Pro Kabaddi League: ಇಂದಿನಿಂದ ಮುತ್ತಿನ ನಗರಿಯಲ್ಲಿ ಕಬಡ್ಡಿ ಹಬ್ಬ, ಮೊದಲ ದಿನವೇ ತ್ರಿಪಲ್ ಪಂಗಾ

ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿ (PKL 2022) ಮುತ್ತಿನ ನಗರಿ ಹೈದರಾಬಾದ್’ಗೆ ಕಾಲಿಟ್ಟಿದ್ದು, ಮೊದಲ ದಿನವಾದ ಶುಕ್ರವಾರ ಮೂರು ಪಂದ್ಯಗಳು ನಡೆಯಲಿವೆ. ಮೊದಲ ಚರಣದಲ್ಲಿ ಬೆಂಗಳೂರು, 2ನೇ ಚರಣದಲ್ಲಿ ಪುಣೆಯಲ್ಲಿ ಪಂದ್ಯಗಳು ನಡೆದಿದ್ದವು. ಇದೀಗ ಪ್ರೊ ಕಬಡ್ಡಿ ಲೀಗ್’ನ ಮೂರನೇ ಚರಣದ ಪಂದ್ಯಗಳಿಗೆ ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಮೊದಲ ದಿನವಾದ ಶುಕ್ರವಾರ 3 ಪಂದ್ಯಗಳು ನಡೆಯಲಿದ್ದು, ಟೇಬಲ್ ಟಾಪರ್ ಬೆಂಗಳೂರು ಬುಲ್ಸ್ ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ಅಂಕಪಟ್ಟಿಯ 2ನೇ ಸ್ಥಾನಿ ಪುಣೇರಿ ಪಲ್ಟನ್ ಪಡೆ, ಹರ್ಯಾಣ ಸ್ಟೀಲರ್ಸ್ ಸವಾಲನ್ನು ಎದುರಿಸಲಿದ್ರೆ, ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ತಂಡ, ಆತಿಥೇಯ ತೆಲುಗು ಟೈಟನ್ಸ್ ಸವಾಲನ್ನು ಎದುರಿಸಲಿದೆ.

ತೆಲುಗು ಟೈಟನ್ಸ್ ತಂಡ ಆಡಿರುವ 14 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಪಡೆದಿದ್ದು 13 ಸೋಲು ಕಂಡು 9 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಕ್ಟೋಬರ್ 11ರಂದು ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ವಿರುದ್ಧ ಗೆದ್ದಿದ್ದ ತೆಲುಗು ಟೈಟನ್ಸ್, ನಂತರ ಗೆಲುವಿನ ಮುಖವನ್ನೇ ಕಂಡಿಲ್ಲ. ಅದರಲ್ಲೂ ಕಳೆದ 11 ಪಂದ್ಯದಳಲ್ಲಿ ಸತತ ಸೋಲು ಕಂಡಿದ್ದು, ತವರು ನೆಲದಲ್ಲಿ ತಂಡದ ಹಣೆಬರಹ ಬದಲಾಗುವ ನಿರೀಕ್ಷೆಯಲ್ಲಿದೆ.

ಕಣದಲ್ಲಿರುವ 12 ತಂಡಗಳಿಗೆ ಇನ್ನು ತಲಾ 8 ಲೀಗ್ ಪಂದ್ಯಗಳು ಬಾಕಿಯಿವೆ. ಅಂಕಪಟ್ಟಿಯಲ್ಲಿ ಅಗ್ರ ಆರು ಸ್ಥಾನಗಳನ್ನು ಪಡೆಯುವ ತಂಡಗಳು ಪ್ಲೇ ಆಫ್ ಹಂತ ಪ್ರವೇಶಿಸಲಿವೆ. 6ನೇ ಆವೃತ್ತಿಯ ಚಾಂಪಿಯನ್ ಬೆಂಗಳೂರು ಬುಲ್ಸ್ ಆಡಿರುವ 14 ಪಂದ್ಯಗಳಲ್ಲಿ 9 ಗೆಲುವುಗಳ ಸಹಿತ 51 ಅಂಕ ಗಳಿಸಿದ್ದು ಅಗ್ರಸ್ಥಾನದಲ್ಲಿದ್ರೆ, ಪುಣೇರಿ ಪಲ್ಟನ್ 49 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ (49 ಅಂಕ) 3ನೇ ಸ್ಥಾನದಲ್ಲಿದ್ರೆ, ಯು.ಪಿ ಯೋಧಾ (45 ಅಂಕ), ಯು ಮುಂಬಾ (43 ಅಂಕ) ಮತ್ತು ಪಾಟ್ನಾ ಪೈರೇಟ್ಸ್ (41 ಅಂಕ) ಕ್ರಮವಾಗಿ 4, 5 ಮತ್ತು 6ನೇ ಸ್ಥಾನಗಳಲ್ಲಿವೆ.

ಪ್ರೊ ಕಬಡ್ಡಿ ಲೀಗ್-9 (PKL 2022) : ಶುಕ್ರವಾರದ ಪಂದ್ಯಗಳು

  1. ಪುಣೇರಿ ಪಲ್ಟನ್ Vs ಹರ್ಯಾಣ ಸ್ಟೀಲರ್ಸ್
  2. ಬೆಂಗಾಲ್ ವಾರಿಯರ್ಸ್ Vs ತೆಲುಗು ಟೈಟನ್ಸ್
  3. ಗುಜರಾತ್ ಜೈಂಟ್ಸ್ Vs ಬೆಂಗಳೂರು ಬುಲ್ಸ್

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

ಇದನ್ನೂ ಓದಿ : Dhoni’s successor: ಸಿಎಸ್‌ಕೆ ಯಲ್ಲಿ ಧೋನಿ ಉತ್ತರಾಧಿಕಾರಿಯಾಗ್ತಾನಾ ಈ ಯುವ ಆಟಗಾರ..? ಚೆನ್ನೈ ನಾಯಕತ್ವಕ್ಕೆ ಅಚ್ಚರಿಯ ಆಯ್ಕೆ..?

ಇದನ್ನೂ ಓದಿ : Team India players in Beach : ವೆಲ್ಲಿಂಗ್ಟನ್ ಬೀಚ್‌ನಲ್ಲಿ ಟೀಮ್ ಇಂಡಿಯಾ ಆಟಗಾರರ “ಬಾಡಿ” ಪ್ರದರ್ಶನ, ವೀಡಿಯೊ ವೈರಲ್

Pro Kabaddi League 3 Matches today PKL 2022

Comments are closed.