ನಾಳೆ ಕರ್ನಾಟಕ ಬಂದ್‌ ಗೆ 1900 ಸಂಘಟನೆಗಳ ಬೆಂಬಲ : ಆಟೋ, ಬಸ್ ಸಂಚಾರ ಇಲ್ಲ, ಬೆಂಗಳೂರಲ್ಲಿ ನಿಷೇಧಾಜ್ಞೆ

ಕರ್ನಾಟಕ ಬಂದ್‌ಗೆ (Karnataka Bandh)  ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಲ್ಲಿ ಇಂದಿನಿಂದಲೇ ನಿಷೇಧಾಜ್ಞೆ (Bengaluru 144 Section) ಜಾರಿಯಾಗಲಿದೆ. ನಾಳೆ ಸೆಪ್ಟೆಂಬರ್‌ 29 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ಬೆಂಗಳೂರು : ಕಾವೇರಿ ನದಿ ನೀರು ಬಿಟ್ಟಿರುವ ರಾಜ್ಯ ಸರಕಾರದ ಕ್ರಮದ ವಿರುದ್ದ ಕೆರಳಿರುವ ಕನ್ನಡಪರ ಮತ್ತು ರೈತಪರ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ (Karnataka Bandh)  ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬೆಂಗಳೂರಲ್ಲಿ ಇಂದಿನಿಂದಲೇ ನಿಷೇಧಾಜ್ಞೆ (Bengaluru 144 Section) ಜಾರಿಯಾಗಲಿದೆ. ನಾಳೆ ಸೆಪ್ಟೆಂಬರ್‌ 29 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ಕಾವೇರಿ ನೀರು ಕರ್ನಾಟಕದಲ್ಲಿ ಕಿಚ್ಚು ಹಚ್ಚಿದೆ. ಈಗಾಗಲೇ ಕನ್ನಡಪರ, ರೈತಪರ ಸಂಘಟನೆಗಳು ಸೇರಿದಂತೆ ಸುಮಾರು 1900 ಕ್ಕೂ ಅಧಿಕ ಸಂಘಟನೆಗಳು ನಾಳೆಯ ಕರ್ನಾಟಕ ಬಂದ್‌ಗೆ ಬಂಬಲ ಸೂಚಿಸಿವೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ಬಂದ್‌ ಯಶಸ್ವಿಯಾಗಿ ನಡೆಸಿರುವ ಸಂಘಟನೆಗಳು ಇದೀಗ ನಾಳಿನ ಕರ್ನಾಟಕ ಬಂದ್‌ಗೆ ಸಜ್ಜಾಗಿವೆ. ಬಂದ್‌ ಯಶಸ್ವಿ ಮಾಡುವ ಮೂಲಕ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಸಂಘಟನೆಗಳು ಪ್ಲ್ಯಾನ್‌ ಮಾಡಿಕೊಂಡಿವೆ.

ರಸ್ತೆ ಇಳಿಯಲ್ಲ ಬಸ್‌, ಆಟೋ :
ಇನ್ನು ಕರ್ನಾಟಕ ಬಂದ್‌ಗೆ ಖಾಸಗಿ ಬಸ್‌ ಚಾಲಕರು ಮತ್ತು ಮಾಲೀಕರ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರು ಮತ್ತು ಮಾಲಕರ ಒಕ್ಕೂಟ, ಓಲಾ, ಊಬರ್‌ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಇನ್ನು ಖಾಸಗಿ ಶಾಲೆಗಳ ಬಸ್‌ ಚಾಲಕರ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಖಾಸಗಿ ಬಸ್‌, ಆಟೋ, ಟ್ಯಾಕ್ಸಿಗಳು ನಾಳೆ ರಸ್ತೆಗೆ ಇಳಿಯುವುದು ಅನುಮಾನ. ಬೆಂಗಳೂರು ನಾಳೆ ಸಂಪೂರ್ಣವಾಗಿ ಸ್ತಬ್ದವಾಗುವುದು ಖಚಿತ. ಇನ್ನೊಂದೆಡೆ ಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ಸುಗಳು ಕೂಡ ರಸ್ತೆಗೆ ಇಳಿಯವುದು ಅನುಮಾನವಾಗಿದೆ. ಜೊತೆಗೆ ಮೆಟ್ರೋ ರೈಲು ಸಂಚಾರದ ಬಗ್ಗೆಯೂ ಯಾವುದೇ ಖಚಿತತೆ ಇಲ್ಲ.

1900 Organizations Support Karnataka Bandh Tomorrow No Auto, Bus Traffic, 144 section in Bangalore
Image Credit to Original Source

ಬೆಂಗಳೂರಲ್ಲಿ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ :
ಬೆಂಗಳೂರು ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳುವ ಸಲುವಾಗಿ ಬೆಂಗಳೂರು ನಗರದಲ್ಲಿ ಇಂದು ರಾತ್ರಿಯಿಂದಲೇ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುತ್ತದೆ. ನಿಷೇಧಾಜ್ಞೆ ಜಾರಿಯಾದ್ರೆ ಪ್ರತಿಭಟನೆ ನಡೆಸಲು ಅವಕಾಶ ದೊರೆಯುವುದಿಲ್ಲ.

