Pele health condition:ಕ್ಯಾನ್ಸರ್ ಚಿಕಿತ್ಸೆಗೆ ಸ್ಪಂದಿಸದ ಫುಟ್ಬಾಲ್ ದಿಗ್ಗಜ ಪೀಲೆ; ಪಾಲಿವೇಟಿವ್ ಕೇರ್ ಗೆ ಶಿಫ್ಟ್

ಬ್ರೆಜಿಲ್: Pele health condition: ಫುಟ್ಬಾಲ್ ಕ್ಷೇತ್ರದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಪೀಲೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವೈದ್ಯರ ಚಿಕಿತ್ಸೆಗೆ ಅವರು ಸ್ಪಂದಿಸುತ್ತಿಲ್ಲ ಹೀಗಾಗಿ ಅವರನ್ನು ಪಾಲಿವೇಟಿವ್ ಕೇರ್ ಗೆ (ಕೊನೆಕ್ಷಣದಲ್ಲಿ ಚಿಕಿತ್ಸೆ ನೀಡುವ ವಿಭಾಗ) ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿರುವ ಅವರಿಗೆ ಕಿಮೋಥೆರಪಿ ಮಾಡಲಾಗುತ್ತಿತ್ತು. ಆದರೆ ಇದೀಗ ಅದಕ್ಕೆ ಅವರು ಸ್ಪಂದಿಸದ ಹಿನ್ನೆಲೆ ಪಾಲಿವೇಟಿವ್ ಕೇರ್ ಗೆ ಶಿಫ್ಟ್ ಮಾಡಲಾಗಿದೆ.

ಮಹಾಮಾರಿ ಕ್ಯಾನ್ಸರ್ ನಿಂದ ಬಳಲುತ್ತಿರುವ ಪೀಲೆ ಅವರಿಗೆ ಕಳೆದ ವರ್ಷ ಶಸ್ತ್ರಚಿಕಿತ್ಸೆ ನಡೆಸಿ ಕ್ಯಾನ್ಸರ್ ಗಡ್ಡೆಯನ್ನು ತೆಗೆಯಲಾಗಿತ್ತು. ಆ ವೇಳೆ ಅವರು ಆಸ್ಪತ್ರೆಯಲ್ಲಿ ಒಂದು ತಿಂಗಳು ಕಳೆದಿದ್ದರು. ಆ ಬಳಿಕ ನಿರಂತರವಾಗಿ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಅಂತೆಯೇ ಕೆಲ ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಗಾಗಲೇ ಕ್ಯಾನ್ಸರ್ ನಾಲಿಗೆಗೂ ಹರಡಿತ್ತು ಎಂದು ಹೇಳಲಾಗುತ್ತಿತ್ತು. ನಿನ್ನೆ ಪೀಲೆ ಅವರ ಪುತ್ರಿ ಕೆಲಿ ನಾಸಿಮೆಂಟೊ ಅವರು, ತಂದೆಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಪ್ರತಿರೋಧಕ ಔಷಧಗಳಿಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಸಂಜೆಯಷ್ಟರಲ್ಲೇ ಬ್ರೆಜಿಲ್ ಪತ್ರಿಕೆಯೊಂದು ಪೀಲೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವರದಿ ಮಾಡಿದೆ.

ಇದನ್ನೂ ಓದಿ: Mitchell Starc : ಅಪ್ಪ-ಮಗನನ್ನು ಔಟ್ ಮಾಡಿ ವಿಶಿಷ್ಠ ದಾಖಲೆ ಬರೆದ ಮಿಚೆಲ್ ಸ್ಟಾರ್ಕ್

ಆಸ್ಪತ್ರೆಗೆ ದಾಖಲಾದ ಬಳಿಕ ಪೀಲೆ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಅಲ್ಲದೇ ಫುಟ್ಬಾಲ್ ವಿಶ್ವಕಪ್ ವೇಳೆ ತಮ್ಮನ್ನು ಸ್ಮರಿಸಿದ್ದಕ್ಕಾಗಿಯೂ ಧನ್ಯವಾದ ತಿಳಿಸಿದ್ದರು. ಸ್ನೇಹಿತರೇ ನಾನು ತಿಂಗಳ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದೇನೆ. ಈ ರೀತಿಯ ಉತ್ತಮ ಸಂದೇಶಗಳನ್ನು ಪಡೆಯುವುದು ನನಗೆ ಸಂತೋಷದ ವಿಚಾರವಾಗಿದೆ ಎಂದು ಇನ್ ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.

ಇದನ್ನೂ ಓದಿ: Rajinikanth movie re-release : ತನ್ನ 72ನೇ ಬರ್ತ್ ಡೇಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ತಲೈವಾ..!

ಬ್ರೆಜಿಲ್ ನ ದಂತಕಥೆ ಎಂದೇ ಕರೆಯಲ್ಪಡುವ ಪೀಲೆ ಅವರಿಗೆ ಈಗ 82 ವರ್ಷ ವಯಸ್ಸು. ಅವರನ್ನು ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದೇ ಪರಿಗಣಿಸಲಾಗಿದೆ. ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ ಅವರ ನಿಜವಾದ ಹೆಸರು. ಫುಟ್ಬಾಲ್ ಇತಿಹಾಸದಲ್ಲಿ 3 ವಿಶ್ವಕಪ್ ಗಳನ್ನು ಗೆದ್ದ (1958, 1962, 1970) ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಇವರದ್ದು. 1977ರಲ್ಲಿ ಅವರು ನಿವೃತ್ತರಾಗುವ ಮೊದಲು ಸಾವಿರಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ ಕೀರ್ತಿಗೆ ಬಾಜನರಾಗಿದ್ದರು. 1956ರಿಂದ 1974ರವರೆಗೆ ಬ್ರೆಜಿಲ್ ನ ಸ್ಯಾಂಟೊಸ್ ಕ್ಲಬ್ ಪರ ಆಡಿದ್ದ ಪೀಲೆ ಅವರು 757 ಪಂದ್ಯಗಳಲ್ಲಿ 643 ಗೋಲ್ ಬಾರಿಸಿ ಫುಟ್ಬಾಲ್ ಇತಿಹಾಸದಲ್ಲೇ ಯಾರನ್ನೂ ಮಾಡದ ಸಾಧನೆಯನ್ನು ಮಾಡಿದ್ದರು. ಈ ಅಪೂರ್ವ ದಾಖಲೆಯನ್ನು ಮೆಸ್ಸಿ 644 ಗೋಲು ಗಳಿಸುವ ಮೂಲಕ ಮುರಿದಿದ್ದರು.

Pele health condition: Football legend Pele is not responding to cancer treatment Shifted to palliative care

Comments are closed.