Winter And Sesame Seeds : ಚಳಿಗಾಲದಲ್ಲಿ ಎಳ್ಳನ್ನು ಬಳಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…

ಚಳಿಗಾಲ (Winter) ದಲ್ಲಿ ಉಷ್ಣತೆಯು ಕನಿಷ್ಠ ಮಟ್ಟವನ್ನು ತಲುಪುವುದರಿಂದ ನಮ್ಮ ದೇಹವು ಅನೇಕ ಖಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಚಳಿಗಾಲದಲ್ಲಿ ನಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರ ಮೂಲಕ ದೇಹವನ್ನು ಬೆಚ್ಚಗೆ ಇಡಬಹುದು. ಎಳ್ಳು (Sesame Seeds) ನೈಸರ್ಗಿಕವಾಗಿಯೇ ಉಷ್ಣ ಗುಣವನ್ನು ಹೊಂದಿದೆ. ಇದನ್ನು ಚಳಿಗಾಲದಲ್ಲಿ (Winter And Sesame Seeds) ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಇವೆ. ಎಳ್ಳು ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಉತ್ತಮವಾಗಿದೆ. ಇದು ಚಳಿಗಾಲದಲ್ಲಿ ಕೂದಲು ಒರಟಾಗುವುದನ್ನು ತಡೆಯುತ್ತದೆ.

ಚಳಿಗಾಲದಲ್ಲಿ ಎಳ್ಳನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು:

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಎಳ್ಳು ನೋಡಲು ಚಿಕ್ಕದಾದರೂ ತನ್ನಲ್ಲಿ ಅನೇಕ ಪೋಷಕಾಂಶಗಳನ್ನು ಅಡಗಿಸಿಟ್ಟುಕೊಂಡಿದೆ. ಎಳ್ಳಿನಲ್ಲಿ ವಿಟಮಿನ್‌ ಬ6, ವಿಟಮಿನ್‌ E, ಕಾಪರ್‌, ಐರನ್‌, ಝಿಂಕ್‌ ಮತ್ತು ಸೆಲೇನಿಯಂಗಳಿವೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ:
ಚಳಿಗಾಲದಲ್ಲಿ ಸಿಹಿತಿನಿಸುಗಳ ಸೇವನೆ ಸ್ವಲ್ಪ ಹೆಚ್ಚು. ಎಳ್ಳಿನಲ್ಲಿ ಪ್ರೋಟೀನ್‌ ಮತ್ತು ಉತ್ತಮ ಫ್ಯಾಟ್‌ಗಳು ಅಧಿಕವಾಗಿದ್ದು, ಕಾರ್ಬೋಹೈಡ್ರೇಟ್‌ ಕಡಿಮೆ ಪ್ರಮಾಣದಲ್ಲಿದೆ. ಇವು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಉರಿಯೂತವನ್ನು ಶಮನಗೊಳಿಸುತ್ತದೆ:
ಚಳಿಗಾಲದಲ್ಲಿ ಆಗಾಗ ಉರಿಯೂತ ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲೂ ವಯಸ್ಸಾದವರು ಕೀಲು, ಬೆನ್ನು ಮತ್ತು ಮೊಣಕಾಲಿನ ನೋವಿನಿಂದ ಬಳಲುತ್ತಾರೆ. ಎಳ್ಳಿನಲ್ಲಿರುವ ಸೆಸಮಾಲ್‌ ಉರಿಯೂತವನ್ನು ಉಂಟು ಮಾಡುವ ಅಣುಗಳನ್ನು ತಡೆಯುತ್ತದೆ.

ದೇಹಕ್ಕೆ ಶಕ್ತಿಯನ್ನು ಪೂರೈಸುತ್ತದೆ:
ಚಳಿಗಾಲದಲ್ಲಿ ನಿದ್ದೆ ಮತ್ತು ಆಲಸ್ಯ ಹೆಚ್ಚು. ಎಳ್ಳಿನಲ್ಲಿರುವ ಒಮೆಗಾ–3 ಕೊಬ್ಬು ದೇಹದಲ್ಲಿ ಶಕ್ತಿಯ ಮಟ್ಟವನ್ನು ಹೆಚ್ಚಿಸಿ, ಉಷ್ಣತೆಯನ್ನು ನೀಡುತ್ತದೆ.

ಜೀರ್ಣಕ್ರಿಯೆಯನ್ನು ಸಲಭವಾಗಿಸುತ್ತದೆ:
ಚಳಿಗಾಲದಲ್ಲಿ ಮಲಬದ್ಧತೆಯ ಸಮಸ್ಯೆ ಹೆಚ್ಚು. ಎಳ್ಳು ಅನ್‌ಸ್ಯಾಚುರೇಟೆಡ್‌ ಫ್ಯಾಟಿ ಆಸಿಡ್‌ ಮತ್ತು ಫೈಬರ್‌ ಅಂಶಗಳನ್ನು ಹೊಂದಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸಿ, ಮಲಬದ್ಧತೆಯ ಸಮಸ್ಯೆಯನ್ನು ದೂರಮಾಡುತ್ತದೆ.

ಎಳ್ಳಿನಿಂದ ಮಾಡಬಹುದಾದ ತಿಂಡಿಗಳು:
ಸಿಹಿ ತಿನಿಸುಗಳ ತಯಾರಿಕೆಯಲ್ಲಿ ಎಳ್ಳಿನ ಬಳಕೆ ಹೆಚ್ಚು. ಇದರಿಂದ ಎಳ್ಳುಂಡೆ, ಎಳ್ಳು ಮತ್ತು ಶೇಂಗಾ ಸೇರಿಸಿ ಮಾಡಿದ ಚಿಕ್ಕಿ, ಎಳ್ಳಿನ ಪಾನಕ ಮುಂತಾದವುಗಳನ್ನು ತಯಾರಿಸುತ್ತಾರೆ. ಎಳ್ಳಿನಿಂದ ತಯಾರಿಸಿದ ತಿಂಡಿಗಳನ್ನು ತಿನ್ನುವುದರಿಂದ ಚಳಿಗಾಲದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಇದನ್ನೂ ಓದಿ: Ginger Chocolate Recipe:ಕೆಮ್ಮಿನಿಂದ ನಿಮ್ಮ ಮಕ್ಕಳು ನಿದ್ದೆ ಮಾಡ್ತಿಲ್ವಾ? ಹಾಗಾದ್ರೆ ಶುಂಠಿ ಚಾಕಲೇಟ್‌ ಮಾಡಿ ಕೊಡಿ

ಇದನ್ನೂ ಓದಿ: Cup Cake Recipe: ಓವನ್, ಮೊಟ್ಟೆ ಬಳಸದೆ ತಯಾರಿಸಿ ಕಪ್ ಕೇಕ್

(Winter And Sesame Seeds, Do you know the benefits of sesame seeds?)

Comments are closed.