Asia Cup 2023 : ಬಿಸಿಸಿಐ ಹಠದ ಮುಂದೆ ನಡೆಯಲಿಲ್ಲ ಪಾಕ್ ಆಟ, ಶ್ರೀಲಂಕಾದಲ್ಲಿ ಭಾರತ Vs ಪಾಕ್ ಮ್ಯಾಚ್

ಬೆಂಗಳೂರು: ಏಷ್ಯಾ ಕಪ್ ಟೂರ್ನಿಯನ್ನು (Asia Cup 2023) ಪಾಕಿಸ್ತಾನದಲ್ಲೇ ನಡೆಸಬೇಕು, ಭಾರತ ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಪಂದ್ಯವಾಡಬೇಕೆಂಬ ಪಾಕ್ ಕ್ರಿಕೆಟ್ ಮಂಡಳಿಯ ಹಠಕ್ಕೆ ಸೋಲಾಗಿದೆ. ಬಿಸಿಸಿಐ (BCCI) ಹಠದ ಮುಂದೆ ಪಾಕ್ ಕ್ರಿಕೆಟ್ ಮಂಡಳಿಯ ಆಟ ನಡೆದಿಲ್ಲ. ಏಷ್ಯಾ ಕಪ್ 2023 ಟೂರ್ನಿಯ ಭಾರತ Vs ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯಕ್ಕೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.

ಏಷ್ಯಾ ಕಪ್ ಟೂರ್ನಿಯ 4 ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ರೆ, ಭಾರತ ಮತ್ತು ಪಾಕ್ ಪಂದ್ಯಗಳು ಸೇರಿದಂತೆ ಒಟ್ಟು 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ ಎಂದು ಏಷ್ಯನ್ ಕ್ರಿಕೆಟ್ ಸಂಸ್ಥೆ (Asian Cricket Council) ತಿಳಿಸಿದೆ. ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ ಎ ನಲ್ಲಿ ನೇಪಾಳ ತಂಡದ ಜೊತೆ ಕಾಣಿಸಿ ಕೊಂಡಿವೆ. ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡಗಳು ಗ್ರೂಪ್ ಬಿನಲ್ಲಿ ಸ್ಥಾನ ಪಡೆದಿವೆ.

ಇದನ್ನೂ ಓದಿ : Arjun Tendulkar : ಸಚಿನ್ ತೆಂಡೂಲ್ಕರ್ ಮಗನ ಕ್ರಿಕೆಟ್ ಬದುಕಿಗೆ ಸಿಕ್ತು ಬಿಗ್ ಟ್ವಿಸ್ಟ್

Asia Cup 2023 : ಏಷ್ಯಾ ಕಪ್ 2023 ಟೂರ್ನಿಯ ಬಗ್ಗೆ ಒಂದಿಷ್ಟು ಮಾಹಿತಿ:

  • ಏಷ್ಯಾ ಕಪ್ ಏಕದಿನ ಟೂರ್ನಿ ಆಗಸ್ಟ್ 31ರಂದು ಆರಂಭವಾಗಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 17ರಂದು ಶ್ರೀಲಂಕಾದಲ್ಲಿ ನಡೆಯಲಿದೆ.
  • ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡ ಭಾಗವಹಿಸಲಿದೆ.
  • ಶ್ರೀಲಂಕಾ, ನೇಪಾಳ, ಅಫ್ಘಾನಿಸ್ತಾ ಮತ್ತು ಬಾಂಗ್ಲಾದೇಶ ವಿರುದ್ಧದ ಲೀಗ್ ಪಂದ್ಯಗಳನ್ನು ಪಾಕಿಸ್ತಾನ ತವರು ನೆಲದಲ್ಲಿ ಆಡಲಿದೆ.
  • ಭಾರತ Vs ಪಾಕಿಸ್ತಾನ ಪಂದ್ಯ ಸೇರಿ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ
  • ಆರು ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಪ್ರತೀ ಗುಂಪಿನ ಟಾಪ್ 2 ತಂಡಗಳು ಸೂಪರ್-4 ಹಂತಕ್ಕೆ ಎಂಟ್ರಿ.
  • ಗ್ರೂಪ್ ಎ: ಭಾರತ, ಪಾಕಿಸ್ತಾನ, ನೇಪಾಳ.
  • ಗ್ರೂಪ್ ಬಿ: ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ.
  • ಏಷ್ಯಾ ಕಪ್ ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 13 ಪಂದ್ಯಗಳು.

ಇದನ್ನೂ ಓದಿ : Virat Kohli : Big Exclusive: ಭಾರತ ಟೆಸ್ಟ್ ತಂಡಕ್ಕೆ ಮತ್ತೆ ಕಿಂಗ್ ಕೊಹ್ಲಿ ಕ್ಯಾಪ್ಟನ್, ಸದ್ಯದಲ್ಲೇ ಘೋಷಣೆ ?

Comments are closed.