Virat Kohli meets Gary Sobers : ವೆಸ್ಟ್ ಇಂಡೀಸ್ ದಿಗ್ಗಜನನ್ನು ಭೇಟಿ ಮಾಡಿದ ಟೀಮ್ ಇಂಡಿಯಾ ಕೋಚ್ ದ್ರಾವಿಡ್, ಕಿಂಗ್ ಕೊಹ್ಲಿ

ಬಾರ್ಬೆಡೋಸ್: Virat Kohli meets Gary Sobers : ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಆಟಗಾರರು ಮತ್ತು ಕೋಚ್ ರಾಹುಲ್ ದ್ರಾವಿಡ್, ಕೆರಿಬಿಯನ್ ನಾಡಿನ ದಿಗ್ಗಜ ಕ್ರಿಕೆಟಗ ಸರ್ ಗ್ಯಾರಿಫೀಲ್ಡ್ ಸೋಬರ್ಸ್ (Sir Garfield Sobers) ಅವರನ್ನು ಭೇಟಿ ಮಾಡಿದ್ದಾರೆ.

ಬಾರ್ಬೆಡೋಸ್ ಮೈದಾನದಲ್ಲಿ ಮಂಗಳವಾರ ಅಭ್ಯಾಸ ಮುಗಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ಯುವ ಓಪನರ್ ಶುಭಮನ್ ಗಿಲ್ ಮತ್ತು ಕೋಚ್ ರಾಹುಲ್ ದ್ರಾವಿಡ್, ವಿಂಡೀಸ್ ದಿಗ್ಗಜ ಗ್ಯಾರಿಫೀಲ್ಡ್ ಸೋಬರ್ಸ್ ಮತ್ತವರ ಪತ್ನಿಯನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಈ ಭೇಟಿಯ ವೀಡಿಯೊವನ್ನು ಕೆರಿಬಿಯನ್ ಕ್ರಿಕೆಟ್ ಪೋಡ್’ಕಾಸ್ಟ್ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದೆ.

86 ವರ್ಷದ ಗ್ಯಾರಿ ಸೋಬರ್ಸ್ ಜೊತೆ ಕಿಂಗ್ ಕೊಹ್ಲಿ ಆತ್ಮೀಯವಾಗಿ ಮಾತುಕತೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಧುನಿಕ ಕ್ರಿಕೆಟ್’ನ ದಿಗ್ಗಜ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ 2020ರಲ್ಲಿ “ಸರ್ ಗ್ಯಾರಿಫೀಲ್ಡ್ ಸೋಬರ್ಸ್ ದಶಕದ ಕ್ರಿಕೆಟಿಗ” ಪ್ರಶಸ್ತಿಗೆ ಭಾಜನರಾಗಿದ್ದರು.

ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಎಂದೇ ಖ್ಯಾತಿ ಪಡೆದಿರುವ ಗ್ಯಾರಿ ಸೋಬರ್ಸ್, 1954ರಿಂದ 1974ರವರೆಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದರು. ವೆಸ್ಟ್ ಇಂಡೀಸ್ ಪರ 93 ಟೆಸ್ಟ್ ಪಂದ್ಯಗಳನ್ನಾಡಿರುವ ಸೋಬರ್ಸ್ 26 ಶತಕ, 30 ಅರ್ಧಶತಕಗಳ ಸಹಿತ 57.78ರ ಸರಾಸರಿಯಲ್ಲಿ 8032 ರನ್ ಗಳಿಸಿದ್ದಾರೆ. ಅಷ್ಟೇ ಅಲ್ಲದೆ, 235 ವಿಕೆಟ್’ಗಳನ್ನೂ ಪಡೆದಿದ್ದಾರೆ.

ಕೆರಿಬಿಯನ್ ನಾಡಿನಲ್ಲಿ (India tour of West Indies) ಟೀಮ್ ಇಂಡಿಯಾ 2 ಟೆಸ್ಟ್, 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್ ಪಂದ್ಯ ಜುಲೈ 12ರಂದು ಡೊಮಿನಿಕಾದಲ್ಲಿರುವ ವಿಂಡ್ಸರ್ ಪಾರ್ಕ್ ಮೈದಾನದಲ್ಲಿ ಆರಂಭವಾಗಲಿದೆ.

ಪ್ರಥಮ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡ ಬಾರ್ಬೆಡೋಸ್’ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ. ಜುಲೈ 6ರಂದು ಟೀಮ್ ಇಂಡಿಯಾ, ಸ್ಥಳೀಯ ತಂಡದ ವಿರುದ್ಧ ಪ್ರಾಕ್ಟೀಸ್ ಮ್ಯಾಚ್ ಆಡಲಿದೆ.

ಭಾರತದ ವೆಸ್ಟ್ ಇಂಡೀಸ್ ಪ್ರವಾಸದ ವೇಳಾಪಟ್ಟಿ (India tour of West Indies 2023 Fixtures)

ಟೆಸ್ಟ್ ಸರಣಿ:
ಪ್ರಥಮ ಟೆಸ್ಟ್: ಜುಲೈ12-16 (ವಿಂಡ್ಸರ್ ಪಾರ್ಕ್, ಡೊಮಿನಿಕಾ)
ದ್ವಿತೀಯ ಟೆಸ್ಟ್: ಜುಲೈ 20-24 (ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್)

ಏಕದಿನ ಸರಣಿ:
ಮೊದಲ ಏಕದಿನ: ಜುಲೈ 27 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಎರಡನೇ ಏಕದಿನ: ಜುಲೈ 29 (ಕೆನ್ನಿಂಗ್ಟನ್ ಓವಲ್, ಬಾರ್ಬೆಡೋಸ್)
ಮೂರನೇ ಏಕದಿನ: ಆಗಸ್ಟ್ 01 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)

ಇದನ್ನೂ ಓದಿ : ACC Men’s Emerging Asia Cup 2023: ಭಾರತ ಎ’ ತಂಡದಲ್ಲಿ ಕನ್ನಡಿಗ ನಿಕಿನ್ ಜೋಸ್’ಗೆ ಚಾನ್ಸ್ ಕೊಡಿಸಿದ ತಿಲಕ್ ನಾಯ್ಡು

ಇದನ್ನೂ ಓದಿ : Praveen Kumar car major accident : ಮಾಜಿ ಕ್ರಿಕೆಟಿಗ ಪ್ರವೀಣ್‌ ಕುಮಾರ್‌ಗೆ ಕಾರು ಅಪಘಾತ

ಟಿ20 ಸರಣಿ:
ಮೊದಲ ಟಿ20: ಆಗಸ್ಟ್ 04 (ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್)
ಎರಡನೇ ಟಿ20: ಆಗಸ್ಟ್ 06 (ನ್ಯಾಷನಲ್ ಸ್ಟೇಡಿಯಂ, ಗಯಾನ)
ಮೂರನೇ ಟಿ20: ಆಗಸ್ಟ್ 08 (ನ್ಯಾಷನಲ್ ಸ್ಟೇಡಿಯಂ, ಗಯಾನ)
ನಾಲ್ಕನೇ ಟಿ20: ಆಗಸ್ಟ್ 12 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)
ಐದನೇ ಟಿ20: ಆಗಸ್ಟ್ 13 (ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ, ಲಾಡರ್’ಹಿಲ್; ಫ್ಲೋರಿಡಾ)

Virat Kohli meets Gary Sobers : Team India coach Dravid, King Kohli met the West Indies legend.

Comments are closed.