Suryakumar Yadav : ಐಪಿಎಲ್ 2022ರಿಂದ ಮುಂಬೈ ಇಂಡಿಯನ್ಸ್ ಖ್ಯಾತ ಆಟಗಾರ ಸೂರ್ಯ ಕುಮಾರ್‌ ಯಾದವ್‌ ಔಟ್‌

ಗೆಲುವಿನ ಲಯಕ್ಕೆ ಮರಳುತ್ತಿದ್ದ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಅವರ IPL 2022 ಪಂದ್ಯದ ಕೆಲವು ಗಂಟೆಗಳ ಮೊದಲು, ಮುಂಬೈ ಇಂಡಿಯನ್ಸ್ ಖ್ಯಾತ ಆಟಗಾರ ಸೂರ್ಯ ಕುಮಾರ್‌ ಯಾದವ್‌ ಅವರನ್ನು ತಂಡದಿಂದ ಕೈಬಿಟ್ಟಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸೂರ್ಯಕುಮಾರ್‌ ಯಾದವ್‌ (Suryakumar Yadav ) IPL 2022ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆಯಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಮುಂಬೈ ಇಂಡಿಯನ್ಸ್‌ ಪಂದ್ಯದಲ್ಲಿ ಸೂರ್ಯಕುಮಾರ್ ಎಡ ಮುಂಗೈ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಎಡ ಮುಂದೋಳಿನ ಸ್ನಾಯುವಿನ ಗಾಯದಿಂದಾಗಿ ಐಪಿಎಲ್ 2022 ರಿಂದ ಹೊರಗುಳಿದಿದ್ದಾರೆ. ಮೇ 6, 2022 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಯಾದವ್ ಗಾಯಗೊಂಡಿದ್ದಾರೆ.

ಸೂರ್ಯಕುಮಾರ್ ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ 8 ಪಂದ್ಯಗಳನ್ನು ಆಡಿದ್ದು, 43.29 ಸರಾಸರಿಯಲ್ಲಿ 3 ಅರ್ಧ ಶತಕಗಳನ್ನು ಒಳಗೊಂಡಂತೆ 303 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಐದು ಬಾರಿಯ ಚಾಂಪಿಯನ್ MI ಗಾಗಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದರು. ಅವರು 145.67 ಸ್ಟ್ರೈಕ್-ರೇಟ್ ಹೊಂದಿದ್ದು, ತಂಡಕ್ಕಾಗಿ ಉತ್ತಮವಾಗಿ ಆಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡಕ್ಕೆ ಸೂರ್ಯಕುಮಾರ್‌ ಯಾದವ್‌ ಅವರ ಅನುಪಸ್ಥಿತಿ ದೊಡ್ಡ ಹೊಡೆತವನ್ನು ಕೊಟ್ಟಿದೆ. 10 ಪಂದ್ಯಗಳಲ್ಲಿ ಕೇವಲ ಎರಡನ್ನು ಗೆದ್ದಿರುವ ಮುಂಬೈ ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರ ಬಿದ್ದಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ MI ಯ 11 ನೇ IPL 2022 ಪಂದ್ಯಕ್ಕೆ ನಿಮಿಷಗಳ ಮೊದಲು ಯಾದವ್ ಗಾಯದ ಸುದ್ದಿ ಹೊರಬಿದ್ದಿದೆ.

ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಎಂಐ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. MI ತನ್ನ ಕೊನೆಯ ಐದು ವಿಕೆಟ್‌ಗಳನ್ನು ಕೇವಲ 3 ಓವರ್‌ಗಳಲ್ಲಿ ಕಳೆದುಕೊಂಡಿತು. MI ವಿರುದ್ಧ KKR ಸತತ ಮೂರನೇ ಜಯವನ್ನು ದಾಖಲಿಸಿದೆ.

ಇದನ್ನೂ ಓದಿ : Chris Gayle : IPL 2022ನಲ್ಲಿ ಕ್ರಿಸ್‌ಗೇಲ್‌ ಹೊರಗುಳಿದಿದ್ಯಾಕೆ ? ಕೊನೆಗೂ ಬಯಲಾಯ್ತು ನಿಜವಾದ ಕಾರಣ

ಇದನ್ನೂ ಓದಿ : ಡೆಲ್ಲಿ ಕ್ಯಾಪಿಟಲ್ಸ್ ಓಪನರ್ ಪೃಥ್ವಿ ಶಾ ಆಸ್ಪತ್ರೆಗೆ ದಾಖಲು

Mumbai Indians top player Suryakumar Yadav out from IPL 2022

Comments are closed.