ಭಾನುವಾರ, ಏಪ್ರಿಲ್ 27, 2025
HomeSportsCricketVirat Kohli Rohit Sharma : ಟೀಮ್ ಇಂಡಿಯಾ ಅಭ್ಯಾಸದ ವೇಳೆ ಮಿಲಿಯನ್ ಡಾಲರ್ ಫೋಟೋ...

Virat Kohli Rohit Sharma : ಟೀಮ್ ಇಂಡಿಯಾ ಅಭ್ಯಾಸದ ವೇಳೆ ಮಿಲಿಯನ್ ಡಾಲರ್ ಫೋಟೋ : ಕೊಹ್ಲಿ, ರೋಹಿತ್ ಫ್ಯಾನ್ಸ್ ಫುಲ್ ಖುಷ್

- Advertisement -


ಮ್ಯಾಂಚೆಸ್ಟರ್: (Virat Kohli Rohit Sharma) ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೊರ್ಡ್ ಮೈದಾನ ದಲ್ಲಿ ಭಾನುವಾರ ನಡೆಯಲಿದೆ. ಮೊದಲ ಪಂದ್ಯವನ್ನು 10 ವಿಕೆಟ್’ಗಳಿಂದ ಗೆದ್ದುಕೊಂಡಿದ್ದ ಭಾರತ, 2ನೇ ಪಂದ್ಯದಲ್ಲಿ 100 ರನ್’ಗಳ ಸೋಲು ಕಂಡಿತ್ತು. ಹೀಗಾಗಿ 3ನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ಫೈನಲ್ ಮಹತ್ವ ಬಂದಿದೆ.

3ನೇ ಏಕದಿನ ಪಂದ್ಯಕ್ಕೂ ಮುನ್ನ ಶನಿವಾರ ಓಲ್ಡ್ ಟ್ರಾಫೊರ್ಡ್ ಮೈದಾನದಲ್ಲಿ ಟೀಮ್ ಇಂಡಿಯಾ ಅಭ್ಯಾಸ ನಡೆಸಿತು. ಅಭ್ಯಾಸದ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಹೊತ್ತು ಇಬ್ಬರೇ ಚರ್ಚೆ ನಡೆಸಿದ್ದು ಗಮನ ಸೆಳೆಯಿತು. ಔಟ್ ಆಫ್ ಫಾರ್ಮ್ ವಿರಾಟ್ ಕೊಹ್ಲಿ ಬಗ್ಗೆ ರೋಹಿತ್ ಶರ್ಮಾ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗರು ಟೀಕೆ ಮಾಡುತ್ತಿರುವ ಹೊತ್ತಲ್ಲೇ ಕೊಹ್ಲಿ ಪರವಾಗಿ ರೋಹಿತ್ ಧ್ವನಿ ಎತ್ತಿದ್ದರು.

ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದಾಗಲೂ ರೋಹಿತ್ ಶರ್ಮಾ ಸಾಕಷ್ಟು ಬಾರಿ ಫಾರ್ಮ್ ಕಳೆದುಕೊಂಡಿದ್ದರು. ಆಗ ರೋಹಿತ್ ಶರ್ಮಾ ಪರವಾಗಿ ವಿರಾಟ್ ಕೊಹ್ಲಿ ಧ್ವನಿ ಎತ್ತಿದ್ದರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧ ನಡೆಯುತ್ತಲೇ ಇರುತ್ತದೆ. ಕೊಹ್ಲಿ ಬಗ್ಗೆ ರೋಹಿತ್ ಅಭಿಮಾನಿಗಳು ನೆಗೆಟಿವ್ ಕಾಮೆಂಟ್ ಮಾಡಿದ್ರೆ, ರೋಹಿತ್ ಬಗ್ಗೆ ಕೊಹ್ಲಿ ಫ್ಯಾನ್ಸ್ ನೆಗೆಟಿವ್ ಕಾಮೆಂಟ್ ಮಾಡುವುದು ಸಾಮಾನ್ಯ. ಆದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಯಾವ ಮನಸ್ತಾಪವೂ ಇಲ್ಲ. ಅದಕ್ಕೀಗ ಮ್ಯಾಂಚೆಸ್ಟರ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ಅಭ್ಯಾಸದ ವೇಳೆ ಕ್ಲಿಕ್ಕಿಸಿದ ರೋಹಿತ್-ಕೊಹ್ಲಿ ಚಿತ್ರ ಮತ್ತೊಂದು ಸಾಕ್ಷಿ.

ಇದನ್ನೂ ಓದಿ : Interesting Virat Kohli tweet : ನಾನು ಬಿದ್ದರೇನಂತೆ..’’ ಕುತೂಹಲ ಮೂಡಿಸಿದ ವಿರಾಟ್ ಕೊಹ್ಲಿ ಟ್ವೀಟ್

ಇದನ್ನೂ ಓದಿ : Last England Tour for Virat Kohli : ವಿರಾಟ್ ಕೊಹ್ಲಿಗೆ ಇಂಗ್ಲೆಂಡ್ ನೆಲದಲ್ಲಿ ಇದೇ ಕೊನೆಯ ಪಂದ್ಯನಾ..?

Million dollar photo during Team India practice, Virat Kohli Rohit Sharma fans are full of happiness

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular