ವಿಡಿಯೋ ನಾನು ನೋಡಿಲ್ಲ, ನನ್ನ ವಿರುದ್ದ ಷಡ್ಯಂತ್ರ್ಯ ನಡೆಯುತ್ತಿದೆ : ಜಾರಕಿಹೊಳಿ

ಬೆಂಗಳೂರು : ನನ್ನ ವಿರುದ್ದ ಷಡ್ಯಂತ್ರ್ಯ ನಡೆಯುತ್ತಿದೆ. ಪೊಲೀಸರ ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ. ನಾನು ವಿಡಿಯೋ ನೋಡಿಲ್ಲ. ನಾನು ಯಾರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಂಗಳೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಜಾರಕಿಹೊಳಿ, ಯುವತಿ ಬಿಡುಗಡೆ ಮಾಡಿರುವ ವಿಡಿಯೋವನ್ನು ನಾನು ನೋಡಿಲ್ಲ. ನಾನು ದೂರು ಕೊಟ್ಟ ಅರ್ಧಗಂಟೆಯಲ್ಲಿಯೇ ವಿಡಿಯೋ ರಿಲೀಸ್ ಆಗಿದೆ. ಇದನ್ನು ನೋಡಿದ್ರೆ ಗೊತ್ತಾಗುತ್ತೆ. ನನ್ನ ವಿರುದ್ದ ಎಷ್ಟು ದೊಡ್ಡ ಷಡ್ಯಂತ್ರ್ಯ ನಡೆಯುತ್ತಿದೆ ಅನ್ನೋದು ಎಂದಿದ್ದಾರೆ.

https://kannada.newsnext.live/jarkiholi-release-video-heated-to-get-a-job-lady-aligation/

ನಾನು ದೂರು ಕೊಟ್ಟಿದ್ದು ಎಸ್ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪೊಲೀಸ್ ತನಿಖೆಯಿಂದ ಸತ್ಯಾಂಶ ಬಯಲಾಗಲಿದೆ. ಕಾನೂನು ಚೌಕಟ್ಟಿನಲ್ಲಿಯೇ ತನಿಖೆ ನಡೆಯುತ್ತಿದೆ. ನಾನು ಯಾರನ್ನೂ ದುರ್ಬಳಕೆ ಮಾಡಿಕೊಂಡಿಲ್ಲ ಎಂದಿದ್ದಾರೆ.

Comments are closed.