IPL ಹರಾಜು 2024 : ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಪ್ರತಿನಿಧಿಸಿದ ರಿಷಬ್‌ ಪಂತ್‌

IPL Auction 2024 Live Updates : ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗಾಗಿ ಮಿನಿ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದೆ. ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರಿಷಬ್‌ ಪಂತ್‌ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯ ಐಪಿಎಲ್‌ 2024 ( IPL 2024)  333 ಆಟಗಾರರು ಹರಾಜು ಆಗಲಿದ್ದಾರೆ.

IPL Auction 2024 Live Updates : ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗಾಗಿ ಮಿನಿ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದೆ. ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ರಿಷಬ್‌ ಪಂತ್‌ (Rishabh Pant) ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯ ಐಪಿಎಲ್‌ 2024 ( IPL 2024)  333 ಆಟಗಾರರು ಹರಾಜು ಆಗಲಿದ್ದಾರೆ. ಹತ್ತು ತಂಡಗಳು ಒಟ್ಟು ₹262.95 ಕೋಟಿ ರೂಪಾಯಿಯನ್ನು ಹರಾಜಿಗೆ ವಿನಿಯೋಗಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಐಪಿಎಲ್‌ ಹರಾಜು ವಿದೇಶದಲ್ಲಿ ನಡೆಯುತ್ತಿದೆ. ಈ ಬಾರಿಯ ಹರಾಜಿನಲ್ಲಿ ಒಟ್ಟು 1,166 ಮಂದಿ ಆಟಗಾರರು ಹೆಸರನ್ನು ನೋಂದಾಯಿಸಿಕೊಂಡಿದ್ದು. ಅಂತಿಮವಾಗಿ 10 ಫ್ರಾಂಚೈಸಿಗಳು ಆಟಗಾರರ ಸಂಖ್ಯೆಯನ್ನು ಕಡಿತಗೊಳಿಸಿವೆ. ಅಂತಿಮವಾಗಿ ಈ ಬಾರಿಯ ಹರಾಜಿನಲ್ಲಿ 214 ಭಾರತೀಯ ಆಟಗಾರರು ಮತ್ತು 119 ಅಂತರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಆಟಗಾರರ ಹರಾಜು ಪಟ್ಟಿಯಲ್ಲಿ ಒಟ್ಟು 116 ಕ್ಯಾಪ್ಡ್ ಮತ್ತು 215 ಅನ್‌ಕ್ಯಾಪ್ಡ್ ಆಟಗಾರರು ಒಳಗೊಂಡಿದ್ದಾರೆ. ಅಷ್ಟೇ ಅಲ್ಲದೇ ಅಸೋಸಿಯೇಟ್ ರಾಷ್ಟ್ರಗಳ ಇಬ್ಬರು ಆಟಗಾರರು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ.

IPL 2024 Auction Rishabh Pant represented Delhi Capitals Players List
Image Credi to Original Source

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿನಲ್ಲಿ ಈ ಬಾರಿ ಒಟ್ಟು ಹತ್ತು ಫ್ರಾಂಚೈಸಿಗಳು ₹262.95 ಕೋಟಿ ರೂಪಾಯಿ ವಿನಿಯೋಗ ಮಾಡಬಹುದಾಗಿದೆ. ಗುಜರಾತ್ ಟೈಟಾನ್ಸ್ ₹38.15 ಕೋಟಿ ಬಜೆಟ್‌ನಲ್ಲಿ ಆಟಗಾರರ ಖರೀದಿ ಸಾಮರ್ಥ್ಯವನ್ನು ಹೊಂದಿದೆ. ಸನ್‌ರೈಸರ್ಸ್ ಹೈದರಾಬಾದ್ ಆರು ಸ್ಲಾಟ್‌ಗಳಿಗೆ ₹34 ಕೋಟಿ ವಿನಿಯೋಗ ಮಾಡಬಹುದಾಗಿದೆ. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ 12 ಸ್ಲಾಟ್‌ಗಳಿಗೆ ₹32.7 ಕೋಟಿ ಹಣವನ್ನು ವಿನಿಯೋಗ ಮಾಡಬಹುದಾಗಿದೆ. ಈ ಮೂಲಕ ಅತೀ ಹೆಚ್ಚು ಹಣ ಹೊಂದಿರುವ ತಂಡಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ : ರೋಹಿತ್‌ ಶರ್ಮಾ ಬದಲು ಹಾರ್ದಿಕ್ ಪಾಂಡ್ಯ ನಾಯಕ : 4 ಲಕ್ಷ ಫಾಲೋವರ್ಸ್ ಕಳೆದುಕೊಂಡ ಮುಂಬೈ ಇಂಡಿಯನ್ಸ್

2022 ರಲ್ಲಿ ಐಪಿಎಲ್ ಮೆಗಾ ಹರಾ‌ಜು ನಡೆದಿದ್ದು, ಇದೀಗ ಎರಡು ವರ್ಷಗಳ ಬಳಿಕ ಮಿನಿ ಹರಾಜು ನಡೆಯುತ್ತಿದೆ. ಎಲ್ಲಾ ತಂಡಗಳು ಒಟ್ಟು 77 ಆಟಗಾರರನ್ನು ಖರೀದಿ ಮಾಡಬಹುದಾಗಿದೆ. ಹೀಗಾಗಿ ಆಟಗಾರರ ಖರೀದಿಗೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಐಪಿಎಲ್ ಹರಾಜಿ 2024ರಲ್ಲಿ ಅನುಭವಿ ಹಾಗೂ ಹೊಸ ಆಟಗಾರರ ಖರೀದಿಗೆ ತಂಡಗಳು ಉತ್ಸುಕವಾಗಿವೆ. ಪ್ರಾಂಚೈಸಿಗಳು ಈ ಬಾರಿ ಬ್ಯಾಟಿಂಗ್‌ ಹಾಗೂ ಬೌಲಿಂಗ ಸಾಮರ್ಥ್ಯವನ್ನು ಸಮಾನ ವಾಗಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಹಣಕಾಸಿನ ಸಂಪನ್ಮೂಲಗಳೊಂದಿಗೆ, ಪ್ರತಿ ಫ್ರ್ಯಾಂಚೈಸ್ ಗೆಲುವಿನ ಸಂಯೋಜನೆಯನ್ನು ಜೋಡಿಸಲು ಕಾರ್ಯತಂತ್ರವಾಗಿ ಬಿಡ್ ಮಾಡುತ್ತದೆ.

ಗುಜರಾತ್ ಟೈಟಾನ್ಸ್‌ನಲ್ಲಿ (₹38.15 ಕೋಟಿ) ಗರಿಷ್ಠ ಸಂಬಳದ ಮಿತಿ ಲಭ್ಯವಿದೆ. ಸನ್‌ರೈಸರ್ಸ್ ಹೈದರಾಬಾದ್ ₹34 ಕೋಟಿಯೊಂದಿಗೆ ಎರಡನೇ ಸ್ಥಾನ ದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (₹32.7 ಕೋಟಿ), ಚೆನ್ನೈ ಸೂಪರ್ ಕಿಂಗ್ಸ್ (₹31.4 ಕೋಟಿ) ಮತ್ತು ಪಂಜಾಬ್ ಕಿಂಗ್ಸ್ (₹29.1 ಕೋಟಿ) ನಂತರದ ಸ್ಥಾನದಲ್ಲಿದೆ. ಲಕ್ನೋ ಸೂಪರ್ ಜೈಂಟ್ಸ್‌ನಲ್ಲಿ (₹13.15 ಕೋಟಿ) ಕಡಿಮೆ ಹಣವನ್ನು ಹೊಂದಿದೆ.

ಇದನ್ನೂ ಓದಿ : IPL 2024 ಹರಾಜು : ರೋಹಿತ್‌ ಶರ್ಮಾ ಖರೀದಿಗೆ ಮುಂಬೈ ಇಂಡಿಯನ್ಸ್‌ ಸಂಪರ್ಕಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಐಪಿಎಲ್ 2024 ರ ಹರಾಜಿಗೆ ಸಂಬಂಧಿಸಿದಂತೆ ಹಲವು ಆಟಗಾರರು ಗೈರು ಹಾಜರಾಗಿದ್ದಾರೆ. ಖ್ಯಾತ ಆಲ್‌ರೌಂಡರ್‌ ಬೆನ್‌ ಸ್ಟೋಕ್‌ ಶಸ್ತ್ರ ಚಿಕಿತ್ಸೆ ಯಿಂದ ಚೇತರಿಸಿಕೊಳ್ಳುತ್ತಿದ್ದು, ಮೊಣಕೈ ಗಾಯಕ್ಕೆ ತುತ್ತಾಗಿರುವ ಚೋಪ್ರಾ ಆರ್ಚರ್‌ ಕೂಡ ಹರಾಜಿನಿಂದ ದೂರ ಉಳಿದಿದ್ದಾರೆ. ಇನ್ನು ರಾಜಸ್ಥಾನ ರಾಯಲ್ಸ್ ತಂಡ ಕೈ ಬಿಟ್ಟಿ ಜೋ ರೂಟ್‌ ಕೂಡ ಈ ಬಾರಿಯ ಐಪಿಎಲ್‌ಗೆ ಲಭ್ಯವಿಲ್ಲ. ಕೆಕೆಆರ್‌ ತಂಡ ಆಲ್‌ರೌಂಡರ್‌ ಶಕೀಬ್‌ ಅಲ್‌ ಹಸನ್‌ ಕೂಡ ಈ ಬಾರಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.

ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡ ಬಿಡುಗಡೆ ಮಾಡಿರುವ ಕೇದಾರ್‌ ಜಾಧವ್‌ ಪಾಲ್ಗೊಳ್ಳುತ್ತಿಲ್ಲ. ಕ್ರಿಕೆಟ್‌ನಿಂದ ಹಲವು ಸಮಯಗಳ ಕಾಲ ದೂರ ಉಳಿದಿರುವ ರಿಷಬ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ ಮತ್ತು ಆಸ್ಟ್ರೇಲಿಯಾದ ವಿಶ್ವಕಪ್ ಹೀರೋ ಟ್ರಾವಿಸ್ ಹೆಡ್ ₹2 ಕೋಟಿಯ ಬೇಸ್‌ ಪ್ರೈಸ್‌ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇರ್ತಾರಾ ಈ ಡೆತ್‌ ಬೌಲರ್‌

IPL 2024 Auction Rishabh Pant represented Delhi Capitals Players List

Comments are closed.