ಸೋಮವಾರ, ಏಪ್ರಿಲ್ 28, 2025
HomeSportsCricketವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?

ವಿರಾಟ್ ಕೊಹ್ಲಿ ಬಗ್ಗೆ ಶಾಹಿದ್ ಅಫ್ರಿದಿ ಬಾಯಿಂದ ಇದೆಂಥಾ ಮಾತು ?

- Advertisement -

ಬೆಂಗಳೂರು: ಪಾಕಿಸ್ತಾನ ಕ್ರಿಕೆಟ್ ತಂಡದ ( Pakistan Cricket Team) ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ವಿವಾದಗಳಿಗೆ ಫೇಮಸ್. ತಮ್ಮ ವೃತ್ತಿ ಜೀವನದಲ್ಲಿ ಅಫ್ರಿದಿ ಸಾಕಷ್ಟು ಬಾರಿ ವಿವಾದಗಳಿಗೆ (Shahid Afridi Controversy Statement) ಗುರಿಯಾಗಿದ್ದಿದೆ. ನಾಲಗೆ ಹರಿಬಿಟ್ಟು ವಿವಾದ ಮಾಡಿಕೊಳ್ಳುವುದು ಅಫ್ರಿದಿ ಜಾಯಮಾನ. ಇದೀಗ ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿ ಟೀಮ್ ಇಂಡಿಯಾ (Indian Cricket Team) ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಬಗ್ಗೆ ಟೀಕೆ ಮಾಡಿದ್ದಾರೆ.

ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳೆದೆರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದಾರೆ. 2019ರ ನವೆಂಬರ್ ನಂತರ ಕೊಹ್ಲಿ ಬ್ಯಾಟ್”ನಿಂದ ಒಂದೇ ಒಂದು ಶತಕ ಸಿಡಿದಿಲ್ಲ. ಈ ನವೆಂಬರ್ ಬಂದ್ರೆ ಕೊಹ್ಲಿ ಶತಕ ಬಾರಿಸಿ 3 ವರ್ಷಗಳೇ ತುಂಬಲಿವೆ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಫಾರ್ಮ್ ಬಗ್ಗೆ ಈಗಾಗ್ಲೇ ಹಲವಾರು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು, ಕಾಮೆಂಟೇಟರ್”ಗಳು ಮಾತನಾಡಿದ್ದಾರೆ. ವಿರಾಟ್ ಕೊಹ್ಲಿಗೆ ಬೇಕಿರುವುದು ಒಂದೇ ಒಂದು ದೊಡ್ಡ ಇನ್ನಿಂಗ್ಸ್, ಆ ಇನ್ನಿಂಗ್ಸ್ ಬಂದರೆ ಕೊಹ್ಲಿ ಹಳೇ ಖದರ್ ಮರಳಲಿದೆ ಎಂದು ಮಾಜಿ ಕ್ರಿಕೆಟಿಗರು ಹೇಳುತ್ತಿದ್ದಾರೆ. ಆದರೆ ಪಾಕ್ ಮಾಜಿ ನಾಯಕ ಶಾಹಿದ್ ಅಫ್ರಿದಿ ಮಾತ್ರ ವಿರಾಟ್ ಕೊಹ್ಲಿಯ ಬದ್ಧತೆಯನ್ನೇ ಪ್ರಶ್ನಿಸಿದ್ದಾರೆ. ಅಹಂಕಾರ ಕೊಹ್ಲಿ ತಲೆಗೇರಿದೆ ಎಂದಿದ್ದಾರೆ ಅಫ್ರಿದಿ.

“ಕ್ರಿಕೆಟ್”ನಲ್ಲಿ ಎಲ್ಲರಿಗೂ ತಮ್ಮ ಆಟದ ಬಗ್ಗೆ ಸ್ಪಷ್ಟ ಆಲೋಚನೆ ಮತ್ತು ಗುರಿ ಇರಬೇಕು. ಆದರೆ ಸದ್ಯ ವಿರಾಟ್ ಕೊಹ್ಲಿಯಲ್ಲಿ ಅದೇ ಇದ್ದಂತೆ ಕಾಣುತ್ತಿಲ್ಲ. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್”ಗೆ ಪದಾರ್ಪಣೆ ಮಾಡಿದಾಗ ನಂ.1 ಬ್ಯಾಟ್ಸ್’ಮನ್ ಆಗಬೇಕೆಂಬ ಛಲ ಅವನಲ್ಲಿತ್ತು. ಈಗಲೂ ಕೊಹ್ಲಿ ಅದೇ ಗುರಿ ಹೊಂದಿದ್ದಾನಾ ಎಂಬುದರ ಬಗ್ಗೆ ನನಗೆ ಅನುಮಾನವಿದೆ. ಈಗಾಗ್ಲೇ ಎಲ್ಲವನ್ನೂ ಸಾಧಿಸಿ ಬಿಟ್ಟಿದ್ದೇನೆ ಎಂಬ ಅಹಂ ಕೊಹ್ಲಿ ತಲೆಗೇರಿದ್ಯಾ? ಈಗ ಕೇವಲ ಟೈಮ್”ಪಾಸ್”ಗಾಗಿ ಆಡುತ್ತಿದ್ದಾರಾ? ಈ ಪ್ರಶ್ನೆಗೆ ವಿರಾಟ್ ಕೊಹ್ಲಿಯೇ ಉತ್ತರ ನೀಡಬೇಕು”.

  • ಶಾಹಿದ್ ಅಫ್ರಿದಿ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ.

ವಿರಾಟ್ ಕೊಹ್ಲಿ ಬಗ್ಗೆ ಈ ರೀತಿಯ ಟೀಕೆಗಳು ವ್ಯಕ್ತವಾಗುವುದು ಇದೇ ಮೊದಲೇನಲ್ಲ. ಈ ಹಿಂದೆ ಸಾಕಷ್ಟು ಬಾರಿ ಕೊಹ್ಲಿ ಟೀಕಾಕಾರರ ಬಾಯಿಗೆ ಆಹಾರವಾಗಿದ್ದಾರೆ. ಆದರೆ ಪ್ರತೀ ಬಾರಿಯೂ ಕೊಹ್ಲಿ ತಮ್ಮ ಆಟದಿಂದಲೇ ಟೀಕಾಕಾರರು ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟಿದ್ದಾರೆ. ಈಗ ಶಾಹಿದ್ ಅಫ್ರಿದಿಗೂ ಕೊಹ್ಲಿ, ಇಂಗ್ಲೆಂಡ್ ಪ್ರವಾಸದಲ್ಲಿ ಅಂಥದ್ದೇ ಉತ್ತರ ಕೊಡುವ ಸಾಧ್ಯತೆಯಿದೆ.

ಇದನ್ನೂ ಓದಿ : ಮುಂದಿನ ವರ್ಷದಿಂದ ಆರ್‌ಸಿಬಿ, ಸಿಎಸ್‌ಕೆ, ಮುಂಬೈ, ಕೆಕೆಆರ್ ಆದಾಯ ಡಬಲ್

ಇದನ್ನೂ ಓದಿ : Raid by ACB : ರಾಜ್ಯದಲ್ಲಿ ಯಾವೆಲ್ಲ ಅಧಿಕಾರಿಗಳ ಮೇಲೆ ಎಸಿಬಿ ದಾಳಿ : ಇಲ್ಲಿದೆ ಮಾಹಿತಿ

Shahid Afridi Controversy Statement About Virat Kohli

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular