ರಾಹುಲ್ ದ್ರಾವಿಡ್ ಅದೃಷ್ಟವನ್ನೇ ಬದಲಿಸಿತು ರೋಹಿತ್ ಮಾಡಿದ ಅದೊಂದು ಫೋನ್ ಕಾಲ್ 

Rohit Sharma - Rahul Dravid : ಬಾರ್ಬೆಡೋಸ್: ಭಾರತ ತಂಡದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕೊನೆಗೂ ತಮ್ಮ ವಿಶ್ವಕಪ್ ಕನಸನ್ನು ನನಸಾಗಿಸಿ ಕೊಂಡಿದ್ದಾರೆ

Rohit Sharma – Rahul Dravid : ಬಾರ್ಬೆಡೋಸ್: ಭಾರತ ತಂಡದ ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ (Rahul Dravid) ಕೊನೆಗೂ ತಮ್ಮ ವಿಶ್ವಕಪ್ ಕನಸನ್ನು ನನಸಾಗಿಸಿ ಕೊಂಡಿದ್ದಾರೆ. ಆದರೆ ಕಳೆದ ನವೆಂಬರ್ ತಿಂಗಳಲ್ಲಿ ದ್ರಾವಿಡ್ ಅವರಿಗೆ ಟೀಮ್ ಇಂಡಿಯಾ ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ (World cup is winning captain Rohit Sharma) ಅದೊಂದು ಫೋನ್ ಕಾಲ್ ಮಾಡದೇ ಇದ್ದಿದ್ದರೆ, ದ್ರಾವಿಡ್ ಇವತ್ತು ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ (India won T20 World Cup) ಕೋಚ್ ಆಗಿ ಇರುತ್ತಿರಲಿಲ್ಲ.

Rohit Sharma Rahul Dravid It was a phone call made by Rohit_ Sharma that changed Rahul Dravid fortunes ICC T2o World Cup 2024
Image Credit : crictoday

ಶನಿವಾರ ರಾತ್ರಿ ಬಾರ್ಬೆಡೋಸ್’ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದಿದ್ದ ರೋಚಕ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಸಾರಥ್ಯದ ಟೀಮ್ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್’ಗಳಿಂದ ರೋಚಕವಾಗಿ ಸೋಲಿಸಿ ಸುದೀರ್ಘ 17 ವರ್ಷಗಳ ನಂತರ ವಿಶ್ವಕಪ್ ಎತ್ತಿ ಹಿಡಿದಿತ್ತು. ಇದು ರಾಹುಲ್ ದ್ರಾವಿಡ್ ಅವರ ವೃತ್ತಿಜೀವನದಲ್ಲಿ ಸಿಕ್ಕಿದ ಮೊದಲ ವಿಶ್ವಕಪ್. ಆಟಗಾರನಾಗಿ, ಟೀಮ್ ಇಂಡಿಯಾ ನಾಯಕನಾಗಿ ಸಾಧ್ಯವಾಗದ್ದನ್ನು ದ್ರಾವಿಡ್ ಕೋಚ್ ಆಗಿ ಸಾಧಿಸಿದ್ದರು.

ಇದನ್ನೂ ಓದಿ : Rohit Sharma: 12 ಟಿ20 ಫೈನಲ್, ಒಂದೇ ಸೋಲು, 11 ಕಿರೀಟ.. ರೋಹಿತ್ ಅಪೂರ್ವ ದಾಖಲೆ

ರಾಹುಲ್ ದ್ರಾವಿಡ್ ಒಟ್ಟು 3 ವಿಶ್ವಕಪ್’ಗಳಲ್ಲಿ ಆಡಿದ್ದಾರೆ. 1999, 2004 ಹಾಗೂ 2007ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ದ್ರಾವಿಡ್ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. 2004ರಲ್ಲಿ ತಂಡದ ಉಪನಾಯಕರಾಗಿದ್ದ ದ್ರಾವಿಡ್, 2007ರ ವಿಶ್ವಕಪ್’ನಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಆದರೆ ಮೂರು ಬಾರಿಯೂ ವಿಶ್ವಕಪ್ ಗೆಲ್ಲುವಲ್ಲಿ ವಿಫಲರಾಗಿದ್ದರು .

