ಸೋಮವಾರ, ಏಪ್ರಿಲ್ 28, 2025
HomeSportsCricketPV Shashikanth: ಕರ್ನಾಟಕ ರಣಜಿ ತಂಡಕ್ಕೆ ಪಿ.ವಿ ಶಶಿಕಾಂತ್ ಹೆಡ್ ಕೋಚ್

PV Shashikanth: ಕರ್ನಾಟಕ ರಣಜಿ ತಂಡಕ್ಕೆ ಪಿ.ವಿ ಶಶಿಕಾಂತ್ ಹೆಡ್ ಕೋಚ್

- Advertisement -

ಬೆಂಗಳೂರು: ಕರ್ನಾಟಕ ರಣಜಿ ತಂಡದ ನೂತನ ಕೋಚ್ ಆಗಿ ಮಾಜಿ ಕ್ರಿಕೆಟಿಗ ಪಿ.ವಿ ಶಶಿಕಾಂತ್ (PV Shashikanth) ನೇಮಕಗೊಂಡಿದ್ದಾರೆ. ಕರ್ನಾಟಕ ತಂಡದ ಮಾಜಿ ನಾಯಕರೂ ಆಗಿರುವ ಪಿ.ವಿ ಶಶಿಕಾಂತ್ (PV Shashikanth) 2017-18ನೇ ಸಾಲಿನಲ್ಲಿ ರಾಜ್ಯ ತಂಡದ ಕೋಚ್ ಆಗಿದ್ದರು. ಶಶಿಕಾಂತ್ ಕೋಚ್ ಆಗಿದ್ದಾಗ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.

ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ತಂಡದ ಕೋಚ್ ಆಗಿದ್ದ ಯರೇಗೌಡ ಅವರ ಅವಧಿ ಈ ವರ್ಷಕ್ಕೆ ಕೊನೆಗೊಂಡಿತ್ತು. ಹೀಗಾಗಿ 5 ವರ್ಷಗಳ ಬಳಿಕ ಮತ್ತೆ ಪಿ.ವಿ ಶಶಿಕಾಂತ್ ಅವರನ್ನೇ ಕೋಚ್ ಆಗಿ ನೇಮಕ ಮಾಡಲಾಗಿದೆ. ರಾಜ್ಯದ ತಂಡ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮಾಜಿ ಕ್ರಿಕೆಟಿಗ ಫಜಲ್ ಖಲೀಲ್ ಮುಂದುವರಿದಿದ್ದು, ಸದಸ್ಯರಾಗಿ ಆನಂದ್ ಕಟ್ಟಿ, ರಮೇಶ್ ಹೆಜಮಾಡಿ ಮತ್ತು ಕೆ.ಎಲ್ ಅಶ್ವತ್ಥ್ ಸ್ಥಾನ ಪಡೆದಿದ್ದಾರೆ.

ವಿವಿಧ ವಯೋಮಿತಿಗಳಲ್ಲಿ ಕರ್ನಾಟಕದ ತಂಡಗಳ ಹೆಡ್ ಕೋಚ್’ಗಳು

ಕರ್ನಾಟಕ ಸೀನಿಯರ್ ತಂಡ: ಪಿ.ವಿ ಶಶಿಕಾಂತ್
ಕರ್ನಾಟಕ ಅಂಡರ್-25: ನಿಖಿಲ್ ಹಲ್ದೀಪುರ್
ಕರ್ನಾಟಕ ಅಂಡರ್-19: ಕೆ.ಬಿ ಪವನ್
ಕರ್ನಾಟಕ ಅಂಡರ್-16 ಮತ್ತು ಅಂಡರ್-14: ಕುನಾಲ್ ಕಪೂರ್

ಕರ್ನಾಟಕ ಮಹಿಳಾ ತಂಡ: ಲಕ್ಷ್ಮೀ ಹರಿಹರನ್
ಕರ್ನಾಟಕ ಮಹಿಳಾ ಅಂಡರ್-19 ತಂಡ: ಕರುಣಾ ಜೈನ್
ಕರ್ನಾಟಕ ಮಹಿಳಾ ಅಂಡರ್-16 ತಂಡ: ವಿ.ಆರ್ ವನಿತಾ

ಪಿ.ವಿ ಶಶಿಕಾಂತ್ ಅವರ ಹಿನ್ನೆಲೆ ನಿಮಗೆ ಗೊತ್ತಾ ?

ಪಿ.ವಿ. ಶಶಿಕಾಂತ್ 1987/88 ರಿಂದ 1996/97 ವರೆಗೆ ಕರ್ನಾಟಕ ತಂಡದ ಪರವಾಗಿ ಆಡಿದ್ದರು. ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ನಂತರ ಕ್ರಿಕೆಟ್ ಕೋಚ್ ಆಗಿ ಕೆಲಸ ಮಾಡಿದರು ಮತ್ತು ಏಪ್ರಿಲ್ 2017 ರಲ್ಲಿ ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. 1966 ರಂದು ಮಂಗಳೂರಿನಲ್ಲಿ ಜನಿಸಿದ ಪಿ.ವಿ.ಶಶಿಕಾಂತ್‌ ಅವರು ಬಾಲ್ಯದಿಂದಲೇ ಕ್ರಿಕೆಟ್‌ನತ್ತ ಹೆಚ್ಚು ಆಸಕ್ತಿಯನ್ನು ಹೊಂದಿದ್ದರು. ಇದೇ ಕಾರಣಕ್ಕೆ ತಮ್ಮ ಸಹೋದರ P. V. ಮೋಹನ್ ಅವರ ಸಲಹೆಯ ಮೇರೆಗೆ ಬೆಂಗಳೂರಿಗೆ ಶಿಫ್ಟ್‌ ಆಗಿದ್ದರು. ಅಲ್ಲದೇ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿಗೆ ಸೇರ್ಪಡೆಗೊಂಡಿದ್ದ ಅವರು ಕಾಲೇಜು ತಂಡದ ನಾಯಕರಾಗಿಯೂ ಆಯ್ಕೆಯಾಗಿದ್ದರು. ಕಾಲೇಜು ಮಟ್ಟದ ಕ್ರಿಕೆಟ್‌ನಲ್ಲಿ ಗಮನ ಸೆಳೆಯುವ ಆಟವನ್ನು ಪ್ರದರ್ಶಿಸಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಸ್ಟೇಟ್‌ ಕ್ರಿಕೆಟ್‌ ಅಸೋಸಿಯೇಶನ್‌ ಆಯೋಜಿಸುವ ಹಲವು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದರು.

ಅಲ್ಲದೇ ಕೆಎಸ್‌ಸಿಎ ಲೀಗ್‌ ಪಂದ್ಯಗಳಲ್ಲಿ ಅತೀ ಹೆಚ್ಚು ರನ್‌ ಕಲೆಹಾಕಿದ ಕಾರಣಕ್ಕೆ ಶಶಿಕಾಂತ್ 1988-89 ರಣಜಿ ಟ್ರೋಫಿಯಲ್ಲಿ ಕರ್ನಾಟಕಕ್ಕಾಗಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಹತ್ತು ಋತುಗಳಲ್ಲಿಒಟ್ಟು 51 ಪ್ರಥಮ ದರ್ಜೆ ಮತ್ತು 19 ಲಿಸ್ಟ್ A ಪಂದ್ಯಗಳನ್ನು ಆಡಿದ್ದಾರೆ. 1994 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಸನ್ ಗ್ರೇಸ್ XI ವಿರುದ್ಧ ಮೊಯಿನ್-ಉದ್-ದೌಲಾಹ್ ಗೋಲ್ಡ್ ಕಪ್ ಟೂರ್ನಮೆಂಟ್‌ನಲ್ಲಿ ಕರ್ನಾಟಕವನ್ನು ಗೆಲುವಿನತ್ತ ಮುನ್ನಡೆಸಿದರು. ಅಲ್ಲದೇ 1996-97 ರ ಇರಾನಿ ಟ್ರೋಫಿಯಲ್ಲಿ ನವಜೋತ್ ಸಿಂಗ್ ಸಿಧು ನಾಯಕತ್ವದ ರೆಸ್ಟ್ ಆಫ್ ಇಂಡಿಯಾ ತಂಡದ ವಿರುದ್ದದ ಪಂದ್ಯದಲ್ಲಿ ಕರ್ನಾಟಕವನ್ನು ಗೆಲುವಿನ ದಡ ತಲುಪಿಸಿದ್ದರು. ಇನ್ನು ಅಕ್ಟೋಬರ್ 1999 ರಲ್ಲಿ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.

ವಿಜಯಾ ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿರುವ ಶಶಿಕಾಂತ್ ನಿವೃತ್ತಿಯ ನಂತರ ಕ್ರಿಕೆಟ್‌ನೊಂದಿಗೆ ಸಂಬಂಧವನ್ನು ಮುಂದುವರೆಸಿದರು, ರಾಜ್ಯದ ವಿವಿದ ವಯೋಮಾನದ ತಂಡಗಳಿಗೆ ತರಬೇತಿ ನೀಡಿದರು. ಏಪ್ರಿಲ್ 2017 ರಲ್ಲಿ, ಅವರು ಜೆ. ಅರುಣ್‌ಕುಮಾರ್ ಅವರ ಬದಲಿಗೆ ಕರ್ನಾಟಕ ಹಿರಿಯ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ನಂತರ 2018 ರಲ್ಲಿ ಶಶಿಕಾಂತ್‌ ಅವರನ್ನು BCCI ಮಿಜೋರಾಂ ಕ್ರಿಕೆಟ್ ತಂಡದ ಕೋಚ್ ಆಗಿ ನೇಮಿಸಿತ್ತು. ಆದ್ರೀಗ ಮತ್ತೆ ಕರ್ನಾಟಕ ತಂಡ ಕೋಚ್‌ ಆಗಿ ನೇಮಕವಾಗಿದ್ದಾರೆ.

ಇದನ್ನೂ ಓದಿ : India failure in Asia Cup : ಏಷ್ಯಾ ಕಪ್‌ನಲ್ಲಿ ಭಾರತದ ವೈಫಲ್ಯಕ್ಕೆ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಕಾರಣ

ಇದನ್ನೂ ಓದಿ : Asia Cup 2022 India : ಏಷ್ಯಾ ಕಪ್‌ನಲ್ಲಿ ಭಾರತದ ಹಣೆಬರಹ ಇವತ್ತೇ ಡಿಸೈಡ್, ಪಾಕಿಸ್ತಾನದ ಕೈಯಲ್ಲಿದೆ ಟೀಮ್ ಇಂಡಿಯಾ ಭವಿಷ್ಯ

PV Shashikanth appointed as Karnataka Cricket team head Coach

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular