ಭಾನುವಾರ, ಏಪ್ರಿಲ್ 27, 2025
HomeSportsCricketICC WTC Final 2023 : ಟೀಂ ಇಂಡಿಯಕ್ಕೆ ಕೆಎಸ್ ಭರತ್ ಅಥವಾ ಇಶಾನ್...

ICC WTC Final 2023 : ಟೀಂ ಇಂಡಿಯಕ್ಕೆ ಕೆಎಸ್ ಭರತ್ ಅಥವಾ ಇಶಾನ್ ಕಿಶನ್ ವಿಕೆಟ್‌ ಕೀಪರ್‌ ?

- Advertisement -

ನವದೆಹಲಿ: ICC WTC Final 2023 ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ಇದೀಗ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಸಿದ್ದರಾಗಬೇಕಾಗಿದೆ. ಜೂನ್ 7 ರಿಂದ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೀಂ ಇಂಡಿಯಾ ಸೆಣೆಸಲಿದೆ. ಐಪಿಎಲ್‌ನಲ್ಲಿ ಕೆ.ಎಲ್.ರಾಹುಲ್‌ ಗಾಯಗೊಂಡ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ದದ ಫೈನಲ್‌ ಪಂದ್ಯದಲ್ಲಿ ವಿಕೆಟ್‌ ಹಿಂದೆ ಯಾರು ಇರ್ತಾರೆ ಅನ್ನೋ ಕುರಿತು ಚರ್ಚೆ ನಡೆಯುತ್ತಿದ್ದು, ಟೀಂ ಇಂಡಿಯಾಕ್ಕೆ ಇಶಾನ್‌ ಕಿಶನ್‌ ಹಾಗೂ ಕೆಎಸ್ ಭರತ್‌ ( KS Bharat vs Ishan Kishan ) ಅವರ ಹೆಸರು ಕೇಳಿಬಂದಿದೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆಎಲ್‌ ರಾಹುಲ್‌ ಫೀಲ್ಡಿಂಗ್‌ ಮಾಡುವ ವೇಳೆಯಲ್ಲಿ ಗಾಯಗೊಂಡಿದ್ದರು. ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ರಾಹುಲ್‌ ಇನ್ನಷ್ಟು ದಿನಗಳ ಕಾಲ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ಆಯ್ಕೆಯಾಗಿರುವ ಕೆಎಲ್‌ ರಾಹುಲ್‌ ಬದಲಿ ಆಯ್ಕೆ ಯಾರು ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಟೀಂ ಇಂಡಿಯಾದ ಕೀಪರ್‌ ರಿಷಬ್‌ ಪಂತ್‌ ಅಪಘಾತದಿಂದ ಗಾಯಗೊಂಡಿದ್ದು, ಸದ್ಯಕ್ಕೆ ಟೀಂ ಇಂಡಿಯಾಕ್ಕೆ ಮರಳುವುದು ಅನುಮಾನ. ಇನ್ನೊಂದೆಡೆಯಲ್ಲಿ ಹಲವು ಹೆಸರುಗಳು ವಿಕೆಟ್‌ ಕೀಪರ್‌ ಸ್ಥಾನಕ್ಕೆ ಕೇಳಿಬರುತ್ತಿದೆ.

