ಸೋಮವಾರ, ಏಪ್ರಿಲ್ 28, 2025
HomeSportsCricketICC Umpire Rudi Koertzen Death in Car Crash : ಕಾರು ಅಪಘಾತದಲ್ಲಿ ಐಸಿಸಿ...

ICC Umpire Rudi Koertzen Death in Car Crash : ಕಾರು ಅಪಘಾತದಲ್ಲಿ ಐಸಿಸಿ ಕ್ರಿಕೆಟ್ ಅಂಪೈರ್ ರುಡಿ ಕುರ್ಟ್ಜನ್ ದುರ್ಮರಣ

- Advertisement -

ಕೇಪ್’’ಟೌನ್: ಕ್ರಿಕೆಟ್ ಜಗತ್ತಿನ ಅತ್ಯಂತ ಚಿರಪರಿಚಿತ ಮುಖ, ಐಸಿಸಿ ಎಲೈಟ್ ಪ್ಯಾನೆಲ್’ನ ಅಂಪೈರ್ ಆಗಿದ್ದ ದಕ್ಷಿಣ ಆಫ್ರಿಕಾದ ರುಡಿ ಕುರ್ಟ್ಜನ್ ಕಾರು (Rudi Koertzen Death) ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ದಕ್ಷಿಣ ಆಫ್ರಿಕಾದ ರಿವರ್ಸ್’ಡೇಲ್ ಎಂಬ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಈ ಕಾರು ಅಪಘಾತ ಸಂಭವಿಸಿತ್ತು, ರುಡಿ ಕುರ್ಟ್ಜನ್ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ವ್ಯಕ್ತಿಗಳೂ ಕೂಡ ಸಾವಿಗೀಡಾಗಿದ್ದಾರೆ. ಕುರ್ಟ್ಜನ್ ನಿಧನಕ್ಕೆ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಯುವರಾಜ್ ಸಿಂಗ್ ಸಹಿತ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ.

73 ವರ್ಷದ ರುಡಿ ಕುರ್ಟ್ಜನ್ ಕೇಪ್’ಟೌನ್’ನಲ್ಲಿ ನಡೆದ ವಾರಾಂತ್ಯದ ಗಾಲ್ಫ್ ಕ್ರೀಡಾಕೂಟವನ್ನು ಮುಗಿಸಿ ತಮ್ಮ ಊರಾದ ನೆಲ್ಸನ್ ಮಂಡೇಲ ಬೇನಲ್ಲಿರುವ ಡೆಸ್ಪಾಚ್’ಗೆ ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ಈ ಅಪಘಾತ ನಡೆದಿದೆ. ತಂದೆಯ ಮರಣದ ಸುದ್ದಿಯನ್ನು ರುಡಿ ಕುರ್ಟ್ಜನ್ ಜ್ಯೂನಿಯರ್ ಖಚಿತ ಪಡಿಸಿದ್ದಾರೆ.

ಚಿಕ್ಕಂದಿನಿಂದಲೇ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದ ರುಡಿ ಕುರ್ಟ್ಜನ್ ದಕ್ಷಿಣ ಆಫ್ರಿಕಾ ರೇಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗ ಲೀಗ್ ಕ್ರಿಕೆಟ್ ಆಡಿದ್ದರು. 1981ರಲ್ಲಿ ಅಂಪೈರ್ ವೃತ್ತಿಗೆ ಕಾಲಿಟ್ಟಿದ್ದ ರುಡಿ ಕುರ್ಟ್ಜನ್, 1992ರಲ್ಲಿ ಪೋರ್ಟ್ ಎಲಿಜಬೆತ್’ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಅಂಪೈರಿಂಗ್ ವೃತ್ತಿಬದುಕಿಗೆ ಪದಾರ್ಪಣೆ ಮಾಡಿದ್ದರು.

1992ರಿಂದ 2010ರವೆರೆಗೆ ಒಟ್ಟು 108 ಟೆಸ್ಟ್ ಪಂದ್ಯಗಳು, 209 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ 14 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ರುಡಿ ಕುರ್ಟ್ಜನ್ ಅಂಪೈರ್ ಆಗಿದ್ದರು.

ವೆಸ್ಟ್ ಇಂಡೀಸ್”ನ ಸ್ಟೀವ್ ಬಕ್ನರ್ ಅವರ ನಂತರ 100 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ದಾಖಲೆ ಬರೆದಿದ್ದರು. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಮಧ್ಯೆ ನಡೆದಿದ್ದ 2007ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ರುಡಿ ಕುರ್ಟ್ಜನ್ ಅಂಪೈರ್ ಆಗಿದ್ದರು. 2003ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ವಿಶ್ವಕಪ್’ನ ಭಾರತ Vs ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲೂ ರುಡಿ ಕುರ್ಟ್ಜನ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ : Mitchell Starc Alyssa Healy : ಕ್ರಿಕೆಟ್ ಜಗತ್ತಿನ ಅಪರೂಪದ ಗಂಡ-ಹೆಂಡತಿ: 8 ವಿಶ್ವಕಪ್, ಒಂದು ಕಾಮನ್ವೆಲ್ತ್ ಚಿನ್ನ ಗೆದ್ದ ಭಲೇ ಜೋಡಿ

ಇದನ್ನೂ ಓದಿ : KL Rahul Vs Rohit Sharma : ರಾಹುಲ್ ದಾಖಲೆಗಾಗಿ ಆಡುತ್ತಾರಾ..? ಟೀಕಾಕಾರರಿಗೆ ಸಾಕ್ಷಿ ಸಮೇತ ಉತ್ತರ ಕೊಟ್ಟ ನಿಯತ್ತಿನ ಅಭಿಮಾನಿ

Rudi Koertzen Death ‘Will miss you Rudi’ Sehwag Emotional massage

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular