AB De Villiers : RCB ತಂಡಕ್ಕೆ ಮರಳಿದ್ದಾರೆ ಎಬಿ ಡಿವಿಲಿಯರ್ಸ್

ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2022 (IPL 2022) ಕ್ಕಾಗಿ ಈ ಬಾರಿ ಮೆಗಾ ಹರಾಜು ನಡೆಯಲಿದೆ. ಈ ನಡುವಲ್ಲೇ ಎಲ್ಲಾ ಫ್ರಾಂಚೈಸಿಗಳು ಬಲಿಷ್ಟ ತಂಡವನ್ನು ಕಟ್ಟಲು ಸಿದ್ದತೆ ನಡೆಸಿವೆ. ಈ ನಡುವಲ್ಲೇ ಇತ್ತೀಚಿಗಷ್ಟೇ ಕ್ರಿಕೆಟ್‌ ವೃತ್ತಿ ಬದುಕಿಗೆ ವಿವಾದಯ ಹೇಳಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಎಬಿ ಡಿವಿಲಿಯರ್ಸ್ (AB De Villiers), ಇಲ್ಲಿ ಮೆಗಾ ಹರಾಜು ಪ್ರಾರಂಭವಾಗುವ ಮೊದಲು ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಎಬಿಡಿ ಮತ್ತೆ IPL 2022ನಲ್ಲಿ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ (RCB ) ತಂಡಕ್ಕೆ ಹಿಂದಿರುಗಲಿದ್ದಾರೆ.

ಕಳೆದ ಹಲವು ವರ್ಷಗಳಿಂದಲೂ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಎಬಿ ಡಿವಿಲಿಯರ್ಸ್‌ ಇದೀಗ ಕ್ರಿಕೆಟ್‌ ವೃತ್ತಿ ಬದುಕಿಗೆ ಸಂಪೂರ್ಣವಾಗಿ ವಿದಾಯ ಹೇಳಿದ್ದರು. ಹೀಗಾಗಿ ಆರ್‌ಬಿಸಿ ಅಭಿಮಾನಿಗಳು ಸಾಕಷ್ಟು ಬೇಸರಗೊಂಡಿದ್ದರು. ಆದ್ರೀಗ ಆರ್‌ಸಿಬಿ ಕಡೆಯಿಂದ ಗುಡ್‌ ನ್ಯೂಸ್‌ ಒಂದು ದೊರೆತಿದೆ. ಎಬಿಡಿ ಮತ್ತೆ ಆರ್‌ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಆರ್‌ಸಿಬಿ ತಂಡ ಮುಖ್ಯ ಕೋಚ್‌ ಸಂಜಯ್‌ ಬಂಗಾರ್‌ ಸುಳಿವುಕೊಟ್ಟಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಡೆಯುತ್ತಿರುವ ಟೆಸ್ಟ್ ಸರಣಿಯ ವಿವರಣೆಗಾರರಲ್ಲಿ ಒಬ್ಬರಾಗಿರುವ ಬಂಗಾರ್‌ ತಿಳಿಸಿದ್ದಾರೆ. ಆದರೆ ಅವರು ಆಟಗಾರನಾಗಿ ಅಲ್ಲ ಬದಲಾಗಿ ಬ್ಯಾಟಿಂಗ್‌ ಕೋಚ್‌ ಸ್ಥಾನದಲ್ಲಿ ಎಬಿಡಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ವೀಕ್ಷಕ ವಿವರಣೆಗಾರನಾಗಿದ್ದ ವೇಳೆಯಲ್ಲಿ ಆರ್‌ಸಿಬಿ ಮುಖ್ಯ ಕೋಚ್ ಬಂಗಾರ್, ಎಬಿ ಡಿವಿಲಿಯರ್ಸ್‌ನಂತಹ ಆಟಗಾರನಿಗೆ ಬ್ಯಾಟಿಂಗ್ ಕೋಚ್ ಸ್ಥಾನ ನೀಡಿದರೆ ಅದು ಆಟಗಾರರಿಗೆ ಮತ್ತು ತಂಡಕ್ಕೆ ಒಳ್ಳೆಯದು ಎಂದು ಹೇಳಿದರು. ಐಪಿಎಲ್‌ನ ಕಳೆದ ಕೆಲವು ಸೀಸನ್‌ಗಳಲ್ಲಿ, ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ನಾಯಕತ್ವ ದಲ್ಲಿ RCB ಗಾಗಿ ಹಲವಾರು ಪಂದ್ಯಗಳನ್ನು ಗೆದ್ದಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ, ಸಂಜಯ್ ಬಂಗಾರ್ ಮತ್ತು ಆಕಾಶ್ ಚೋಪ್ರಾ ಇಬ್ಬರೂ ಒಟ್ಟಿಗೆ ಕಾಮೆಂಟರಿ ಮಾಡುತ್ತಿದ್ದರು.