ಇದನ್ನೂ ಓದಿ : ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್: ಏನಿರುತ್ತೆ ? ಏನಿರಲ್ಲ?

ಬಂದ್‌ ಆಗುತ್ತಾ ಸಂಪೂರ್ಣ ಕರ್ನಾಟಕ ?
ಕರ್ನಾಟಕ ಬಂದ್‌ಗೆ ಈಗಾಗಲೇ ಮಂಡ್ಯ, ಮೈಸೂರು, ಮಡಿಕೇರಿ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಂದ್‌ ಯಶಸ್ವಿಯಾಗಲಿದೆ. ಇನ್ನು ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿಯೂ ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಕರಾವಳಿ, ಮಲೆನಾಡು ಜಿಲ್ಲೆಗಳಿಗೂ ನಾಳಿನ ಬಂದ್‌ ಬಿಸಿ ತಟ್ಟಲಿದೆ.

ಪ್ರಮುಖವಾಗಿ ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ತಬ್ದವಾದ್ರೆ, ಸರಕಾರಿ ಬಸ್ಸುಗಳು ಸಂಚಾರ ನಡೆಸದೇ ಇದ್ರೆ ಇಡೀ ಕರ್ನಾಟಕ ಸಂಪೂರ್ಣವಾಗಿ ಬಂದ್‌ ಆಗುವುದು ಖಚಿತ. ಕನ್ನಡಪರ ಸಂಘಟನೆಗಳು ರಾಜ್ಯವನ್ನು ಸಂಪೂರ್ಣವಾಗಿ ಬಂದ್‌ ಮಾಡಲು ಸಿದ್ದತೆ ಮಾಡಿಕೊಂಡಿವೆ.

ಬಂದ್‌ ಆಗುತ್ತಾ ಹೋಟೆಲ್‌ ?
ಇನ್ನು ಕರ್ನಾಟಕ ಬಂದ್‌ಗೆ ಈಗಾಗಲೇ ಕರ್ನಾಟಕ ಹೋಟೆಲ್‌ ಮಾಲೀಕರ ಸಂಘ ಹಾಗೂ ಬೆಂಗಳೂರು ಹೋಟೆಲ್‌ ಮಾಲೀಕರ ಸಂಘಟನೆಗಳು ಈಗಾಗಲೇ ಕರ್ನಾಟಕ ಬಂದ್‌ಗೆ ಬಾಹ್ಯ ಬೆಂಬಲವನ್ನು ನೀಡಿವೆ. ಆದರೆ ಅಧಿಕೃತವಾಗಿ ಇದುವರೆಗೂ ಹೋಟೆಲ್‌ ಬಂದ್‌ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ರಾಜ್ಯ ಹೋಟೆಲ್‌ ಮಾಲೀಕರ ಸಂಘ ಕೂಡ ಬಂದ್‌ಗೆ ಬೆಂಬಲ ಸೂಚಿಸುವ ಸಾಧ್ಯತೆಯಿದೆ.

ಚಲನಚಿತ್ರ ಪ್ರದರ್ಶನ ಬಂದ್‌
ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದೆ. ಜೊತೆಗೆ ಕನ್ನಡ ಸಿನಿಮಾ ರಂಗದ ನಟ, ನಟಿಯರು ಕೂಡ ಕಾವೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಿನಿಮಾ ಮಂದಿರ ಹಾಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಯಾವುದೇ ಸಿನಿಮಾಗಳು ಪ್ರಸಾರವಾಗುವುದಿಲ್ಲ.

1900 Organizations Support Karnataka Bandh Tomorrow No Auto, Bus Traffic, 144 section in Bangalore
Image Credit to Original Source

ಶಾಲೆ ಕಾಲೇಜು ಬಂದ್‌ ?
ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಬಸ್‌ ಸಂಚಾರ ಸಂಪೂರ್ಣ ಬಂದ್‌ ಆಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳು ನಾಳೆ ಬಂದ್‌ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇದೀಗ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಯನ್ನು ಕರೆದಿದ್ದಾರೆ. ಬಂದ್‌ ವೇಳೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವ ಸಲುವಾಗಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಕರ್ನಾಟಕ ಬಂದ್‌ : ಸೆಪ್ಟೆಂಬರ್‌ 28, 29 ರಂದು 2 ದಿನ ಶಾಲೆ, ಕಾಲೇಜುಗಳಿಗೆ ರಜೆ !

ಏರ್‌ ಪೋರ್ಟ್‌ ಟ್ಯಾಕ್ಸಿ ಚಾಲಕರ ಬೆಂಬಲ 

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಟ್ಯಾಕ್ಸಿ ಚಾಲಕರ ಸಂಘಟನೆಗಳು ನಾಳಿನ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ನಾಳೆಯ ಬಂದ್‌ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಸಿ ತಟ್ಟಲಿದೆ. ಅದ್ರಲ್ಲೂ ಅಂತರಾಷ್ಟ್ರೀಯ ಪ್ರಯಾಣಿಕರು ನಾಳೆ ಪರದಾಟ ನಡೆಸೋ ಸ್ಥಿತಿ ಎದುರಾಗುವ ಸಾಧ್ಯತೆಯಿದೆ.

1900 Organizations Support Karnataka Bandh Tomorrow No Auto, Bus Traffic, 144 section in Bangalore

Comments are closed.