started his batting training at NCA

Comments are closed.