Prithvi Shaw: ಇಂಗ್ಲೆಂಡ್ ಕೌಂಟಿ ಕ್ರಿಕೆಟ್’ನಲ್ಲಿ ಸಿಡಿಲಬ್ಬರದ ದ್ವಿಶಥಕ ಬಾರಿಸಿದ ಪೃಥ್ವಿ ಶಾ

ಲಂಡನ್: ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗುತ್ತಿರುವ ಮುಂಬೈನ ಯುವ ಕ್ರಿಕೆಟಿಗ ಪೃಥ್ವಿ ಶಾ, ಇಂಗ್ಲೆಂಡ್ ಕೌಂಟಿ ಕ್ರಿಕೆಟ್’ನಲ್ಲಿ ಸಿಡಿಲಬ್ಬರದ ದ್ವಿಶತಕದೊಂದಿಗೆ (Prithvi Shaw) ಅಬ್ಬರಿಸಿದ್ದಾರೆ. ನಾರ್ಥಾಂಪ್ಟನ್’ನಲ್ಲಿರುವ ಕೌಂಟ್ರಿ ಗ್ರೌಂಡ್’ನಲ್ಲಿ ನಡೆದ ಮೆಟ್ರೋ ಬ್ಯಾಂಕ್ ವಂಡೇ ಕಪ್ ಟೂರ್ನಿಯ ಪಂದ್ಯದಲ್ಲಿ ಪೃಥ್ವಿ ಶಾ ಕೇವಲ 153 ಎಸೆತಗಳಲ್ಲಿ 244 ರನ್ ಬಾರಿಸಿದ್ದಾರೆ.

ನಾರ್ಥಾಂಪ್ಟನ್’ಶೈರ್ ಪರ ಆಡುತ್ತಿರುವ 23 ವರ್ಷದ ಪೃಥ್ವಿ ಶಾ, ಸಾಮರ್ಸೆಟ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ 28 ಬೌಂಡರಿ ಹಾಗೂ 11 ಸಿಕ್ಸರ್’ಗಳ ನೆರವಿನಿಂದ ಸ್ಫೋಟಕ ದ್ವಿಶತಕ ಬಾರಿಸಿದರು. ಪೃಥ್ವಿ ಶಾ ಅವರ ಡಬಲ್ ಸೆಂಚುರಿ ನೆರವಿನಿಂದ ನಾರ್ಫಾಂಪ್ಟನ್’ಶೈರ್ 50 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 415 ರನ್ ಕಲೆ ಹಾಕಿದರೆ, ಗುರಿ ಬೆನ್ನಟ್ಟಿದ ಸಾಮರ್ಸೆಟ್ 45.1 ಓವರ್’ಗಳಲ್ಲಿ 328 ರನ್’ಗಳಿಗೆ ಆಲೌಟಾಗಿ 87 ರನ್’ಗಳಿಂದ ಸೋಲು ಕಂಡಿತು.

ಮುಂಬೈ ಬ್ಯಾಟ್ಸ್’ಮನ್ ಪೃಥ್ವಿ ಶಾ ಅವರಿಗೆ ಇದು ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ 2ನೇ ದ್ವಿಶತಕ. 2021ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪುದುಚೇರಿ ವಿರುದ್ಧ ಪೃಥ್ವಿ ಶಾ 227 ರನ್ ಸಿಡಿಸಿದ್ದರು. ಸಾಮರ್ಸೆಟ್ ವಿರುದ್ಧ ಕೇವಲ 81 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ ಪೃಥ್ವಿ ಶಾ, ನಂತರದ 48 ಎಸೆತಗಳಲ್ಲಿ ದ್ವಿಶತಕ ಪೂರ್ತಿಗೊಳಿಸಿದರು.

ಇಂಗ್ಲೆಂಡ್ ಕೌಂಟಿ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸುವ ಮೂಲಕ ಪೃಥ್ವಿ ಶಾ, ತಮ್ಮನ್ನು ಕಡೆಗಣಿಸುತ್ತಿರುವ ಬಿಸಿಸಿಐ ಆಯ್ಕೆ ಸಮಿತಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ದ್ವಿಶತಕದೊಂದಿಗೆ ಅಬ್ಬರಿಸುವ ಮೂಲಕ ಪೃಥ್ವಿ ಶಾ ಲಿಸ್ಟ್ ಎ ಕ್ರಿಕೆಟ್’ನಲ್ಲಿ 6ನೇ ಗರಿಷ್ಠ ಸ್ಕೋರ್ ದಾಖಲಿಸಿದ ಹಿರಿಮೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : Rohit Sharma’s net worth: ರೋಹಿತ್ ಶರ್ಮಾ ಎಷ್ಟು ಶ್ರೀಮಂತ ಗೊತ್ತಾ? ಟೀಮ್ ಇಂಡಿಯಾ ನಾಯಕ ಎಷ್ಟು ಕೋಟಿಗಳಿಗೆ ಒಡೆಯ?

Prithvi Shaw: ಲಿಸ್ಟ್ ‘ಎ’ ಕ್ರಿಕೆಟ್’ನಲ್ಲಿ ವೈಯಕ್ತಿಕ ಟಾಪ್ ಸ್ಕೋರ್

  • 277: ಎನ್.ಜಗದೀಶನ್ (ತಮಿಳುನಾಡು, 2022)
  • 268: ಅಲಿಸ್ಟರ್ ಬ್ರೌನ್ (ಸರ್ರೆ, 2002)
  • 264: ರೋಹಿತ್ ಶರ್ಮಾ (ಭಾರತ, 2014)
  • 257: ಡಾರ್ಸಿ ಶಾರ್ಟ್ (ವೆಸ್ಟರ್ನ್ ಆಸ್ಟ್ರೇಲಿಯಾ, 2018)
  • 248: ಶಿಖರ್ ಧವನ್ (ಭಾರತ ಎ, 2013)
  • 244: ಪೃಥ್ವಿ ಶಾ (ನಾರ್ಥಾಂಪ್ಟನ್’ಶೈರ್, 2023)

Prithvi Shaw scored a thunderous double century in England county cricket

Comments are closed.