ಸೋಮವಾರ, ಏಪ್ರಿಲ್ 28, 2025
HomeSportsCricketMayank Agarwal out : ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದಿಂದ ಮಯಾಂಕ್'ಗೆ ಕೊಕ್.. ಕುಂಬ್ಲೆ ಬಳಿಕ...

Mayank Agarwal out : ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವದಿಂದ ಮಯಾಂಕ್’ಗೆ ಕೊಕ್.. ಕುಂಬ್ಲೆ ಬಳಿಕ ಮತ್ತೊಬ್ಬ ಕನ್ನಡಿಗನ ಪಟ್ಟಕ್ಕೆ ಕುತ್ತು

- Advertisement -

ಬೆಂಗಳೂರು: ಪಂಜಾಬ್ ಕಿಂಗ್ಸ್ (Punjab Kings) ತಂಡದ ನಾಯಕತ್ವದಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal out) ಅವರನ್ನು ಕೆಳಗಿಳಿಸಲು ಪಂಜಾಬ್ ಫ್ರಾಂಚೈಸಿ ನಿರ್ಧರಿಸಿದೆ. ಮಯಾಂಕ್ ಅಗರ್ವಾಲ್ ಅವರ ಬದಲು ಇಂಗ್ಲೆಂಡ್’ನ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಜಾನಿ ಬೇರ್’ಸ್ಟೋ (Johny Bairstow) ಪಂಜಾಬ್ ಕಿಂಗ್ಸ್ ತಂಡದ ನೂತನ ನಾಯಕರಾಗುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೇ ಪಂಜಾಬ್ ಕಿಂಗ್ಸ್ ತಂಡ ಕೋಚ್ ಸ್ಥಾನದಿಂದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯವರನ್ನು (Anil Kumble) ಕೈಬಿಡಲು ನಿರ್ಧರಿಸಿತ್ತು. ಇದೀಗ ತಂಡದಲ್ಲಿ ಮತ್ತೊಬ್ಬ ಕನ್ನಡಿಗನ ಸ್ಥಾನಕ್ಕೆ ಕುತ್ತು ಬಂದಿದ್ದು, ಮುಂದಿನ ಐಪಿಎಲ್ ಟೂರ್ನಿಯಿಂದ ಮಯಾಂಕ್ ಅಗರ್ವಾಲ್ ಆಟಗಾರನಾಗಿ ಮಾತ್ರ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ. ಕಳೆದ ಐಪಿಎಲ್ ಟೂರ್ನಿಗೂ ಮುನ್ನ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್, ಪಂಜಾಬ್ ತಂಡವನ್ನು ತೊರೆದು ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿ ಅಲ್ಲಿ ನಾಯಕರಾಗಿದ್ದರು. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್’ಗೆ ನೀಡಲಾಗಿತ್ತು.

ಆದರೆ ಮಯಾಂಕ್ ನಾಯಕತ್ವದಲ್ಲಿ ಪಂಜಾಬ್ ತಂಡ ತೀವ್ರ ವೈಫಲ್ಯ ಎದುರಿಸಿ ಪ್ಲೇ ಆಫ್ ಹಂತ ತಲುಪುವಲ್ಲಿ ವಿಫಲವಾಗಿತ್ತು. ನಾಯಕತ್ವದ ಒತ್ತಡದಲ್ಲಿ ಬ್ಯಾಟಿಂಗ್’ನಲ್ಲೂ ವಿಫಲರಾಗಿದ್ದ ಮಯಾಂಕ್ ಕಳೆದ ಐಪಿಎಲ್’ನಲ್ಲಿ ಆಡಿದ 13 ಪಂದ್ಯಗಳಿಂದ ಕೇವಲ 16.33ರ ಸರಾಸರಿಯಲ್ಲಿ 122.50 ಸ್ಟ್ರೈಕ್’ರೇಟ್’ನೊಂದಿಗೆ 196 ರನ್ ಗಳಿಸಿದ್ದರು. ಐಪಿಎಲ್’ನಲ್ಲಿ ತೋರಿದ ಕಳಪೆ ಪ್ರದರ್ಶನದ ನಂತರ ಮಯಾಂಕ್ ಭಾರತ ತಂಡದಲ್ಲೂ ಸ್ಥಾನ ಕಳೆದುಕೊಂಡಿದ್ದರು.

ಪಂಜಾಬ್ ಕಿಂಗ್ಸ್ ಜೊತೆ ಅನಿಲ್ ಕುಂಬ್ಲೆಯವರ 3 ವರ್ಷಗಳ ಒಪ್ಪಂದ ಮುಗಿದಿರುವ ಕಾರಣ ಅವರನ್ನು ಮುಂದುವರಿಸಲಿದರು ಪಂಜಾಬ್ ಫ್ರಾಂಚೈಸಿ ನಿರ್ಧರಿಸಿದೆ. 2019ರ ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಹಾಗೂ 2021ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಫೈನಲ್’ಗೆ ಮುನ್ನಡೆಸಿದ್ದ ಐಯಾನ್ ಮಾರ್ಗನ್ ಅಥವಾ ಇಂಗ್ಲೆಂಡ್ ತಂಡದ ಮಾಜಿ ಕೋಚ್ ಟ್ರೆವೊರ್ ಬೇಲಿಸ್ ಪಂಜಾಬ್ ಕಿಂಗ್ಸ್’ನ ನೂತನ ಕೋಚ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : Shubman Gill Next captain : ಜಿಂಬಾಬ್ವೆಯಲ್ಲಿ ಚೊಚ್ಚಲ ಶತಕ ಬಾರಿಸಿದವರು ಟೀಮ್ ಇಂಡಿಯಾ ಕ್ಯಾಪ್ಟನ್, ಶುಭಮನ್ ಗಿಲ್ ಮುಂದಿನ ನಾಯಕ ?

ಇದನ್ನೂ ಓದಿ : Rahul Dravid : ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಕೋವಿಡ್, ಏಷ್ಯಾ ಕಪ್‌ಗೆ ಡೌಟ್ ?

Mayank Agarwal out for captaincy of Punjab Kings team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular