India failure in Asia Cup : ಏಷ್ಯಾ ಕಪ್‌ನಲ್ಲಿ ಭಾರತದ ವೈಫಲ್ಯಕ್ಕೆ ಕೋಚ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಕಾರಣ

ದುಬೈ: (India failure in Asia Cup) ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡದ ಪ್ರಯಾಣ ಬಹುತೇಕ ಕೊನೆಗೊಂಡಿದೆ. ಸೂಪರ್-4 ಹಂತದಲ್ಲಿ ಸತತ ಎರಡು ಸೋಲು ಕಾಣುವುದರೊಂದಿಗೆ ಭಾರತದ ಫೈನಲ್ ಕನಸು ಭಗ್ನಗೊಂಡಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನ ಹಾಗೂ ಹಾಂಕಾಂಗ್ ವಿರುದ್ಧ ಗೆದ್ದು ಅಬ್ಬರಿಸಿದ್ದ ರೋಹಿತ್ ಶರ್ಮಾ ಬಳಗ, ಸೂಪರ್-4 ಹಂತದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದೆ.

ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದ್ದ ಟೀಮ್ ಇಂಡಿಯಾ ಯಾರೂ ನಿರೀಕ್ಷೆಯನ್ನೇ ಮಾಡದ ರೀತಿಯಲ್ಲಿ ಸತತ 2 ಪಂದ್ಯಗಳನ್ನು ಸೋತು, ತನ್ನ ಫೈನಲ್ ಹಾದಿಗೆ ತಾನೇ ಕಲ್ಲು ಎಳೆದುಕೊಂಡಿದೆ. ಭಾರತದ ಈ ವೈಫಲ್ಯಕ್ಕೆ ಕಾರಣ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ. ತಂಡದ ಆಯ್ಕೆಯಲ್ಲಿ ಎಡವಿದ್ದೇ ಭಾರತದ ಸೋಲಿಗೆ ಕಾರಣ ಎಂದು ಕ್ರಿಕೆಟ್ ವಿಶ್ಲೇಷಕರು ವಿಶ್ಲೇಷಿಸುತ್ತಿದ್ದಾರೆ. ಹಾಗಾದರೆ ದ್ರಾವಿಡ್ ಮತ್ತು ರೋಹಿತ್ ಎಡವಿದ್ದು ಎಲ್ಲಿ?

ಕೋಚ್-ಕ್ಯಾಪ್ಟನ್ (India failure in Asia Cup) ಮಾಡಿದ ತಪ್ಪುಗಳು

  • ಸೂಪರ್-4 ಹಂತದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಅವರನ್ನು ಹೊರಗಿಟ್ಟು ರಿಷಭ್ ಪಂತ್ ಅವರನ್ನು ಆಡಿಸಿದ್ದು.
  • ಈ ಕಾರಣದಿಂದ ಎರಡೂ ಪಂದ್ಯಗಳಲ್ಲಿ ಫಿನಿಷರ್ ಕೊರತೆ ಎದುರಿಸಿದ ಟೀಮ್ ಇಂಡಿಯಾ.
  • ಪಾಕಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಕೈ ಬಿಟ್ಟದ್ದು.
  • ರವೀಂದ್ರ ಜಡೇಜ ಗಾಯಗೊಂಡಾಗ ಅವರ ಬದಲು ತಂಡ ಸೇರಿದ್ದ ಅಕ್ಷರ್ ಪಟೇಲ್ ಅವರನ್ನು ಕಡೆಗಣಿಸಿದ್ದು.
  • ದೀಪಕ್ ಹೂಡ ಬದಲು ಅಕ್ಷರ್ ಪಟೇಲ್ ಅವರನ್ನು ಆಡಿಸಿದ್ದಿದ್ದರೆ ಭಾರತಕ್ಕೆ ಒಬ್ಬ ಪರಿಣಾಮಕಾರಿ ಬೌಲರ್ ಸೇವೆ ಸಿಗುತ್ತಿತ್ತು.
  • ಅಗ್ರಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರಿರುವ ದೀಪಕ್ ಹೂಡ ಕೆಳ ಕ್ರಮಾಂಕದಲ್ಲಿ ಪರಿಣಾಮಕಾರಿಯಲ್ಲ.
  • ಆದರೆ ಅಕ್ಷರ್ ಪಟೇಲ್ ಕೆಳ ಕ್ರಮಾಂಕದಲ್ಲಿ ಸ್ಫೋಟಕ ಆಟವಾಡುವ ಸಾಮರ್ಥ್ಯವಿರುವ ಆಟಗಾರ.
  • ಅವರನ್ನು ಆಡಿಸಿದ್ದಿದ್ದರೆ ಭಾರತಕ್ಕೆ ಒಬ್ಬ ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಆಯ್ಕೆಯೂ ಸಿಕ್ಕಂತಾಗುತ್ತಿತ್ತು.
  • ಲೆಫ್ಟ್ ಹ್ಯಾಂಡ್ ಬ್ಯಾಟಿಂಗ್ ಆಯ್ಕೆ ಬೇಕು ಎಂಬ ಕಾರಣಕ್ಕೆ ರಿಷಭ್ ಪಂತ್ ಅವರನ್ನು ಆಡಿಸಿ ದಿನೇಶ್ ಕಾರ್ತಿಕ್ ಅವರನ್ನು ಹೊರಗಿಡಲಾಯಿತು.
  • ಆದರೆ ಆಡಿದ ಎರಡೂ ಪಂದ್ಯಗಳಲ್ಲಿ ರಿಷಭ್ ಪಂತ್ ತಂಡದ ನೆರವಿಗೆ ನಿಲ್ಲದೆ, ಸೋಲಿಗೆ ಕಾರಣರಾದರು.

ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಟೀಮ್ ಸೆಲೆಕ್ಷನ್’ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ : Rohit Sharma: ಯುವ ಆಟಗಾರರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರಾ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ?

ಇದನ್ನೂ ಓದಿ : Asia Cup 2022 India : ಏಷ್ಯಾ ಕಪ್‌ನಲ್ಲಿ ಭಾರತದ ಹಣೆಬರಹ ಇವತ್ತೇ ಡಿಸೈಡ್, ಪಾಕಿಸ್ತಾನದ ಕೈಯಲ್ಲಿದೆ ಟೀಮ್ ಇಂಡಿಯಾ ಭವಿಷ್ಯ

Coach Rahul Dravid Captain Rohit Sharma blamed for India failure in Asia Cup

Comments are closed.