ಸಚಿನ್, ಯುವರಾಜ್, ಬದರಿನಾಥ್ ಅಬ್ಬರ : ಪಠಾಣ್ ಮೋಡಿಗೆ ಮಂಕಾದ ಹರಿಣಗಳು

ರಾಯ್ಪುರ : ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಹಾಗೂ ಬದರಿನಾಥ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಭಾರತ ಲೆಜೆಂಡ್ಸ್ ತಂಡ ರೋಡ್ ಸೇಫ್ಟಿ ವಲ್ಡ್ ಸೀರಿಸ್ ಟಿ20 ಪಂದ್ಯದಲ್ಲಿ ಸೌತ್ ಆಫ್ರಿಕಾ ಲೆಜೆಂಡ್ಸ್ ತಂಡ ರುದ್ದ ಭರ್ಜರಿ ಗೆಲುವು ಸಾಧಿಸಿದೆ.

ರಾಯ್ ಪುರದ ಸಯ್ಯೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಲೆಜೆಂಡ್ಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಗಿತ್ತು. 6 ರನ್ ಗಳಿಸಿದ್ದಾಗ ಸೆಹವಾಗ್ ಅವರನ ಕ್ರುಗ್ಗರ್ ಬಲಿ ಪಡೆದ್ರು. ನಂತರ ಲೆಜೆಂಡ್ಸ್ ನಾಯಕ ಸಚಿನ್ ತೆಂಡೂಲ್ಕರ್ ಗೆ ಜೊತೆಯಾದ ಬದರಿನಾಥ್ ಉತ್ತಮ ಜೊತೆಯಾಟ ವಾಡಿದ್ರು. ಸಚಿನ್ ತೆಂಡ್ಕೂಲ್ಕರ್ 37 ಎಸೆತಗಳಲ್ಲಿ 1 ಸಿಕ್ಸರ್, 9 ಬೌಂಡರಿ ನೆರವಿನಿಂದ 67 ರನ್ ಗಳಿಸಿದ್ರೆ, ಬದರಿನಾಥ್ 34 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿ ನೆರವಿನಿಂದ 42 ರನ್ ಗಳಿಸಿದ್ರು.

ನಂತರ ಕ್ರೀಸ್ ಗೆ ಬಂದ ಯುವರಾಜ್ ಸಿಂಗ್ಸ್ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತಹ ಬ್ಯಾಟಿಂಗ್ ಮಾಡಿದ್ರು. ಕೇವಲ 22 ಎಸೆತಗಳಲ್ಲಿ ಭರ್ಜರಿ 6 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ ಸ್ಪೋಟಕ 52 ರನ್ ಬಾರಿಸಿದ್ರೆ, ಯೂಸೂಫ್ ಪಠಾಣ್ 10 ಎಸೆತಗಳಲ್ಲಿ 22 ರನ್ ಸಿಡಿಸಿದ್ರು. ಮನಪ್ರಿತ್ ಗೊನಿ ಅವರ 16 ರನ್ ನೆರವಿನಿಂದ ಭಾರತ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 204 ರನ್ ಗಳಿಸಿತು.

ಬೃಹತ್ ಮೊತ್ತವನ್ನು ಬೆನ್ನತ್ತಲ ಹೊರಟ ಸೌತ್ ಆಫ್ರಿಕಾ ಲೆಜೆಂಡ್ಸ್ ತಂಡಕ್ಕೆ ಆರಂಭಿಕರಾದ ಆಂಡ್ರಿ ಪುಟಿಕ್ ಹಾಗೂ ಮೊರ್ನೆ ವಾನ್ ಸ್ಪೋಟಕ ಆಟಕ್ಕೆ ಮನಸ್ಸು ಮಾಡಿದ್ರು. 70 ರನ್ ಗಳ ಜೊತೆಯಾಟವಾಡಿದ ಜೋಡಿಗೆ ಯೂಸೂಫ್ ಪಠಾಣ್ ಆರಂಭಿಕ ಆಘಾತವನ್ನು ನೀಡಿದ್ರು. ಆಂಡ್ರೆ ಪುಟಿಕ್ 41 ರನ್ ಗಳಿಸಿದ್ರೆ, ಮಾರ್ನೆ ವ್ಯಾನ್ 48 ರನ್ ಸಿಡಿಸಿದ್ರು. ಆದರೆ ಯೂಸೂಪ್ ಪಠಾಣ್ ಮೂರು ವಿಕೆಟ್ ಪಡೆದ್ರೆ, ಯುವರಾಜ್ ಸಿಂಗ್ 2 ವಿಕೆಟ್ ಪಡೆದುಕೊಂಡಿದ್ದಾರೆ.

ಉಳಿದಂತೆ ಪ್ರಗ್ಯಾನ್ ಓಜಾ ಹಾಗೂ ವಿನಯ್ ಕುಮಾರ್ ಅವರು ತಲಾ 1 ವಿಕೆಟ್ ಪಡೆದಿದ್ದಾರೆ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 148 ರನ್ ಗಳಿಸಲಷ್ಟೆ ಸಾಧ್ಯವಾಯಿತು. ಈ ಮೂಲಕ ಭಾರತ ಲೆಜೆಂಡ್ಸ್ ತಂಡ ಗೆಲುವು ಸಾಧಿಸಿದೆ.

Comments are closed.