Jawahar Navodaya Vidyalaya : ಚಿಕ್ಕಮಗಳೂರಿನ ವಸತಿ ಶಾಲೆಯ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

ಚಿಕ್ಕಮಗಳೂರು : ರಾಜ್ಯದಲ್ಲಿ ಓಮಿಕ್ರಾನ್‌ ಸೋಂಕು (Omicron) ಪತ್ತೆಯಗಿದ್ದು, ಜೊತೆಗೆ ಕೊರೊನಾ ಹೆಮ್ಮಾರಿ ಆರ್ಭಟವೂ ಹೆಚ್ಚುತ್ತಿದೆ. ಅದ್ರಲ್ಲೂ ಶಾಲೆ, ಕಾಲೇಜುಗಳೇ ಕೊರೊನಾ ಹಾಟ್‌ಸ್ಪಾಟ್‌ ಆಗಿ ಮಾರ್ಪಡುತ್ತಿವೆ. ಇದೀಗ ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್.ಪುರದ ಸಿಗೋಡು ಗ್ರಾಮದಲ್ಲಿರುವ ಜವಾಹರ್‌ ನವೋದಯ ವಸತಿ ಶಾಲೆಯ ( Jawahar Navodaya Vidyalaya) 40 ವಿದ್ಯಾರ್ಥಿಗಳಿಗೆ (40 Students corona) ಕೊರೊನಾ ಸೋಂಕು ದೃಢಪಟ್ಟಿದೆ.

ಧಾರವಾಡ, ಹಾಸನ, ಶಿವಮೊಗ್ಗ, ಮಡಿಕೇರಿ ಸೇರಿದಂತೆ ರಾಜ್ಯದಲ್ಲಿನ ಹಲವು ವಸತಿ ಶಾಲೆ, ನರ್ಸಿಂಗ್‌ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಹೆಮ್ಮಾರಿಯ ಆರ್ಭಟ ಮುಂದುವರಿದಿದೆ. ಜವಾಹರ್‌ ನವೋದಯ ಶಾಲೆಯಲ್ಲಿನ (Jawahar Navodaya Vidyalaya ) ಮೂವರು ವಿದ್ಯಾರ್ಥಿಗಳು ಹಾಗೂ ನಾಲ್ಕು ಮಂದಿ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಸತಿ ಶಾಲೆಯ ಎಲ್ಲಾ ೪೧೮ ವಿದ್ಯಾರ್ಥಿಗಳನ್ನೂ ಕೂಡ ಕೊರೊನಾ ಟೆಸ್ಟ್‌ಗೆ ಒಳಪಡಿಸಲಾಗಿತ್ತು.

ಈ ಪೈಕಿ ಇದೀಗ ೪೦ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಇನ್ನು ಕೊರೊನಾ ಸೋಂಕು ಕಾಣಿಸಿಕೊಂಡಿರುವ ವಿದ್ಯಾರ್ಥಿಗಳಲ್ಲಿ ಯಾವುದೇ ರೋಗ ಲಕ್ಷಣಗಳು ಪತ್ತೆಯಾಗಿಲ್ಲ. ಇದೀಗ ಶಾಲೆಯಲ್ಲಿನ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ಇರಿಸುವ ಸಲುವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ದೇಶದಲ್ಲಿ ನಾಲ್ಕನೇ ಓಮಿಕ್ರಾನ್​ ರೂಪಾಂತರಿ ಪತ್ತೆ..! ಮೊದಲ ಪ್ರಕರಣ ವರದಿ ಮಾಡಿದ ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಓಮಿಕ್ರಾನ್​​ನ (Omicron) ಮೊದಲ ಪ್ರಕರಣ ವರದಿಯಾಗಿದೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್​ ಸೋಂಕಿಗೆ ಒಳಗಾದವರ ಸಂಖ್ಯೆ ನಾಲ್ಕಕ್ಕೆ ತಲುಪಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಓಮಿಕ್ರಾನ್​ ಪ್ರಕರಣ ವರದಿಯಾಗಿತ್ತು. ದಕ್ಷಿಣ ಆಫ್ರಿಕಾದಿಂದ ನೆಗೆಟಿವ್​ ವರದಿಯೊಂದಿಗೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಪ್ರಯೋಗಾಲಯದಲ್ಲಿ ಇವರ ಸೋಂಕಿನ ವರದಿ ಕಳುಹಿಸಿದ ಬಳಿಕ ಓಮಿಕ್ರಾನ್​ ರೂಪಾಂತರಿ ಇರೋದು ಪತ್ತೆಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿರದ ವೈದ್ಯರೊಬ್ಬರಿಗೂ ಕೂಡ ಓಮಿಕ್ರಾನ್​ ರೂಪಾಂತರಿ ಕಾಣಿಸಿಕೊಂಡಿದೆ.

ಗುಜರಾತ್​​ನಲ್ಲಿ ಮೊಟ್ಟ ಮೊದಲ ಓಮಿಕ್ರಾನ್​ ರೂಪಾಂತರಿ ಪ್ರಕರಣ ವರದಿಯಾಗಿದೆ. ಜಿಂಬಾಬ್ವೆಯಿಂದ ಮರಳಿದ್ದ 72 ವರ್ಷದ ವೃದ್ಧನಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತ ವ್ಯಕ್ತಿಯು ಗುಜರಾತ್​ನ ಜಾಮ್​ ನಗರದ ನಿವಾಸಿಯಾಗಿದ್ದಾರೆ. ಇವರಿಗೆ ಬುಧವಾರ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಪ್ರಯೋಗಾಲಯಕ್ಕೆ ವರದಿಯನ್ನು ಕಳುಹಿಸಿಕೊಡಲಾಗಿತ್ತು. ಸಾಕಷ್ಟು ಪರೀಕ್ಷೆಗಳ ಬಳಿಕ ಈ ವ್ಯಕ್ತಿಗೂ ಓಮಿಕ್ರಾನ್​ ಇರುವುದು ದೃಢಪಟ್ಟಿದೆ.

ಇದನ್ನೂ ಓದಿ : food stuck throat : ಗಂಟಲಿಗೆ ಆಹಾರ ಸಿಕ್ಕು ವಿಲ ವಿಲನೇ ಒದ್ದಾಡಿದ ಗ್ರಾಹಕ; ವೇಯ್ಟರ್​ ಹಾಗೂ ಪೊಲೀಸ್​​​ ಅಧಿಕಾರಿ ಸಮಯಪ್ರಜ್ಞೆಯಿಂದ ಉಳಿಯಿತು ಪ್ರಾಣ

ಇದನ್ನೂ ಓದಿ : Omicron :ಓಮಿಕ್ರಾನ್​ ಸೋಂಕಿಗೆ ಇತ್ತೀಚಿಗೆ ಒಳಗಾದ ರಾಷ್ಟ್ರಗಳು ಯಾವುವು ಗೊತ್ತಾ..? ಸಾವಿನ ಪ್ರಮಾಣದ ಬಗ್ಗೆ ವಿಶ್ವಸಂಸ್ಥೆ ಹೇಳಿದ್ದೇನು..? ಇಲ್ಲಿದೆ ಮಾಹಿತಿ

(Omicron Variant live updates, corona virus infection for 40 students jawahar navodaya vidyalaya chikkamangaluru)

Comments are closed.