ಇದನ್ನೂ ಓದಿ : India Vs Zimbabwe T20 Series: ಜಿಂಬಾಬ್ವೆಗೆ ಹಾರಿದ ಯಂಗ್ ಇಂಡಿಯಾ 

ಆದರೆ ಆಟಗಾರನಾಗಿ ಸಿಗದೇ ಇದಾದ ವಿಶ್ವಕಪ್ ಕೋಚ್ ಆಗಿ ದ್ರಾವಿಡ್ ಅವರ ಕೈ ಸೇರಿದೆ. ಆದರೆ ಕಳೆದ ನವೆಂಬರ್ ತಿಂಗಳಲ್ಲಿ ದ್ರಾವಿಡ್ ಅವರಿಗೆ ರೋಹಿತ್ ಶರ್ಮಾ ಅದೊಂದು ದೂರವಾಣಿ ಕರೆ ಮಾಡದೇ ಇದ್ದಿದ್ದರೆ, ಕೆರಿಬಿಯನ್ ನಾಡಿನಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಜೊತೆ ದ್ರಾವಿಡ್ ಇರುತ್ತಲೇ ಇರಲಿಲ್ಲ. 2023ರ ನವೆಂಬರ್ 19ರಂದು ಅಹ್ಮದಾಬಾದ್’ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುತ್ತಿದ್ದಂತೆ ಟೀಮ್ ಇಂಡಿಯಾ ಕೋಚ್ ಹುದ್ದೆ ತೊರೆಯಲು ದ್ರಾವಿಡ್ ಮುಂದಾಗಿದ್ದರು.

Rohit Sharma Rahul Dravid It was a phone call made by Rohit_ Sharma that changed Rahul Dravid fortunes ICC T2o World Cup 2024
Image Credit : Twitter

ಅಷ್ಟೇ ಅಲ್ಲ, ದ್ರಾವಿಡ್ ಅವರ 2 ವರ್ಷಗಳ ಕಾರ್ಯಾವಧಿ ವಿಶ್ವಕಪ್’ಗೆ ಅಂತ್ಯಗೊಂಡಿತ್ತು. ಆಗ ದ್ರಾವಿಡ್ ಅವರಿಗೆ ದೂರವಾಣಿ ಕರೆ ಮಾಡಿದ್ದ ನಾಯಕ ರೋಹಿತ್ ಶರ್ಮಾ, ಟಿ20 ವಿಶ್ವಕಪ್ ಟೂರ್ನಿಯವರೆಗೆ ಕೋಚ್ ಆಗಿ ಮುಂದುವರಿಯುವಂತೆ ದ್ರಾವಿಡ್ ಅವರನ್ನು ಒತ್ತಾಯಿಸಿದ್ದರು. ಆ ಒತ್ತಾಯಕ್ಕೆ ಮಣಿದಿದ್ದ ದ್ರಾವಿಡ್ ಟಿ20 ವಿಶ್ವಕಪ್ ಟೂರ್ನಿಯವರೆಗೆ ಭಾರತ ತಂಡದ ಕೋಚ್ ಹುದ್ದೆಯಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದರು. ಆ ನಿರ್ಧಾರ ಈಗ ದ್ರಾವಿಡ್ ಅವರಿಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದೆ.

ಇದನ್ನೂ ಓದಿ : Dinesh Karthik : ಆರ್‌ಸಿಬಿ ತಂಡಕ್ಕೆ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಕೋಚ್

Rohit Sharma – Rahul Dravid : It was a phone call made by Rohit‌ Sharma that changed Rahul Dravid’s fortunes ICC T2o World Cup 2024

Comments are closed.