Rishabh Pant helped Cricket Australia : ರಿಷಭ್ ಪಂತ್ ಕಾರಣದಿಂದ ಕ್ರಿಕೆಟ್ ಆಸ್ಟ್ರೇಲಿಯಾ ಖಜಾನೆಗೆ ಕೋಟಿ ಕೋಟಿ ದುಡ್ಡು.. ಹೇಗೆ ಗೊತ್ತಾ?

ಮೆಲ್ಬೋರ್ನ್: ಟೀಮ್ ಇಂಡಿಯಾದ ವಿಧ್ವಂಸಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಕಾರಣದಿಂದ (Rishabh Pant helped Cricket Australia) ಕ್ರಿಕೆಟ್ ಆಸ್ಟ್ರೇಲಿಯಾ ಕೋಟಿ ಕೋಟಿ ದುಡ್ಡನ್ನು ಜೇಬಿಗಿಳಿಸಿಕೊಂಡಿದೆ. ಕೆಲ ದಿನಗಳ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia), ಡಿಸ್ನಿ ಸ್ಟಾರ್ (Desney Star) ಜೊತೆ ಭಾರತ ಮತ್ತು ಏಷ್ಯಾ ಖಂಡದಲ್ಲಿ ನಡೆಯುವ ತನ್ನ ಕ್ರಿಕೆಟ್ ಪಂದ್ಯಗಳ ಪ್ರಸಾರದ ಒಪ್ಪಂದವನ್ನು ಮಾಡಿಕೊಂಡಿತ್ತು. 2023ರಿಂದ 2027ರವರೆಗಿನ ಪ್ರಸಾರದ ಹಕ್ಕು 360 ಮಿಲಿಯನ್ ಆಸ್ಟ್ರೇಲಿಯಾ ಡಾಲರ್”ಗೆ ಮಾರಾಟವಾಗಿತ್ತು. ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು 1,992 ಕೋಟಿ ರೂ.

ಪ್ರಸಾರದ ಹಕ್ಕಿಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಇಷ್ಟೊಂದು ದೊಡ್ಡ ಮೊತ್ತವನ್ನು ಪಡೆಯಲು ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಕಾರಣರಾಗಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾದ ಪ್ರತಿಷ್ಠಿತ ಪತ್ರಿಕೆ “ಸಿಡ್ನಿ ಮಾರ್ನಿಂಗ್ ಹೆರಾಲ್ಡ್” (Sydney Morning Herald) ವರದಿಯೊಂದನ್ನು ಪ್ರಕಟಿಸಿದೆ. “ಕಳೆದ ವರ್ಷದ ಜನವರಿಯಲ್ಲಿ ನಡೆದ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಆಡಿದ ಅಮೋಘ ಇನ್ನಿಂಗ್ಸ್ ಭಾರತಕ್ಕೆ ಸರಣಿ ಗೆದ್ದು ಕೊಟ್ಟಿತ್ತು. ಆ ಇನ್ನಿಂಗ್ಸ್ ಈಗಲೂ ಕ್ರಿಕೆಟ್ ಜಗತ್ತಿನಲ್ಲಿ ತಾಜಾ ನೆನಪಾಗಿ ಉಳಿದಿದೆ” ಎಂದು “ಸಿಡ್ನಿ ಮಾರ್ನಿಂಗ್ ಹೆರಾಲ್ಡ್” ವರದಿ ಮಾಡಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಪ್ರಸಾರದ ಹಕ್ಕು ಡಿಸ್ನಿ ಸ್ಟಾರ್ ಪಾಲಾದ ಬೆನ್ನಲ್ಲೇ “ಸಿಡ್ನಿ ಮಾರ್ನಿಂಗ್ ಹೆರಾಲ್ಡ್” ಈ ವರದಿ ಪ್ರಕಟಿಸಿದ್ದು, ರಿಷಭ್ ಪಂತ್ ಆಡಿದ ಇನ್ನಿಂಗ್ಸ್ ಕಾರಣದಿಂದಲೇ ಡಿಸ್ನಿ ಸ್ಟಾರ್ ಸಂಸ್ಥೆ ದುಬಾರಿ ಮೊತ್ತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಪ್ರಸಾರದ ಹಕ್ಕಿನ ಒಪ್ಪಂದ ಮಾಡಿಕೊಂಡಿದೆ ಎಂಬರ್ಥದಲ್ಲಿ “ಸಿಡ್ನಿ ಮಾರ್ನಿಂಗ್ ಹೆರಾಲ್ಡ್” ವರದಿ ಮಾಡಿದೆ.

2021ರ ಜನವರಿಯಲ್ಲಿ ಬ್ರಿಸ್ಬೇನ್”ನ ಗಬ್ಬಾ ಮೈದಾನದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್’ನಲ್ಲಿ ರಿಷಭ್ ಪಂತ್ ಅಜೇಯ 89 ರನ್ ಸಿಡಿಸಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು. ಅಷ್ಟೇ ಅಲ್ಲ, 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-1ರ ಅಂತರದಲ್ಲಿ ಗೆಲ್ಲಲು ಪಂತ್ ಕಾರಣರಾಗಿದ್ದರು.

ಗಬ್ಬಾ ಟೆಸ್ಟ್ ಗೆಲ್ಲಲು 328 ರನ್”ಗಳ ಕಠಿಣ ಗುರಿ ಪಡೆದಿದ್ದ ಭಾರತ ಪರ ಅಗ್ರಕ್ರಮಾಂಕದಲ್ಲಿ ಆರಂಭಿಕ ಆಟಗಾರ ಶುಭಮನ್ ಗಿಲ್ 91 ರನ್ ಮತ್ತು ಚೇತೇಶ್ವರ್ ಪೂಜಾರ 56 ರನ್ ಗಳಿಸಿದ್ದರು. ಆದರೆ ಟೆಸ್ಟ್ ಪಂದ್ಯ ಡ್ರಾದತ್ತ ಸಾಗುತ್ತಿದ್ದ ಹೊತ್ತಲ್ಲಿ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಅಬ್ಬರಿಸಿದ್ದ ರಿಷಭ್ ಪಂತ್, 9 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 89 ರನ್ ಬಾರಿಸಿ ಭಾರತಕ್ಕೆ ಸ್ಮರಣೀಯ ಜಯ ತಂದುಕೊಟ್ಟಿದ್ದರು.

ಇದನ್ನೂ ಓದಿ : Virat Kohli Big Statement : “ಏಷ್ಯಾ ಕಪ್, ವಿಶ್ವಕಪ್ ಗೆಲ್ಲಲು ಯಾವ ತ್ಯಾಗಕ್ಕೂ ಸಿದ್ಧ” ಕೊಹ್ಲಿ ಮಾತಿನ ಅರ್ಥವೇನು ?

ಇದನ್ನೂ ಓದಿ : Age Fraud Detector Software : ವಯಸ್ಸಿನಲ್ಲಿ ಮೋಸ ಮಾಡುವವರಿಗೆ ಬ್ಯಾಡ್ ನ್ಯೂಸ್.. ಬಿಸಿಸಿಐ ಬಳಿಯಿದೆ ಹೊಸ ಅಸ್ತ್ರ !

Rishabh Pant helped Cricket Australia to get gainful TV deal

Comments are closed.