Paramjit Singh hint Dhoni IPL Future : ಮಹೇಂದ್ರ ಸಿಂಗ್ ಧೋನಿ (MS Dhoni). ಭಾರತ ಕ್ರಿಕೆಟ್ ಕಂಡ ಶ್ರೇಷ್ಟ ನಾಯಕರಲ್ಲಿ ಒಬ್ಬರು. ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಸದ್ಯ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕನಾಗಿ ಅದ್ವಿತೀಯ ಸಾಧನೆ ಮೆರೆದಿದ್ದಾರೆ. ಆದರೆ ಇಂತಹ ಕ್ರಿಕೆಟಿಗನ ಭವಿಷ್ಯದ ಕುರಿತು ಆಪ್ತ ಸ್ನೇಹಿತ ಪರಮ್‌ಜಿತ್ ಸಿಂಗ್ (Paramjit Singh) ಸ್ಪೋಟಕ ಮಾಹಿತಿಯನ್ನು ತಿಳಿಸಿದ್ದಾರೆ.

ಐಪಿಎಲ್ 2024ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಮುನ್ನೆಡೆಸಲಿದ್ದಾರೆ. ಆದರೆ ಈ ವರ್ಷಕ್ಕೆ ಧೋನಿ ಐಪಿಎಲ್ ಭವಿಷ್ಯ ಕೊನೆಯಾಗುತ್ತಾ ? ಹೀಗೊಂದು ಪ್ರಶ್ನೆಯ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಕಳೆದ ಎರಡು ವರ್ಷಗಳ ಹಿಂದೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವವನ್ನು ಧೋನಿ ತೊರೆದಿದ್ದರು. ಆದರೆ ತಂಡ ಹೀನಾಯ ಸೋಲು ಕಾಣುತ್ತಿದ್ದಂತೆಯೇ ಕಳೆದ ಬಾರಿ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಚುಕ್ಕಾಣಿ ಹಿಡಿದಿದ್ದರು. ಅಷ್ಟೇ ಅಲ್ಲದೇ ಕಳೆದ ಬಾರಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ : ಐಪಿಎಲ್ 2024ರಲ್ಲಿ ಆಡ್ತಾರಾ ವಿರಾಟ್ ಕೊಹ್ಲಿ ? ಹೀಗೇ ಹೇಳಿದ್ಯಾಕೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್
ಈ ಬಾರಿಯೂ ಮಹೇಂದ್ರ ಸಿಂಗ್ ಧೋನಿ ನಾಯಕತ್ವ ತೊರೆಯುತ್ತಾರೆ. ಋತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗುತ್ತಾರೆ ಅನ್ನೋ ಚರ್ಚೆ ನಡೆದಿತ್ತು. ಸದ್ಯ ಮಹೇಂದ್ರ ಸಿಂಗ್ ಧೋನಿ ಅವರ ಆಪ್ತ ಸ್ನೇಹಿತ ಪರಮ್‌ಜಿತ್ ಸಿಂಗ್ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್ ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ. ಅರಲ್ಲಿ ಇನ್ನೂ ಆಡುವ ಶಕ್ತಿಯಿದೆ. ಒನ್ ಕ್ರಿಕೆಟ್ ವರದಿಯ ಪ್ರಕಾರ, ಮಹೇಂದ್ರ ಸಿಂಗ್ ಧೋನಿ ಅವರು ಇನ್ನೂ ಒಂದು ಅಥವಾ ಎರಡು ಋತುಗಳಲ್ಲಿ ಐಪಿಎಲ್ ಪಂದ್ಯಾವಳಿಯನ್ನು ಆಡಲಿದ್ದಾರೆ. ಈ ವರ್ಷ ಅವರ ಕೊನೆಯ ಐಪಿಎಲ್ ಸೀಸನ್ ಅನ್ನೋದನ್ನು ನಾನು ಒಪ್ಪುವುದಿಲ್ಲ. ಅವರು ಇನ್ನೂ ಫಿಟ್ ಆಗಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ :IPL 2024 KL Rahul : ಕೆಎಲ್ ರಾಹುಲ್ ಗಂಭೀರ, ಲಕ್ನೋ ಸೂಪರ್‌ಜೈಂಟ್ಸ್ ನಾಯಕ ಐಪಿಎಲ್‌ನಿಂದ ಔಟ್ ?
ಪರಮ್‌ಜಿತ್ ಸಿಂಗ್ ಪ್ರೈಮ್ ಸ್ಪೋರ್ಟ್ಸ್ (Prime Sports) ಸಂಸ್ಥೆಯ ಮಾಲೀಕರಾಗಿದ್ದು, ಬಾಲ್ಯದಿಂದಲೂ ಮಹೇಂದ್ರ ಸಿಂಗ್ ಧೋನಿ ಅವರ ಅತ್ಯಾಪ್ತರಾಗಿದ್ದರು. ಎಂಎಸ್ ಧೋನಿ ಕ್ರಿಕೆಟ್ ಲೋಕದಲ್ಲಿ ಮಿಂಚಲು ಪರಮ್‌ಜಿತ್ ಸಿಂಗ್ ಸಾಕಷ್ಟು ಶ್ರಮವಹಿಸಿದ್ದಾರೆ. ಇದೀಗ ಧೋನಿ ಪ್ರೈಮ್ ಸ್ಪೋರ್ಟ್ಸ್ ಸ್ಟಿಕ್ಕರ್ ಒಳಗೊಂಡಿರುವ ಬ್ಯಾಟ್ ಬಳಸುತ್ತಿದ್ದಾರೆ.
ಇದನ್ನೂ ಓದಿ : ಹಾರ್ದಿಕ್ ಪಾಂಡ್ಯಗೆ ಬಿಸಿಸಿಐ ವಾರ್ನಿಂಗ್ : ದೇಶೀಯ ಕ್ರಿಕೆಟ್ ಆಡದಿದ್ರೆ ಒಪ್ಪಂದವೇ ರದ್ದು !
MS Dhoni stay away from IPL? close friend Paramjit Singh hint Dhoni IPL Future