ಸೋಮವಾರ, ಏಪ್ರಿಲ್ 28, 2025
HomeSportsCricketRohit Sharma Dinesh Karthik : ಭಾರತ Vs ಆಸ್ಟ್ರೇಲಿಯಾ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್...

Rohit Sharma Dinesh Karthik : ಭಾರತ Vs ಆಸ್ಟ್ರೇಲಿಯಾ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕುತ್ತಿಗೆ ಹಿಚುಕಿದ ರೋಹಿತ್ ಶರ್ಮಾ

- Advertisement -

ಮೊಹಾಲಿ: (Rohit Sharma Dinesh Karthik) ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ (India Vs Australia T20 Series) ಅಚ್ಚರಿಯ ಘಟನೆಯೊಂದು ನಡೆದಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರ ಕುತ್ತಿಗೆ ಹಿಚುಕುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬ, ದಿನೇಶ್ ಕಾರ್ತಿಕ್ ಅವರನ್ನು ರೋಹಿತ್ ಶರ್ಮಾ ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಬರೆದುಕೊಂಡಿದ್ದಾನೆ.

ಹಾಗಾದ್ರೆ ಈ ವೀಡಿಯೊದ ಅಸಲಿಯತ್ತೇನು? ದಿನೇಶ್ ಕಾರ್ತಿಕ್ ಅವರ ಕುತ್ತಿಗೆಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕೈ ಹಾಕಿ ಆಕ್ರಮಣಕಾರಿಯಾಗಿ ವರ್ತಿಸಿದ್ದು ಯಾಕೆ? ಉತ್ತರ ಇಲ್ಲಿದೆ.
ಅದು ಪಂದ್ಯದ 12ನೇ ಓವರ್’ನ ಕೊನೆಯ ಎಸೆತ. ಉಮೇಶ್ ಯಾದವ್ ಎಸೆತದಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಗ್ಲೆನ್ ಮ್ಯಾಕ್ಸ್’ವೆಲ್ ಅವರ ಬ್ಯಾಟ್ ಸವರಿದ್ದ ಚೆಂಡು ನೇರವಾಗಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೈ ಸೇರಿತ್ತು. ಆದರೆ ಅಂಪೈರ್ ನಾಟೌಟ್ ತೀರ್ಪು ನೀಡಿದ್ದರು. ಬ್ಯಾಟ್ ಚೆಂಡಿಗೆ ಬಡಿದಿರುವುದನ್ನು ಗುರುತಿಸಲು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಅವರಿಗೆ ಸಾಧ್ಯವಾಗಲಿಲ್ಲ. DRSಗೂ ಮನವಿ ಸಲ್ಲಿಸಲಿಲ್ಲ. ನಂತರ ನಾಯಕ ರೋಹಿತ್ ಶರ್ಮಾ ಫೀಲ್ಡ್ ಅಂಪೈರ್ ನಿರ್ಧಾರವನ್ನು DRS ಮೂಲಕ ಪ್ರಶ್ನಿಸಿದ್ರು. ಬಳಿಕ ಟಿವಿ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಇದ್ರ ಬೆನ್ನಲ್ಲೇ ದಿನೇಶ್ ಕಾರ್ತಿಕ್ ಬಳಿ ಬಂದ ನಾಯಕ ರೋಹಿತ್ ಶರ್ಮಾ, ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕುತ್ತಿಗೆ ಹಿಡಿದು ಆಕ್ರಮಣಕಾರಿಯಾಗಿ ವರ್ತಿಸಿದ್ದಾರೆ. ಆದರೆ ಇದು ತಮಾಷೆಗೆ ಮಾಡಿದ ಕೃತ್ಯ ಎಂಬುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ರೋಹಿತ್ ಶರ್ಮಾ ತಮ್ಮ ಕುತ್ತಿಗೆಗೆ ಕೈ ಹಾಕುವ ವೇಳೆ ದಿನೇಶ್ ಕಾರ್ತಿಕ್ ನಗುತ್ತಾ ನಿಂತಿದ್ದರು.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು 4 ವಿಕೆಟ್’ಗಳಿಂದ ಸೋಲಿಸಿದ ಆಸ್ಟ್ರೇಲಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಭಾರತ ಪರ ಆರಂಭಿಕ ಬ್ಯಾಟ್ಸ್’ಮನ್ ಕೆ.ಎಲ್ ರಾಹುಲ್ (35 ಎಸೆತಗಳಲ್ಲಿ 55 ರನ್, 4 ಬೌಂಡರಿ, 3 ಸಿಕ್ಸರ್), ಸೂರ್ಯಕುಮಾರ್ ಯಾದವ್ (25 ಎಸೆತಗಳಲ್ಲಿ 46 ರನ್, 2 ಬೌಂಡರಿ, 4 ಸಿಕ್ಸರ್) ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (30 ಎಸೆತಗಳಲ್ಲಿ 71 ರನ್, 7 ಬೌಂಡರಿ, 5 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ಬಲದಿಂದ ನಿಗದಿತ 20 ಓವರ್’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಆದರೆ ಭಾರೀ ಮೊತ್ತ ಗಳಿಸಿಯೂ ಬೌಲರ್’ಗಳ ವೈಫಲ್ಯದಿಂದ ಭಾರತ ಪಂದ್ಯ ಸೋತಿತ್ತು. ರನ್ ಚೇಸಿಂಗ್ ಸಂದರ್ಭದಲ್ಲಿ ಆಸ್ಟ್ರೇಲಿಯಾ 19.2 ಓವರ್’ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್ ಗಳಿಸಿ ರೋಹಿತ್ ಶರ್ಮಾ ಬಳಗಕ್ಕೆ ಶಾಕ್ ನೀಡಿತ್ತು.

ಇದನ್ನೂ ಓದಿ : ಅಕ್ಟೋಬರ್ 1ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 8 ಹೊಸ ನಿಯಮ ; ಏನೆಲ್ಲಾ ಬದಲಾವಣೆ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇದನ್ನೂ ಓದಿ : Virat Kohli : ಕ್ರಿಕೆಟ್ ದೇವರ 100 ಶತಕಗಳ ವಿಶ್ವದಾಖಲೆಯನ್ನು ಮುರಿಯಲಿದ್ದಾರೆ ವಿರಾಟ್ “ಕಿಂಗ್” ಕೊಹ್ಲಿ

Rohit Sharma holding the neck by Dinesh Karthik in India Vs Australia T20 Match

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular