Shreyas Gopal : ಭಾವನಾತ್ಮಕ ಪತ್ರದೊಂದಿಗೆ ಕರ್ನಾಟಕ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಶ್ರೇಯಸ್ ಗೋಪಾಲ್

ಬೆಂಗಳೂರು: ಕರ್ನಾಟಕದ ಸ್ಟಾರ್ ಕ್ರಿಕೆಟಿಗರ ವಲಸೆ ಮುಂದುವರಿದಿದ್ದು, ಈ ಸಾಲಿಗೆ ಹೊಸ ಸೇರ್ಪಡೆ ಕಳೆದ 10 ವರ್ಷಗಳಿಂದ ರಾಜ್ಯ ರಣಜಿ ತಂಡದ ಆಧಾರಸ್ಥಂಭವಾಗಿದ್ದ ಆಲ್ರೌಂಡರ್ ಶ್ರೇಯಸ್ ಗೋಪಾಲ್ (Shreyas Gopal). ಪ್ರಸಕ್ತ ದೇಶೀಯ ಕ್ರಿಕೆಟ್ ಸಾಲಿನಲ್ಲಿ ಶ್ರೇಯಸ್ ಗೋಪಾಲ್ ಕರ್ನಾಟಕವನ್ನು ತೊರೆದು ಕೇರಳ ತಂಡದ ಪರ ಆಡಲು ನಿರ್ಧರಿಸಿದ್ದಾರೆ. ಕರ್ನಾಟಕವನ್ನು ತೊರೆಯುತ್ತಿರುವ ಶ್ರೇಯಸ್ ಗೋಪಾಲ್ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

ಶ್ರೇಯಸ್ ಗೋಪಾಲ್ ಬರೆದಿರುವ ಪತ್ರ ಹೀಗಿದೆ:
“ಪ್ರತಿಷ್ಠಿತ ಕರ್ನಾಟಕ ತಂಡದ ಪರ 10 ವರ್ಷಗಳ ಕಾಲ ಆಡಿದ ನಂತರ ಈಗ ಕರ್ನಾಟಕವನ್ನು ತೊರೆಯಲು ನಾನು ನಿರ್ಧರಿಸಿದ್ದೇನೆ. ಇದು ಈವರೆಗೆ ನಾನು ತೆಗೆದುಕೊಂಡಿರುವ ಅತ್ಯಂತ ದೊಡ್ಡ ನಿರ್ಧಾರ. ಈ ಸಂದರ್ಭದಲ್ಲಿ ನಾನು ರಾಜ್ಯ ಕ್ರಿಕೆಟ್ ಸಂಸ್ಥೆ, ನನ್ನ ಕೋಚ್’ಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರೆಲ್ಲಾ ನನ್ನ ಕ್ರಿಕೆಟ್ ಬದುಕಿಗೆ ಭದ್ರ ಅಡಿಪಾಯ ಹಾಕಿ ಕೊಟ್ಟಿದ್ದಾರೆ. ನನ್ನ ಪಾಲಿಗೆ 2ನೇ ಕುಟುಂಬವಾಗಿದ್ದ ತಂಡದ ಸಹ ಆಟಗಾರರಿಗೂ ಥ್ಯಾಂಕ್ಸ್. ನನ್ನ ಕುಟುಂಬ ಸದಸ್ಯರು, ಸ್ನೇಹಿತರು, ಮಾಧ್ಯಮ ಸ್ನೇಹಿತರು ಹಾಗೂ ಅಭಿಮಾನಿಗಳಿಗೂ ಧನ್ಯವಾದಗಳನ್ನುಅರ್ಪಿಸುತ್ತೇನೆ.

“ಇದೊಂದು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಯಾಣ. ಇಲ್ಲಿ ಕಲಿತ ಪ್ರತಿಯೊಂದನ್ನೂ ನಾನು ಹೊಸ ಪ್ರಯಾಣದಲ್ಲಿ ಕೊಂಡೊಯ್ಯಲಿದ್ದೇನೆ. ಇಲ್ಲಿಯವರೆಗೆ ನೀವು ನನಗೆ ನೀಡಿದ ಬೆಂಬಲವನ್ನು ಮುಂದುವರಿಸುವಿರಿ ಎಂದು ಭಾವಿಸುತ್ತೇನೆ” ಶ್ರೇಯಸ್ ಗೋಪಾಲ್, ಕ್ರಿಕೆಟಿಗ.

ಇದನ್ನೂ ಓದಿ : Ajit Agarkar : ವೆಸ್ಟ್ ಇಂಡೀಸ್’ನಲ್ಲಿ ರೋಹಿತ್, ಕೊಹ್ಲಿಯನ್ನು ಭೇಟಿ ಮಾಡಲಿದ್ದಾರೆ ಅಗರ್ಕರ್, ಕಾರಣ ಇಂಟ್ರೆಸ್ಟಿಂಗ್

ಇದನ್ನೂ ಓದಿ : KL Rahul : ರೂಮರ್ಸ್’ಗಳಿಗೆ ಬ್ರೇಕ್ ಹಾಕಿದ ರಾಹುಲ್, ಎನ್‌ಸಿಎನಲ್ಲಿ ಶುರು ಕನ್ನಡಿಗನ ಬ್ಯಾಟಿಂಗ್ ತಾಲೀಮು

ಕರ್ನಾಟಕ ಪರ ರಣಜಿ ಪಂದ್ಯಗಳು ಸೇರಿದಂತೆ ವೃತ್ತಿಜೀವನದಲ್ಲಿ ಒಟ್ಟು 76 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ 30 ವರ್ಷದ ಶ್ರೇಯಸ್ ಗೋಪಾಲ್, 5 ಶತಕ ಹಾಗೂ 13 ಅರ್ಧಶತಕಗಳ ಸಹಿತ 3137 ರನ್ ಹಾಗೂ 218 ವಿಕೆಟ್ ಕಬಳಿಸಿದ್ದಾರೆ. 57 ಲಿಸ್ಟ್ ಎ ಪಂದ್ಯಗಳಿಂದ 702 ರನ್ ಹಾಗೂ 89 ವಿಕೆಟ್, 87 ಟಿ20 ಪಂದ್ಯಗಳಿಂದ 459 ರನ್ ಮತ್ತು 95 ವಿಕೆಟ್ ಪಡೆದಿದ್ದಾರೆ. ಶ್ರೇಯಸ್ ಗೋಪಾಲ್ ಜೊತೆ ಕೆ.ವಿ ಸಿದ್ಧಾರ್ಥ್, ರೋಹನ್ ಕದಂ ಮತ್ತು ಕರುಣ್ ನಾಯರ್ ಕೂಡ ಅವಕಾಶದ ಕೊರತೆಯಿಂದ ರಾಜ್ಯವನ್ನು ತೊರೆಯಲು ನಿರ್ಧರಿಸಿದ್ದಾರೆ. ಸಿದ್ಧಾರ್ಥ್ ಮತ್ತು ರೋಹನ್ ಕದಂ ಗೋವಾ ಪರ ಆಡಲಿದ್ದರೆ, ಕರುಣ್ ನಾಯರ್ ವಿದರ್ಭ ತಂಡದ ಪರ ಆಡುವ ಸಾಧ್ಯತೆಯಿದೆ.

Shreyas Gopal : Shreyas Gopal said goodbye to Karnataka cricket with an emotional letter

Comments are closed.