Rishabh Pant : ಬೆಂಗಳೂರಿನಲ್ಲಿದ್ದಾನೆ ರಿಷಭ್ ಪಂತ್.., ಎಲ್ಲಿಗೆ ಬಂತು ಕಂಬ್ಯಾಕ್ ಮ್ಯಾಟರ್?

ಬೆಂಗಳೂರು: ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ (Rishabh Pant ) ಸದ್ಯ ಬೆಂಗಳೂರಿನಲ್ಲಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡ ನಂತರ ಕ್ರಿಕೆಟ್’ನಿಂದ ಹೊರಗುಳಿದಿರುವ 26 ವರ್ಷದ ರಿಷಭ್ ಪಂತ್, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (National Cricket Academy-NCA) ಪುನಶ್ಚೇತನ ಶಿಬಿರದಲ್ಲಿ (rehabilitation camp) ಪಾಲ್ಗೊಂಡಿದ್ದಾರೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಫಿಸಿಯೊ ಹಾಗೂ ಮೆಡಿಕಲ್ ಟೀಮ್’ನ ಮಾರ್ಗದರ್ಶನದಲ್ಲಿ ರಿಷಭ್ ಪಂತ್ ಅವರ ಚೇತರಿಕೆ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ವರ್ಷದ ಡಿಸೆಂಬರ್ 30ರಂದು ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಎಂಬಲ್ಲಿ ರಿಷಭ್ ಪಂತ್ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದರು. ಡೆಹ್ರಾಡೂನ್’ನಲ್ಲಿದ್ದ ಗೆಳತಿಯನ್ನು ನೋಡಲು ಹೊರಟಿದ್ದ ರಿಷಭ್ ಪಂತ್ ಐಷಾರಾಮಿ ಕಾರನ್ನು ಅತ್ಯಂತ ವೇಗದಲ್ಲಿ ಚಲಾಯಿಸುತ್ತಿದ್ದರು. ಬೆಳಗ್ಗೆ 5 ಗಂಟೆಯ ಅವಧಿಯಾಗಿದ್ದ ಕಾರಣ ನಿದ್ದೆಯ ಮಂಪರಿನಲ್ಲಿದ್ದ ರಿಷಭ್ ಪಂತ್ ಕೊಂಚ ಎಚ್ಚರ ತಪ್ಪಿದ್ದರಿಂದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದಿತ್ತು.

ಇದನ್ನೂ ಓದಿ : Namibia Vs Karnataka ODI series : ಕರ್ನಾಟಕ ಹುಲಿಗಳ ಘರ್ಜನೆ ಮಧ್ಯೆಯೂ ಗೆದ್ದ ನಮೀಬಿಯಾ, 2ನೇ ಏಕದಿನ ಪಂದ್ಯದಲ್ಲಿ ಕನ್ನಡಿಗರಿಗೆ ವೀರೋಚಿತ ಸೋಲು

ಅಪಘಾತದಲ್ಲಿ ರಿಷಭ್ ಪಂತ್ ಅವರ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಬೆನ್ನು ಮೂಳೆಗೂ ಹಾನಿಯಾಗಿತ್ತು. ಅಪಘಾತದ ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಾಗ ಕಾರಿನ ಒಳಗಿದ್ದ ರಿಷಭ್ ಪಂತ್ ಅವರನ್ನು ಸ್ಥಳೀಯ ಟ್ರಕ್ ಚಾಲಕರೊಬ್ಬರು ರಕ್ಷಿಸಿ ಡೆಹ್ರಾಡೂನ್’ನ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಪಂತ್ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಚೇತರಿಕೆಯ ನಂತರ ರಿಷಭ್ ಪಂತ್ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಪಂತ್ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲು ಇನ್ನೂ ಐದಾರು ತಿಂಗಳು ಹಿಡಿಯಲಿದ್ದು, ಅಕ್ಟೋಬರ್-ನವೆಂಬರ್’ನಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವುದು ಅನುಮಾನ.

Rishabh Pant is in Bangalore.., where did the comeback matter come from?

Comments are closed.