ICC WTC Final 2023 : ಇಬ್ಬರಲ್ಲಿ ಯಾರಿಗೆ ಮಣೆ ಹಾಕುತ್ತೆ ಟೀಂ ಇಂಡಿಯಾ

ಮುಂಬೈ ಇಂಡಿಯನ್ಸ್‌ ತಂಡ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ ಸ್ಪೋಟಕ ಆಟಗಾರ. ಐಪಿಎಲ್‌ ಸೇರಿದಂತೆ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದು, ಭರವಸೆಯ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನೊಂದೆಡೆಯಲ್ಲಿ ಈಗಾಗಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಕೆಎಸ್‌ ಭರತ್‌ ಸ್ವಲ್ಪ ಪ್ರಮಾಣದಲ್ಲಿ ಅನುಭವ ಹೊಂದಿದ್ದಾರೆ. ಅದ್ರಲ್ಲೂ ಇಂಗ್ಲೆಂಡ್‌ನ ಪರಿಸ್ಥಿತಿಯನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ. ಹೀಗಾಗಿ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ( ICC WTC Final 2023) ಭರತ್‌ ಸ್ಪೆಷಲಿಸ್ಟ್‌ ಆಟಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ನಯನ್‌ ಮೋಂಗಿಯಾ ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್‌ ಸ್ಪೋರ್ಟ್‌ ಜೊತೆ ಮಾತನಾಡಿರುವ ನಯನ್‌ ಮೊಂಗಿಯಾ ಅವರು, ಕೇವಲ ಒಂದು ಕೆಟ್ಟ ಪಂದ್ಯವನ್ನು ಆಡಿದ ಕಾರಣಕ್ಕೆ ಆತ ಕೆಟ್ಟ ವಿಕೆಟ್‌ ಕೀಪರ್‌ ಅನಿಸಿಕೊಳ್ಳುವುದಿಲ್ಲ. ಭರತ್‌ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ. ಭಾರತ ತಂಡದಲ್ಲಿ ಸೀಮಿತ ಅವಕಾಶ ಪಡೆದಿದ್ದರೂ ಕೂಡ ತಂಡದಲ್ಲಿ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲಿದ್ದಾರೆ ಎಂದಿದ್ದಾರೆ.

ಕೆಎಸ್‌ ಭರತ್ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತಕ್ಕಾಗಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಈ ಸರಣಿಯಲ್ಲಿ ಇಶನ್‌ ಕಿಶಾನ್‌ ತಂಡದಲ್ಲಿ ಸ್ಥಾನ ಪಡೆದಿದ್ದರೂ ಕೂಡ ಯಾವುದೇ ಪಂದ್ಯದಲ್ಲಿಯೂ ಕಣಕ್ಕೆ ಇಳಿದಿರಲಿಲ್ಲ. ಐಪಿಎಲ್ 2023 ರಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದ ಆಂಧ್ರಪ್ರದೇಶದ ಕೀಪರ್, ದೇಶದ ಅಗ್ರ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರು. ಭರತ್‌ ವಿಕೆಟ್‌ ಕೀಪಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರಬೇಕಾಗಿದೆ. ಇಂಗ್ಲೆಂಡ್‌ ಪಿಚ್‌ಗಳಲ್ಲಿ ಕೀಪಿಂಗ್‌ ಮಾಡುವುದು ವಿಶ್ವದ ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದಾಗಿದೆ ಎಂದು ಮೋಂಗಿಯಾ ತಿಳಿಸಿದ್ದಾರೆ.

