Rashid Khan : ಐಪಿಎಲ್ ಮುಗಿದ ಬೆನ್ನಲ್ಲೇ ಅಡುಗೆ ಭಟ್ಟನಾದ ಆಫ್ಘನ್ ಸ್ಪಿನ್ ಮಾಂತ್ರಿಕ ರಶೀನ್ ಖಾನ್

ಬೆಂಗಳೂರು: Rashid Khan : ಅಫ್ಘಾನಿಸ್ತಾನದ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್, ಸದ್ಯ ಟಿ20 ಕ್ರಿಕೆಟ್’ನ ಬೆಸ್ಟ್ ಸ್ಪಿನ್ನರ್, ಆಲ್ರೌಂಡರ್. ಐಪಿಎಲ್’ನಲ್ಲಿ (IPL) ಗುಜರಾತ್ ಟೈಟನ್ಸ್ (Gujarat Titans) ಪರ ಆಡುವ ರಶೀದ್ ಖಾನ್ (Rashid Khan), ಕಳೆದ ವರ್ಷ ಟೈಟನ್ಸ್ ಪಡೆ ಪ್ರಶಸ್ತಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ಈ ಬಾರಿಯ ಐಪಿಎಲ್’ನಲ್ಲಿ ಅಮೋಘ ಆಲ್ರೌಂಡ್ ಪ್ರದರ್ಶನದ ಮೂಲಕ ಗುಜರಾತ್ ಟೈಟನ್ಸ್ ತಂಡ ಫೈನಲ್ ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಐಪಿಎಲ್-2023 ಟೂರ್ನಿಯಲ್ಲಿ 17 ಪಂದ್ಯಗಳನ್ನಾಡಿದ್ದ ರಶೀದ್ ಖಾನ್ 27 ವಿಕೆಟ್ ಪಡೆಯುವ ಮೂಲಕ ಅತೀ ಹೆಚ್ಚು ವಿಕೆಟ್ಸ್ ಪಡೆದವರ ಸಾಲಿನಲ್ಲಿ 3ನೇ ಸ್ಥಾನ ಪಡೆದಿದ್ದರು.

ಐಪಿಎಲ್ ನಂತರ ಕ್ರಿಕೆಟ್’ನಿಂದ ಕೊಂಚ ವಿರಾಮ ಪಡೆದಿರುವ ರಶೀದ್ ಖಾನ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಜಾ ದಿನಗಳನ್ನು ಹುಟ್ಟೂರಾದ ಅಫ್ಘಾನಿಸ್ತಾನದ ನಂಗಾರ್ಹರ್’ಗೆ ತೆರಳಿರುವ ರಶೀದ್ ಖಾನ್, ಪ್ರಕೃತಿಯ ಮಡಿಲಲ್ಲಿ ತಮ್ಮ ಕೈಯಾರೆ ಅಡುಗೆ ತಯಾರಿಸಿದ್ದಾರೆ. ಅಫ್ಘಾನಿಸ್ತಾದ ವಿಶೇಷ ಖಾದ್ಯವಾಗಿರುವ “ಶಿನ್ವಾರಿ ರೋಶ್ (Shinwari Rosh) ಖಾದ್ಯವನ್ನು ತಯಾರಿಸಿದ್ದು, ಈ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ, ನನ್ನೊಳಗಿನ ಅಡುಗೆ ಕಲೆಯನ್ನು ಹೊರತೆಗೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

2017ರಿಂದ ಇಂಡಿಯನ್ ಪ್ರೀಮಿಯರ್”ಲೀಗ್’ನಲ್ಲಿ ಆಡುತ್ತಿರುವ ರಶೀದ್ ಖಾನ್, ಆಡಿರುವ ಒಟ್ಟು 109 ಪಂದ್ಯಗಳಿಂದ 6.67ರ ಅಮೋಘ ಎಕಾನಮಿಯಲ್ಲಿ 139 ವಿಕೆಟ್ಸ್ ಕಬಳಿಸಿದ್ದಾರೆ. 2017ರಿಂದ 2021ರವರೆಗೆ ಐದು ವರ್ಷ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದ ರಶೀದ್ ಖಾನ್, 2022ರಿಂದ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2022 ಮತ್ತು 2023ರಲ್ಲಿ ಗುಜರಾತ್ ಪರ 33 ಪಂದ್ಯಗಳನ್ನಾಡಿರುವ 24 ವರ್ಷದ ರಶೀದ್ ಖಾನ್ 2 ಸೀಸನ್’ಗಳಿಂದ 46 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Special gift for King Kohli in London : ವಿರಾಟ್ ಕೊಹ್ಲಿ ದಂಪತಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್

ಇದನ್ನೂ ಓದಿ : ICC World test championship final: ಫೋಟೋ ಶೂಟ್’ನಲ್ಲಿ ಮಿಂಚಿದ ಟೀಮ್ ಇಂಡಿಯಾ ಆಟಗಾರರು

Comments are closed.