ಏಕಕಾಲದಲ್ಲಿ NCAನಲ್ಲಿ ಪಂಚ ಪಾಂಡವರು.. ಇದು ಪುನಶ್ಚೇತನ ಶಿಬಿರವೋ, ಗಾಯಾಳುಗಳ ಆಸ್ಪತ್ರೆಯೋ ?


ಬೆಂಗಳೂರು: ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (National Cricket Academy – NCA) ಆಟಗಾರರ ಪುನಶ್ಚೇತನಕ್ಕೆ ನೆರವಾಗುವ ಸಂಸ್ಥೆ (rehabilitation Centre). ಭಾರತ ತಂಡದ ಆಟಗಾರರು ಯಾರೇ ಗಾಯಗೊಂಡರೂ ಮೊದಲು ಬರುವುದೇ ಎನ್’ಸಿಎಗೆ. ಅಲ್ಲಿ ಆಟಗಾರರು ಪುನಶ್ಚೇತನ ಶಿಬಿರದಲ್ಲಿ (rehabilitation camp) ಪಾಲ್ಗೊಂಡು ಗಾಯದಿಂದ ಚೇತರಿಸಿಕೊಂಡ ನಂತರ ಭಾರತ ಕಂಡಕ್ಕೆ ಕಂಬ್ಯಾಕ್ ಮಾಡುತ್ತಾರೆ.

ಸದ್ಯ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಒಟ್ಟು ಐವರು ಆಟಗಾರರು ಏಕಕಾಲದಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಸ್ನಾಯು ಸೆಳೆತಕ್ಕೆ ಶಸ್ತ್ರಚಿಕಿತ್ಸೆಗೊಳಲಾಗಿ ಚೇತರಿಸಿಕೊಳ್ಳುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್ (KL Rahul), ರಸ್ತೆ ಅಪಘಾತದಲ್ಲಿ ಮೊಣಕಾಲಿಗೆ ಗಂಭೀರ ಗಾಯಗೊಂಡು ಶಸ್ತ್ರಚಿಕಿತ್ಸೆಯ ನಂತರ ಚೇತರಿಕೆಯ ಹಾದಿಯಲ್ಲಿರುವ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant), ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಗೊಳಗಾಗಿ ಚೇತರಿಸಿಕೊಳ್ಳುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಕರ್ನಾಟಕದ ಯುವ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ (Prasidh Krishna) ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಐಪಿಎಲ್ ಟೂರ್ನಿಯ ವೇಳೆ ಬಲ ತೊಡೆಯ ಸ್ನಾಯು ಸೆಳೆತಕ್ಕೊಳಗಾಗಿದ್ದ ಕೆ.ಎಲ್ ರಾಹುಲ್, ಕಳೆದ ತಿಂಗಳು ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಶಸ್ತ್ರಚಿಕಿತ್ಸೆಗೊಳಗಾದ ನಂತರ 10 ದಿನಗಳ ಕಾಲ ಲಂಡನ್’ನಲ್ಲೇ ಉಳಿದುಕೊಂಡಿದ್ದ ರಾಹುಲ್, ಮೇ ತಿಂಗಳ ಅಂತ್ಯದಲ್ಲಿ ಮುಂಬೈಗೆ ವಾಪಸ್ಸಾಗಿದ್ದರು. ಕಳೆದ 15 ದಿನಗಳಿಂದ ಮುಂಬೈನಲ್ಲೇ ಇದ್ದ ರಾಹುಲ್, ಬುಧವಾರ ಬೆಂಗಳೂರಿಗೆ ವಾಪಸ್ಸಾಗಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಟ್ರೈನಿಂಗ್ ಆರಂಭಿಸಿದ್ದಾರೆ. ಅದಕ್ಕೂ ಮೊದಲೇ ಎನ್’ಸಿಎಗೆ ಬಂದಿರುವ ಶ್ರೇಯಸ್ ಅಯ್ಯರ್, ರಿಷಭ್ ಪಂತ್, ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಚೇತರಿಕೆಯ ಹಾದಿಯಲ್ಲಿದ್ದಾರೆ.

ಆದರೆ ಈ ಐವರೂ ಆಟಗಾರರು ಮುಂದಿನ ತಿಂಗಳು ಆರಂಭವಾಗಲಿರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಅಲಭ್ಯರಾಗಲಿದ್ದಾರೆ. ರಾಹುಲ್ ಅವರ ಚೇತರಿಕೆಗೆ ಕನಿಷ್ಠ 2 ತಿಂಗಳು ಹಿಡಿಯಲಿರುವ ಕಾರಣ ಆಗಸ್ಟ್ ತಿಂಗಳಲ್ಲಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡುವ ಸಾಧ್ಯತೆಗಳಿದ್ದು, ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಆಡಲಿದ್ದಾರೆ.

ಇದನ್ನೂ ಓದಿ : Virat Kohli : Big Exclusive: ಭಾರತ ಟೆಸ್ಟ್ ತಂಡಕ್ಕೆ ಮತ್ತೆ ಕಿಂಗ್ ಕೊಹ್ಲಿ ಕ್ಯಾಪ್ಟನ್, ಸದ್ಯದಲ್ಲೇ ಘೋಷಣೆ?

ಇದನ್ನೂ ಓದಿ : Asia Cup 2023 : ಬಿಸಿಸಿಐ ಹಠದ ಮುಂದೆ ನಡೆಯಲಿಲ್ಲ ಪಾಕ್ ಆಟ, ಶ್ರೀಲಂಕಾದಲ್ಲಿ ಭಾರತ Vs ಪಾಕ್ ಮ್ಯಾಚ್

Comments are closed.