ಇಂಗ್ಲೆಂಡ್‌ನ ಪಿಚ್‌ನಲ್ಲಿ ವಿಕೆಟ್‌ ಕೀಪಿಂಗ್‌ ಕೀಪರ್‌ಗೆ ಸಾಕಷ್ಟು ಸವಾಲುಗಳನ್ನು ನೀಡುತ್ತದೆ. ಚೆಂಡು ಸಾಕಷ್ಟು ಅಲುಗಾಡುತ್ತದೆ. ಅದ್ರಲ್ಲೂ ಮೊದಲಾರ್ಧದಲ್ಲಿ ಚೆಂಡು ತಿರುವು ಪಡೆದುಕೊಳ್ಳಲಿದೆ. ಪ್ರತೀ ಚೆಂಡಿನಲ್ಲಿಯೂ ವಿಕೆಟ್‌ ಕೀಪರ್‌ ಆದವರು ಎದ್ದೇಳಬೇಕು. ಎಲ್ಲಾ 90 ಓವರ್‌ಗಳಲ್ಲಿ ಈ ರೀತಿಯಾಗಿ ಕೀಪಿಂಗ್‌ ಮಾಡುವುದು ಕಷ್ಟದ ಕೆಲಸ. ಟೆಸ್ಟ್‌ ಸರಣಿಯಲ್ಲಿ ಡ್ಯೂಕ್ಸ್‌ ಚೆಂಡಿನೊಂದಿಗೆ ಆಡಲಿದೆ, ಕೂಕಬುರಾ ಚೆಂಡಿಗೆ ಹೋಲಿಕೆ ಮಾಡಿದ್ರೆ ಸ್ವಲ್ಪ ಕಷ್ಟ. ವೇಗದ ಎಸೆತಗಳು ನೇರವಾಗಿ ಬರುತ್ತವೆ. ಆದರೆ ಹೆಚ್ಚು ಸ್ವಿಂಗ್‌ ಆಗಲಿರುವುದು ಸವಾಲಿನ ಕೆಲಸ ಎಂದಿದ್ದಾರೆ. ಇದನ್ನೂ ಓದಿ :CSK vs GT IPL 2023 : ರವೀಂದ್ರ ಜಡೇಜಾ- ಡೆವೋನ್ ಕಾನ್ವೇ ಆಟ, ಚೆನ್ನೈ ತಂಡಕ್ಕೆ 5 ನೇ ಬಾರಿಗೆ IPL ಪ್ರಶಸ್ತಿ

ನಾವು ವಿಶ್ವಕಪ್ ಆಡಿದ್ದರಿಂದ ಅದು ಎಷ್ಟು ಕಷ್ಟ ಎಂದು ನನಗೆ ತಿಳಿದಿದೆ ಮತ್ತು ಅದು ನಿಜವಾಗಿಯೂ ನಿಮ್ಮ ಅಂಗೈಯನ್ನು ಬಡಿಯುತ್ತದೆ ಮತ್ತು ಅದು ನಿಜವಾಗಿಯೂ ನಿಮ್ಮ ಕೈಗವಸುಗಳನ್ನು ಹೊಡೆಯುತ್ತದೆ. ಇದು ಬೌಲರ್‌ಗಳಿಗೆ ಹೆಚ್ಚುವರಿ ಪ್ರಯೋಜನವಾಗಿದೆ ಏಕೆಂದರೆ ಚೆಂಡು ಹೆಚ್ಚು ಸಮಯದವರೆಗೆ ಕಠಿಣವಾಗಿರುತ್ತದೆ, ಎಂದು ಅವರು ಗಮನ ಸೆಳೆದಿದ್ದಾರೆ. ಇಶಾನ್‌ ಕಿಶನ್‌ ಐಪಿಎಲ್‌ ಪಂದ್ಯಾವಳಿಯಲ್ಲಿ ಬ್ಯಾಟಿಂಗ್‌ ಹಾಗೂ ಕೀಪಿಂಗ್‌ ಮೂಲಕ ಹೆಚ್ಚು ಗಮನ ಸೆಳೆದಿದ್ದರು. ಇನ್ನೊಂದೆಡೆಯಲ್ಲಿ ಕೆಎಸ್‌ ಭರತ್‌ ಈಗಾಗಲೇ ಒಂದು ಸರಣಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಟೀಂ ಇಂಡಿಯಾ ಯಾವ ಆಟಗಾರನಿಗೆ ಮಣೆ ಹಾಕಲಿದೆ ಅನ್ನೋದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ : ICC ODI World Cup 2023 : ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ Vs ಪಾಕಿಸ್ತಾನ ಪಂದ್ಯ, ಅಕ್ಟೋಬರ್ 5ರಿಂದ ವರ್ಲ್ಡ್ ಕಪ್ ಕಿಕ್ ಸ್ಟಾರ್ಟ್

ಹೆಚ್ಚಿನ ಕ್ರಿಕೆಟ್‌ ಸುದ್ದಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ

KS Bharat vs Ishan Kishan in Team India for ICC WTC Final 2023

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular