Rajinikanth movie re-release : ತನ್ನ 72ನೇ ಬರ್ತ್ ಡೇಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲಿದ್ದಾರೆ ತಲೈವಾ..!

ಚೆನ್ನೈ: Rajinikanth movie re-release: ರಜನಿಕಾಂತ್ ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಒಂದು ಗುಡ್ ನ್ಯೂಸ್ ನೀಡಲಿದ್ದಾರೆ. ಇದು ನಿಜಕ್ಕೂ ಅಭಿಮಾನಿಗಳಿಗೆ ಸಿಹಿ ಸುದ್ದಿ. ಯಾಕಂದ್ರೆ ಈ ಬಾರಿ ತಲೈವಾ ಹುಟ್ಟುಹಬ್ಬದಂದು 20 ವರ್ಷಗಳ ಹಿಂದಿನ ರಜನಿಕಾಂತ್ ರನ್ನು ದೊಡ್ಡ ಪರದೆ ಮೇಲೆ ಕಾಣುವ ಸೌಭಾಗ್ಯ ಅಭಿಮಾನಿಗಳ ಪಾಲಿಗೆ ಒದಗಿಬಂದಿದೆ. ವಿಷಯ ಇಷ್ಟೆ. 20 ವರ್ಷಗಳ ಹಿಂದಿನ ತಮ್ಮ ಸಿನಿಮಾವೊಂದನ್ನು ರಿ ರಿಲೀಸ್ ಮಾಡಲು ರಜನಿಕಾಂತ್ ಮುಂದಾಗಿದ್ದಾರೆ.

2002ರಲ್ಲಿ ತೆರೆ ಕಂಡಿದ್ದ ರಜನಿಕಾಂತ್ ಅವರ ಬಾಬಾ ಸಿನಿಮಾ ಮತ್ತೆ ತೆರೆಗೆ ಬರಲು ಸಜ್ಜಾಗಿದೆ. ಚಿತ್ರವನ್ನು ಅಪ್ ಗ್ರೇಡ್ ಮಾಡಿ ತೆರೆಗೆ ತರಲಾಗುತ್ತಿದೆ. ಖುದ್ದು ರಜನಿಕಾಂತ್ ಅವರೇ ಟ್ವಟಿರ್ ನಲ್ಲಿ ಚಿತ್ರದ ಟ್ರೈಲರ್ ಹಂಚಿಕೊಂಡು ಸಿನಿಮಾ ಮತ್ತೆ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಅಂದಹಾಗೆ ಈ ಸಿನಿಮಾ ಡಿ.12ರಂದು ತಮಿಳುನಾಡಿನ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಅದೇ ದಿನ ರಜನಿಕಾಂತ್ ಬರ್ತ್ ಡೇ ಅನ್ನೋದು ಕೂಡಾ ವಿಶೇಷ.

ಇದನ್ನೂ ಓದಿ: Mobile ban in temple: ತಮಿಳುನಾಡಿನ ದೇವಸ್ಥಾನಗಳಲ್ಲಿ ಇನ್ಮುಂದೆ ಮೊಬೈಲ್ ಬಳಸುವಂತಿಲ್ಲ; ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ

ಬಾಬಾ ಸಿನಿಮಾದಲ್ಲಿ ರಜನಿಕಾಂತ್ ಅವರಿಗೆ ಜೋಡಿಯಾಗಿ ಮನಿಷಾ ಕೊಯಿರಾಲಾ ಅಭಿನಯಿಸಿದ್ದರು. 2002ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. ಆದರೆ ಆಗಿನ ಕಾಲದಲ್ಲಿ ಈ ಸಿನಿಮಾ ಅಷ್ಟೊಂದು ಹಿಟ್ ಆಗಿರಲಿಲ್ಲ. ಹೀಗಾಗಿ ಈ ಬಾರಿ ಅಪ್ ಡೇಟ್ ವರ್ಷನ್ ಮೂಲಕ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ತಲೈವಾ ಸಿದ್ಧರಾಗಿದ್ದಾರೆ. ಸದ್ಯ ಸಿನಿಮಾದ ಟ್ರೈಲರ್ ಹಂಚಿಕೊಂಡು ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ ಬಾಬಾ ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಬಾಬಾ ಸಿನಿಮಾಗೆ ಹೊಸ ರೀತಿಯ ಕಲರ್ ಗ್ರೇಡಿಂಗ್ ನೀಡಲಾಗಿದ್ದು, ರಜನಿಕಾಂತ್ ಅವರು ಈ ಚಿತ್ರಕ್ಕಾಗಿ ಮತ್ತೊಮ್ಮೆ ವಾಯ್ಸ್ ಡಬ್ಬಿಂಗ್ ಮಾಡಿದ್ದಾರೆ. ಅಲ್ಲದೇ ಸಂಗೀತದಲ್ಲೂ ಹೊಸತನವನ್ನು ತರಲಾಗಿದ್ದು, ಅನಾವಶ್ಯಕ ಸೀನ್ ಗಳನ್ನು ಕಟ್ ಮಾಡಿ ಹಳೆಯ ಸಿನಿಮಾಗಿಂತ 30 ನಿಮಿಷಗಳ ಕಾಲ ಚಿಕ್ಕದಾಗಿ ಮಾಡಲಾಗಿದೆ.

ಇದನ್ನೂ ಓದಿ: Pathan Movie : ಒಂದೇ ಸಿನಿಮಾ ಎಂಟು ದೇಶದಲ್ಲಿ ಚಿತ್ರೀಕರಿಸಿದ ಶಾರುಖ್‌ : ಟೀಸರ್‌ ಶ್ರೀಘ್ರದಲ್ಲೇ

ಬಾಬಾ ಸಿನಿಮಾವು ದೈವಿಕ ಶಕ್ತಿಯನ್ನು ಒಳಗೊಂಡ ಚಿತ್ರವಾಗಿದೆ. ಬಾಕ್ಸಾಫೀಸ್ ನಲ್ಲಿ ಸೋತಿದ್ದ ಈ ನಿರ್ದಿಷ್ಟ ಸಿನಿಮಾವನ್ನೇ ನವೀಕರಣಗೊಳಿಸಿ ಮತ್ತೆ ತೆರೆಗೆ ತರುವ ಆಲೋಚನೆ ಯಾಕೆ ಎಂಬ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಚಿತ್ರ ಟಡನಿರ್ದೇಶಕ ಸುರೇಶ್ ಕೃಷ್ಣರನ್ನು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಅವರು ದೈವಿಕ ಹಾಗೂ ಕಾಲ್ಪನಿಕ ಸಿನಿಮಾಗಳನ್ನೇ ಈಗಿನ ಜನರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಈ ಸಿನಿಮಾವು ಅಂಥದ್ದೇ ಕಥೆ ಹೊಂದಿದ್ದು ಹೀಗಾಗಿ ಅದನ್ನು ಮತ್ತೆ ತೆರೆಗೆ ತರುವ ನಿರ್ಧಾರವನ್ನು ತಿಳಿಸಿದ್ದರು. ಅಂದಹಾಗೆ ದೇಶ-ವಿದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಕಾಂತಾರ ಸಿನಿಮಾ ಕೂಡಾ ದೈವಿಕ ಶಕ್ತಿಯುಳ್ಳ ಕಥೆಯಾಗಿದೆ.

Rajinikanth movie re-release : Thalaiva will give good news to his fans on his 72nd birthday

Comments are closed.