ಭಾರತ ತಂಡವು ರಾಹುಲ್ ದ್ರಾವಿಡ್ ಅವರಂತಹ ಶ್ರೇಷ್ಠ ಬ್ಯಾಟರ್ ಹೊಂದಿರುವಾಗ ತಂಡಕ್ಕೆ ಬ್ಯಾಟಿಂಗ್ ಕೋಚ್‌ನ ಅವಶ್ಯಕತೆ ಏನಿದೆ ಎಂದು ಆಕಾಶ್ ಹೇಳಿದರು. ದ್ರಾವಿಡ್ ಪ್ರಸ್ತುತ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿದ್ದರೆ, ವಿಕ್ರಮ್ ರಾಥೋಡ್ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಈ ವಿಷಯದ ಬಗ್ಗೆ ಟೀಂ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್, ಈಗ ಆರ್‌ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್, ಮುಖ್ಯ ಕೋಚ್ ಬ್ಯಾಟಿಂಗ್‌ನ ಹೊರತಾಗಿ ಬೌಲಿಂಗ್ ಮತ್ತು ತಂಡದ ತಂತ್ರವನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.\

ಇದನ್ನೂ ಓದಿ : RCB New Captain : ಕೆ.ಎಲ್.ರಾಹುಲ್‌, ಪಡಿಕ್ಕಲ್‌ ಅಲ್ಲ : ಆರ್‌ಸಿಬಿ ನಾಯಕನಾಗ್ತಾನೆ ಈ ಕನ್ನಡಿಗ

ಸಂಜಯ್ ಬಂಗಾರ್ ಹೇಳಿದರು “ಆದ್ದರಿಂದ ಮುಖ್ಯ ಕೋಚ್‌ಗೆ ಹೆಚ್ಚು ಸಮಯವಿಲ್ಲ ಮತ್ತು ಬ್ಯಾಟಿಂಗ್ ಕೋಚ್ ವಿಶೇಷವಾಗಿ ಬ್ಯಾಟಿಂಗ್‌ನಲ್ಲಿ ಆಟಗಾರರ ನ್ಯೂನತೆಗಳ ಮೇಲೆ ಕೆಲಸ ಮಾಡುತ್ತಾರೆ. ಆದ್ದರಿಂದ, ಪ್ರತಿ ತಂಡಕ್ಕೂ ಮುಖ್ಯ ಕೋಚ್ ಹೊರತುಪಡಿಸಿ ಬ್ಯಾಟಿಂಗ್ ಕೋಚ್ ಅಗತ್ಯವಿದೆ. ಎಬಿ ಡಿವಿಲಿಯರ್ಸ್ ಆರ್‌ಸಿಬಿಯ ಬ್ಯಾಟಿಂಗ್ ಕೋಚ್ ಆದರೆ ಬ್ಯಾಟಿಂಗ್‌ ಬಲ ಹೆಚ್ಚಲಿದೆ. ಅಲ್ಲದೇ ಎಬಿಡಿ ಅವರು ಕೊಹ್ಲಿ ಮತ್ತು RCB ಮ್ಯಾನೇಜ್‌ಮೆಂಟ್‌ಗೆ ಸಾಕಷ್ಟು ಹತ್ತಿರವಾಗಿದ್ದಾರೆ. ಹೀಗಾಗಿ 2022ರ IPL ನ 15 ನೇ ಆವೃತ್ತಿಯಲ್ಲಿ RCB ಗಾಗಿ ಹೊಸ ಹುದ್ದೆಯಲ್ಲಿ ಅವರನ್ನು ಕಾಣಬಹುದಾಗಿದೆ. ಆದರೆ ಈ ಕುರಿತು ಆರ್‌ಸಿಬಿ ಆಗಲಿ, ಇಲ್ಲಾ ಎಬಿಡಿ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನೂ ನೀಡಿಲ್ಲ.

ಇದನ್ನೂ ಓದಿ : IND vs NZ 2nd Test Day 2 Live : ಅಶ್ವಿನ್‌, ಸಿರಾಜ್‌, ಅಕ್ಷರ್‌ ಪಟೇಲ್‌ ಆರ್ಭಟ : 62 ರನ್‌ಗೆ ನ್ಯೂಜಿಲೆಂಡ್‌ ಸರ್ವಪತನ

ಇದನ್ನೂ ಓದಿ : Ajaz Patel : ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಜಾಜ್‌ ಪಟೇಲ್‌ ವಿಶ್ವದಾಖಲೆ : ಕುಂಬ್ಳೆ, ಜಿಮ್‌ ಲೇಕರ್‌ ದಾಖಲೆ ಸರಿಗಟ್ಟಿದ ನ್ಯೂಜಿಲೆಂಡ್‌ ಸ್ಪಿನ್ನರ್‌

( RCB fans good news here, AB De Villiers back to team for IPL 2022 )

Comments are closed.