Pat Cummins Marriage : ತನ್ನ ಮಗುವಿನ ತಾಯಿಯನ್ನೇ ಮದುವೆಯಾದ ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್

ನ್ಯೂಸ್ ಸೌತ್ ವೇಲ್ಸ್: (Pat Cummins Marriage) ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಟಾರ್ ಆಲ್ರೌಂಡರ್ ಪ್ಯಾಟ್ ಕಮಿನ್ಸ್ (Pat Cummins), ತನ್ನ ಗಂಡು ಮಗುವಿನ ತಾಯಿಯನ್ನ ಮದುವೆಯಾಗಿದ್ದಾರೆ. ಆಸ್ಟ್ರೇಲಿಯಾದ ನ್ಯೂಸ್ ಸೌತ್ ವೇಲ್ಸ್’ನ ಬೈರಾನ್ ಬೇನಲ್ಲಿ(Byron Bay) ನಡೆದ ವಿವಾಹ ಸಮಾರಂಭದಲ್ಲಿ ಬೆಕೀ ಬೋಸ್ಟನ್ ( Becky Boston) ಅವರನ್ನು ವರಿಸುವ ಮೂಲಕ ಪ್ಯಾಟ್ ಕಮಿನ್ಸ್ ಗೃಹಸ್ಥಾಶ್ರಮಕ್ಕೆ ಕಾಲಿಟ್ರು.

ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಪ್ಯಾಟ್ ಕಮಿನ್ಸ್ ಮತ್ತು ಬೆಕೀ ಬೋಸ್ಟನ್’ಗೆ ಈಗಾಗ್ಲೇ 9 ತಿಂಗಳ ಗಂಡು ಮಗುವಿದೆ. ಆ ಮಗುವಿನ ಹೆಸರು ಅಲ್ಬೀ. ಅಪ್ಪ-ಅಪ್ಪನ ಮದುವೆಗೆ ಮಗು ಅಲ್ಬೀ ಕೂಡ ಸಾಕ್ಷಿಯಾಗಿದ್ದು ವಿಶೇಷ. ಪುತ್ರ ಅಲ್ಬೀ, ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಉಪಸ್ಥಿತಿಯಲ್ಲಿ ಈ ಮದುವೆ ನಡೆದಿದೆ.

ಆಸೀಸ್ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಮತ್ತು ಬೆಕೀ ಬೋಸ್ಟನ್ ಅವರ ಭೇಟಿ ನಡೆದದ್ದು 9 ವರ್ಷಗಳ ಹಿಂದೆ, ಅಂದ್ರೆ 2013ರಲ್ಲಿ. ಅಲ್ಲಿಂದ ಶುರುವಾದ ಪ್ರೇಮಕಥೆ, ನಂತರ ಲಿವಿನ್ ರಿಲೇಷನ್’ಷಿಪ್’ವರೆಗೆ ತಲುಪಿತ್ತು. 2020ರಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎಂಗೇಜ್’ಮೆಂಟ್ ನಡೆದ ಒಂದೂವರೆ ವರ್ಷದ ನಂತರ ಕಮಿನ್ಸ್-ಬೋಸ್ಟನ್ ದಂಪತಿಗೆ ಗಂಡು ಮಗು ಜನಿಸಿತ್ತು.

https://www.instagram.com/p/Ce-3773PsFZ/?igshid=YmMyMTA2M2Y=

33 ವರ್ಷದ ಬೆಕೀ ಬೋಸ್ಟನ್ ಮೂಲತಃ ಇಂಗ್ಲೆಂಡ್’ನ ಯಾರ್ಕ್’ಶೈರ್’ನವರು. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್. 2013ರಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಇಂಗ್ಲೆಂಡ್’ನಲ್ಲಿ ಮೊದಲ ಬಾರಿ ಬೋಸ್ಟನ್ ಭೇಟಿಯಾಗಿದ್ರು. ಮೊದಲು ಸ್ನೇಹ, ನಂತ್ರ ಪ್ರೇಮ.. ಕ್ರಿಕೆಟ್ ಆಸ್ಟ್ರೇಲಿಯಾ ಅವಾರ್ಡ್ ಕಾರ್ಯಕ್ರಮಗಳಿಗೆ 2014ರಿಂದಲೂ ತನ್ನ ಪ್ರಿಯತಮೆಯೊಂದಿಗೆ ಪ್ಯಾಟ್ ಕಮಿನ್ಸ್ ಹಾಜರಾಗುತ್ತಿದ್ದರು. ಇದೀಗ ಇಂಗ್ಲೆಂಡ್ ಮೂಲದ ತನ್ನ ಪ್ರೇಯಸಿಯನ್ನು ಮದುವೆಯಾಗುವ ಮೂಲಕ ಪ್ರೀತಿ-ಪ್ರೇಮಕ್ಕೆ ದೇಶದ ಗಡಿಗಳ ಹಂಗಿಲ್ಲ ಎಂಬುದನ್ನು ಪ್ಯಾಟ್ ಕಮಿನ್ಸ್ ಮತ್ತು ಬೆಕೀ ಬೋಸ್ಟನ್ ಸಾಬೀತು ಪಡಿಸಿದ್ದಾರೆ.

https://www.instagram.com/p/CZ3FL_fPkgZ/?igshid=YmMyMTA2M2Y=

ಪ್ಯಾಟ್ ಕಮಿನ್ಸ್-ಬೆಕೀ ಬೋಸ್ಟನ್ ಮದುವೆಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಟಿಮ್ ಪೇನ್, ಟ್ರಾವಿಸ್ ಹೆಡ್, ವೇಗಿಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಜಲ್’ವುಡ್, ಮಾಜಿ ಆಟಗಾರ ಆಂಡ್ರ್ಯೂ ಮೆಕ್’ಡೊನಾಲ್ಡ್ ಸಾಕ್ಷಿಯಾದರು.

https://www.instagram.com/p/CJe7wFDrNQR/?igshid=YmMyMTA2M2Y=

29 ವರ್ಷದ ಆಲ್ರೌಂಡರ್ ಪ್ಯಾಟ್ ಕಮಿನ್ಸ್, ICC Test Bowling Rankingನಲ್ಲಿ ನಂಬರ್ ವನ್ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ಪರ 43 ಟೆಸ್ಟ್ ಪಂದ್ಯಗಳನ್ನಾಡಿರುವ ಪ್ಯಾಟ್ ಕಮಿನ್ಸ್ 199 ವಿಕೆಟ್ ಮತ್ತು 880 ರನ್ ಗಳಿಸಿದ್ದಾರೆ. 73 ಏಕದಿನ ಪಂದ್ಯಗಳಿಂದ 119 ವಿಕೆಟ್ ಮತ್ತು 39 ಟಿ20 ಪಂದ್ಯಗಳಿಂದ 44 ವಿಕೆಟ್ ಕಬಳಿಸಿದ್ದಾರೆ. 2022ರ ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಫಾಸ್ಟೆಸ್ಟ್ ಐಪಿಎಲ್ ಅರ್ಧಶತಕ ಬಾರಿಸಿದ್ದ ಕೆ.ಎಲ್ ರಾಹುಲ್ ಅವರ ದಾಖಲೆಯನ್ನು ಸರಿಗಟ್ಟಿದ್ದರು.

ಇದನ್ನೂ ಓದಿ : CWG 2022 : ಕಾಮನ್‌ವೆಲ್ತ್‌ ಗೇಮ್ಸ್‌ 2022 : ಭಾರತಕ್ಕೆ ಮೂರನೇ ಚಿನ್ನ ತಂದು ಕೊಟ್ಟ ಅಚಿಂತಾ ಶೆಯುಲಿ!!

ಇದನ್ನೂ ಓದಿ : India Vs West Indies 2nd T20 : ಅಯ್ಯರ್ ಬದಲು ಹೂಡಾಗೆ ಚಾನ್ಸ್ ಸಿಗುತ್ತಾ..? ಇಲ್ಲಿದೆ ಭಾರತದ ಪ್ಲೇಯಿಂಗ್ XI, ಪಿಚ್ ರಿಪೋರ್ಟ್

Pat Cummins Marriage Australian captain Pat Cummins married the mother of his child

Comments are closed.