ಮಂಗಳವಾರ, ಏಪ್ರಿಲ್ 29, 2025
HomeSportsCricketInteresting Virat Kohli tweet : ನಾನು ಬಿದ್ದರೇನಂತೆ..’’ ಕುತೂಹಲ ಮೂಡಿಸಿದ ವಿರಾಟ್ ಕೊಹ್ಲಿ ಟ್ವೀಟ್

Interesting Virat Kohli tweet : ನಾನು ಬಿದ್ದರೇನಂತೆ..’’ ಕುತೂಹಲ ಮೂಡಿಸಿದ ವಿರಾಟ್ ಕೊಹ್ಲಿ ಟ್ವೀಟ್

- Advertisement -

ಲಂಡನ್: ( Interesting Virat Kohli tweet ) ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸೆಂಚುರಿ ಹೊಡೆದ್ರೂ ಸುದ್ದಿ, ಸೆಂಚುರಿ ಹೊಡೆಯದಿದ್ರೂ ಸುದ್ದಿ. ತೀವ್ರ ರನ್ ಬರ ಎದುರಿಸುತ್ತಿರುವ ಕಿಂಗ್ ಕೊಹ್ಲಿ ಇತ್ತೀಚಿನ ದಿನಗಳಲ್ಲಂತೂ ಭಾರೀ ಸುದ್ದಿಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20 ಹಾಗೂ ಏಕದಿನ ಸರಣಿಯಲ್ಲಿ ದಯನೀಯ ವೈಫಲ್ಯ ಎದುರಿಸಿರುವ ವಿರಾಟ್ ಕೊಹ್ಲಿಗೆ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಚಿತ್ರಸಂದೇಶವೊಂದನ್ನು ಪ್ರಕಟಿಸಿದ್ದು, ಭಾರೀ ಕುತೂಹಲ ಮೂಡಿಸುತ್ತಿದೆ.

ಹಕ್ಕಿಯ ರೆಕ್ಕೆಗಳ ಚಿತ್ರವೊಂದರ ಮುಂದೆ ಕುಳಿತಿರುವ ವಿರಾಟ್ ಕೊಹ್ಲಿ, ಒಂದೇ ಟ್ವೀಟ್’ನಲ್ಲಿ ಎರಡು ಸಂದೇಶಗಳನ್ನು ಬರೆದಿದ್ದಾರೆ.

‘’what if I fall, oh but my darling, what if you fly’’ (ನಾನು ಬಿದ್ದರೇನು, ನೀವು ಹಾರಿದರೇನು) ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. ಮೇಲ್ಭಾಗದಲ್ಲಿ ‘’ದೃಷ್ಠಿಕೋನ’’ ಎಂದು ಬರೆದುಕೊಂಡಿದ್ದಾರೆ. ಬ್ಯಾಟಿಂಗ್ ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ವಿರುದ್ಧ ಭಾರತದ ಹಲವು ಮಾಜಿ ಕ್ರಿಕೆಟಿಗರು ಟೀಕೆ ಮಾಡುತ್ತಿರುವ ಹೊತ್ತಲ್ಲಿ ಕೊಹ್ಲಿ ಮಾಡಿರುವ ಈ ಟ್ವೀಟ್ ಕುತೂಹಲಕ್ಕೆ ಕಾರಣವಾಗಿದೆ.
ಟ್ವೀಟ್ ಮೂಲಕ ವಿರಾಟ್ ಕೊಹ್ಲಿ ತಮ್ಮ ಟೀಕಾಕಾರರಿಗೆ ಉತ್ತರ ಕೊಟ್ಟರಾ ಅಥವಾ ಕೊಹ್ಲಿ ಮನಸ್ಸಲ್ಲಿ ಬೇರೆಯೇ ಇದ್ಯಾ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ. ಕಿಂಗ್ ಕೊಹ್ಲಿ ಮಾಡಿರುವ ಕುತೂಹಲಕಾರಿ ಟ್ವೀಟನ್ನು ಸೋಷಿಯಲ್ ಮೀಡಿಯಾದಲ್ಲಿ ಜನ ತಮ್ಮದೇ ದೃಷ್ಠಿಕೋನದಲ್ಲಿ ವಿಶ್ಲೇಷಿಸುತ್ತಿದ್ದಾರೆ.

33 ವರ್ಷದ ವಿರಾಟ್ ಕೊಹ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸಿಲ್ಲ. ಕೊಹ್ಲಿ ಇಂಟರ್’ನ್ಯಾಷನಲ್ ಸೆಂಚುರಿ ಸಿಡಿಸದೆ 77 ಇನ್ನಿಂಗ್ಸ್’ಗಳೇ ಕಳೆದು ಹೋಗಿವೆ. ಇಂಗ್ಲೆಂಡ್ ಪ್ರವಾಸದಲ್ಲಿ ಫಾರ್ಮ್ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದ ಕೊಹ್ಲಿ ಟೆಸ್ಟ್, ಏಕದಿನ ಹಾಗೂ ಟಿ20.. ಹೀಗೆ ಆಡಿದ 5 ಇನ್ನಿಂಗ್ಸ್’ಗಳಿಂದ ಕೇವಲ 59 ರನ್ ಗಳಿಸಿದ್ದಾರೆ. ಭಾನುವಾರ ಏಕದಿನ ಸರಣಿಯ ಕೊನೆಯ ಪಂದ್ಯ ನಡೆಯಲಿದ್ದು, ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಸಾಕಷ್ಟು ಕುತೂಹಲವಿದೆ. 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲದಲ್ಲಿದ್ದು, 3ನೇ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ : KL Rahul back to practice : ಗುಡ್ ನ್ಯೂಸ್, NCAನಲ್ಲಿ ಅಭ್ಯಾಸ ಆರಂಭಿಸಿದ ರಾಹುಲ್

ಇದನ್ನೂ ಓದಿ : KSCA Maharaja Trophy T20 : KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡಲಿದ್ದಾರೆ ಮನೀಶ್, ಮಯಾಂಕ್, ಪಡಿಕ್ಕಲ್

Like I fell, Interesting Virat Kohli tweet

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular