PBKS vs KKR IPL 2024 World Record: ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2024) ನ ಪ್ರಸಕ್ತ ಋತುವಿನಲ್ಲಿ ದಾಖಲೆಯ ಮೇಲೆ ದಾಖಲೆ ಸೃಷ್ಟಿಯಾಗುತ್ತಿದೆ. ಅದ್ರಲ್ಲೂ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings)ತಂಡ ದಾಖಲೆಯ 262 ರನ್ ಗಳ ರನ್ ಚೇಸ್ ಮಾಡುವ ಮೂಲಕ ಹೊಸ ದಾಖಲೆಯನ್ನು ಬರೆದಿದೆ. T20 ಕ್ರಿಕೆಟ್ ( T20 Cricket History) ಇತಿಹಾಸದಲ್ಲಿಯೇ ಇದು ದಾಖಲೆ ಚೇಸಿಂಗ್ ಮೊತ್ತ ಎನಿಸಿಕೊಂಡಿದೆ.

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (PBKS) ಸಾರ್ವಕಾಲಿಕ ರನ್ ಚೇಸಿಂಗ್ ದಾಖಲೆಯನ್ನು ತನ್ನ ಹೆಸರಿಗೆ ಬರೆಯಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ದಾಖಲೆಯ ಮೊತ್ತದ ಸವಾಲನ್ನು ನೀಡಿತ್ತು. 262 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ T20 ಕ್ರಿಕೆಟ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಸೃಷ್ಟಿಸಿದೆ.
ಜಾನಿ ಬೈರ್‌ಸ್ಟೋವ್ (108*) ಬಿರುಸಿನ ಶತಕದೊಂದಿಗೆ ಭರ್ಜರಿ ಬ್ಯಾಟಿಂಗ್ ನಡೆಸಿದ್ರೆ, ಪ್ರಭಾಸಿಮ್ರಾನ್ ಸಿಂಗ್ (54) ಮತ್ತು ಶಶಾಂಕ್ ಸಿಂಗ್ (68*) ರನ್‌ಗಳ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡ ಕೋಲ್ಕತ್ತಾ ತಂಡ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟಿದೆ. ಈ ಅತ್ಯಧಿಕ ರನ್ ಚೇಸಿಂಗ್ IPL ಮಾತ್ರವಲ್ಲದೇ ಮತ್ತು T20 ಕ್ರಿಕೆಟ್ ಎರಡರಲ್ಲೂ ಅತ್ಯಧಿಕ ರನ್ ಚೇಸಿಂಗ್ ಅನ್ನೋ ಖ್ಯಾತಿಗೆ ಪಾತ್ರವಾಗಿದೆ.

ಇದನ್ನು ಓದಿ: SRH Vs RCB 2024: ಐಪಿಎಲ್ 2024 ರಲ್ಲಿ ವಿರಾಟ್ ಕೊಹ್ಲಿ3 ನೇ ಅರ್ಧ ಶತಕ, 400 ರನ್ ಪೂರೈಸಿದ ಆಟಗಾರ
KKR ಮತ್ತು PBKS ನಡುವಿನ ಪಂದ್ಯದಲ್ಲಿ 523 ರನ್ ಹರಿದು ಬಂದಿದೆ. ಯಾವೊಬ್ಬ ಬೌಲರ್ ಕೂಡ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡಲು ಸಾಧ್ಯವಾಗಲಿಲ್ಲ. KKR ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 261/6 ರನ್ ಗಳಿಸಿತ್ತು. ಇಷ್ಟು ಬೃಹತ್ ಸವಾಲಿನ ಮೊತ್ತವನ್ನು ಪಂಜಾಬ್ ಕಿಂಗ್ಸ್ ಬೆನ್ನಟ್ಟುತ್ತೆ ಅನ್ನೋದನ್ನು ಯಾರೂ ಊಹಿಸಿರಲಿಲ್ಲ.
ಇದನ್ನು ಓದಿ: ಐಪಿಎಲ್‌ನಲ್ಲಿ ಆರ್ಭಟಿಸಿದ ಸುನಿಲ್ ನರೈನ್ : T20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡಿಸ್ ಪರ ಆಡೋದಿಲ್ಲ ಅಂದಿದ್ಯಾಕೆ ?
ಆದರೆ ಕೋಲ್ಕತ್ತಾದ ಸವಾಲಿನ ಮೊತ್ತವನ್ನು ಬೆನ್ನಟ್ಟಲು ಹೊರಟು ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭದಲ್ಲಿ ಕೆಕೆಆರ್ ತಡೆತೊಡ್ಡಿತ್ತು. PBKS ಪವರ್‌ಪ್ಲೇ ಓವರ್‌ಗಳ ನಂತರ 93/1 ರನ್ ಗಳಿಸಲು ಮಾತ್ರವೇ ಸಾಧ್ಯವಾಗಿತ್ತು. ಆದರೆ ಜಾನಿ ಬೈರ್ ಸ್ಟೋ ಶತಕದ ಆಟವಾಡಿದ್ರೆ, ಯುವ ಆಟಗಾರ ಪ್ರಭಾಸಿಮ್ರಾನ್ ಕೇವಲ 18 ಎಸೆತಗಳಲ್ಲಿ ಅಮೋಘ ಅರ್ಧಶತಕ ಗಳಿಸುವ ಮೂಲಕ ಕೆಕೆಆರ್ ಬೌಲರ್‌ಗಳನ್ನು ದಂಡಿಸಿದ್ದಾರೆ.

ಬೈರ್‌ಸ್ಟೋವ್ ಕೇವಲ 48 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳನ್ನು ಹೊಡೆದು ಪಂದ್ಯ-ವಿಜೇತ 108* ರನ್ ಗಳಿಸಿದರು. ಮತ್ತೊಂದೆಡೆಯಲ್ಲಿ ಶಶಾಂಕ್ ಸಿಂಗ್ 28 ಎಸೆತಗಳಲ್ಲಿ 68* ರನ್ ಗಳಿಸುವ ಮೂಲಕ ಪಂಜಾಬ್ ಕಿಂಗ್ಸ್ ಐತಿಹಾಸಿಕ ರನ್ ಚೇಸ್ ಮಾಡುವಲ್ಲಿ ಸಹಕಾರಿಯಾದ್ರು.
ಇದನ್ನು ಓದಿ: ಎಂಎಸ್ ಧೋನಿ ದಾಖಲೆಯನ್ನೇ ಹಿಂದಿಕ್ಕಿದ ಕೆಎಲ್ ರಾಹುಲ್ : ಐಪಿಎಲ್ ಇತಿಹಾಸದಲ್ಲೇ ಈ ದಾಖಲೆಯನ್ನೂ ಯಾರು ಮಾಡಿಲ್ಲ
IPL ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸಿಂಗ್ ಪಟ್ಟಿ :
- ಪಂಜಾಬ್ ಕಿಂಗ್ಸ್ 262 ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಥಳ : ಕೋಲ್ಕತ್ತಾ 2024
- ರಾಜಸ್ಥಾನ್ ರಾಯಲ್ಸ್ 224 ಎದುರಾಳಿ ಕಿಂಗ್ಸ್ XI ಪಂಜಾಬ್ ಸ್ಥಳ : ಶಾರ್ಜಾ 2020
- ರಾಜಸ್ಥಾನ್ ರಾಯಲ್ಸ್ 224 ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ ಸ್ಥಳ : ಕೋಲ್ಕತ್ತಾ 2024
- ಮುಂಬೈ ಇಂಡಿಯನ್ಸ್ ಎದುರಾಳಿ 219 ಚೆನ್ನೈ ಸೂಪರ್ ಕಿಂಗ್ಸ್ ಸ್ಥಳ : ದೆಹಲಿ 2021
PBKS vs KKR IPL 2024 World Record: Punjab Kings who wrote a historic record in cricket, the highest run-chase in the history of T20 cricket