Electricity Bill Hike : ರಾಜ್ಯದ ಜನತೆಗೆ ವಿದ್ಯುತ್‌ ಶಾಕ್‌ : ಜುಲೈ 1 ರಿಂದ ಕರೆಂಟ್‌ ಬಿಲ್‌ ಹೆಚ್ಚಳ

ಬೆಂಗಳೂರು : Electricity Bill Hike: ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯ ಸರಕಾರ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಘೋಷಣೆ ಮಾಡಿತ್ತು. ಆದ್ರೆ ಇದರ ಬೆನ್ನಲ್ಲೇ ಕಾಂಗ್ರೆಸ್‌ ಸರಕಾರ ಕರ್ನಾಟಕದ ಜನತೆಗೆ ವಿದ್ಯುತ್‌ ಶಾಕ್‌ ಕೊಟ್ಟಿದೆ. ಪ್ರತೀ ಯೂನಿಟ್‌ಗೆ 70 ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದ್ದು, ಜುಲೈ 1 ರಿಂದಲೇ ಪರಿಷ್ಕೃತ ಆದೇಶ ಜಾರಿಗೆ ಬರಲಿದೆ.

ಎಪ್ರಿಲ್‌ ತಿಂಗಳಿನಲ್ಲೇ ಪ್ರತೀ ಯೂನಿಟ್‌ ಗೆ 70 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿತ್ತು. ಆದರೆ ಕರ್ನಾಟಕ ರಾಜ್ಯ ಚುನಾವಣೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ತಡೆಹಿಡಿಯಲಾಗಿತ್ತು. ಆದ್ರೀಗ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕೆಇಆರ್‌ಸಿ ವಿದ್ಯುತ್‌ ಬಿಲ್‌ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.

ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುತ್ತದೆ. ಗ್ರಾಹಕರು ಒಂದು ವರ್ಷದಲ್ಲಿ ಬಳಕೆ ಮಾಡಿರುವ ವಿದ್ಯುತ್‌ ನ ಸರಾಸರಿಯಲ್ಲಿ ಲೆಕ್ಕಹಾಕಿ ನಂತರದಲ್ಲಿ ಶೇ.೧೦ರಷ್ಟನ್ನು ಸೇರಿಸಿ ಗ್ರಾಹಕರಿಗೆ ಎಷ್ಟು ಯೂನಿಟ್‌ ಉಚಿತ ವಿದ್ಯುತ್‌ ಪಡೆಯಲಿದ್ದಾರೆ ಅನ್ನೋದನ್ನು ನಿರ್ಧಾರ ಮಾಡಲಾಗುತ್ತದೆ. 200 ಯೂನಿಟ್‌ ವರೆಗಿನ ವಿದ್ಯುತ್‌ ಬಳಸಿದರೆ ಮಾತ್ರವೇ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಉದಾಹರಣೆಗೆ ತಿಂಗಳಲ್ಲಿ 70,80,199 ಯೂನಿಟ್‌ ವಿದ್ಯುತ್‌ ಬಳಕೆ ಮಾಡಿದ್ದರೆ, ಅದಕ್ಕೆ ಶೇ.10 ರಷ್ಟನ್ನು ಹೆಚ್ಚಿಸಿ ನೋಡುತ್ತೇವೆ ಆಗ 200 ಯೂನಿಟ್‌ ಬಾರದಿದ್ರೆ ವಿದ್ಯುತ್‌ ಶುಲ್ಕ ಇರುವುದಿಲ್ಲ. ಆದರೆ ಈಗಾಗಲೇ ವಿದ್ಯುತ್‌ ಬಿಲ್‌ ಸಿದ್ದ ಪಡಿಸಿ ಗ್ರಾಹಕರಿಗೆ ನೀಡಿರುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಮುಂದಿನ ತಿಂಗಳು 1 ರಿಂದ ಜಾರಿಗೆ ತರಲಾಗುತ್ತದೆ. ಇದುವರೆಗೆ ಬಾಕಿ ಇರುವ ವಿದ್ಯುತ್‌ ಶುಲ್ಕವನ್ನು ಗ್ರಾಹಕರೇ ಪಾವತಿ ಮಾಡಬೇಕಾಗಿದೆ. ಇನ್ನು ಗೃಹಜ್ಯೋತಿ ಯೋಜನೆಯನ್ನು ಬಾಡಿಗೆದಾರರು ಕೂಡ ಪಡೆಯಬಹುದಾಗಿದೆ. ಬಾಡಿಗೆ ಕಟ್ಟಡದಲ್ಲಿ ಸಾಕಷ್ಟು ಮನೆಗಳಿದ್ದರೆ, ಕೇವಲ ಒಂದು ಮನೆಯವರು ಮಾತ್ರ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : Gruhalakshmi Scheme : ಗೃಹಲಕ್ಷೀ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನ : ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಇದನ್ನೂ ಓದಿ : Gruha Jyothi Scheme : ಬಾಡಿಗೆದಾರರಿಗೂ ಸಿಗುತ್ತಾ 200ಯೂನಿಟ್‌ ವಿದ್ಯುತ್‌ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

Electricity Bill Hike till july 1st in Karnataka KERC Order

Comments are closed.