ಕೇಪ್‌ಟೌನ್: ಬೆನ್ನುನೋವಿನ ಕಾರಣ ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಭಾರತ ತಂಡದ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ್ದಾರೆ. ಹೀಗಾಗಿ ಅತಿಥೇಯ ತಂಡದ ವಿರುದ್ಧ ಜನವರಿ 11ರಿಂದ ನಡೆಯಲಿರುವ ಮೂರನೇ ಟೆಸ್ಟ್ (south africa vs india )ಪಂದ್ಯದಲ್ಲಿ ಅವರು ಮಾಡುವುದು ಬಹುತೇಕ ಖಚಿತವಾಗಿದೆ. ಜನವರಿ 11 ರಿಂದ 15 ರವರೆಗೆ ಕೊನೆಯ ಟೆಸ್ಟ್ ನಡೆಯಲಿದ್ದು ಐತಿಹಾಸಿಕ ಸಾಧನೆ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ ಬಹಳ ಮಹತ್ವದ್ದಾಗಿದೆ. ಸದ್ಯ ಸರಣಿ 1-1 ರಿಂದ ಸಮಬಲದಲ್ಲಿ ಇದೆ.
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತವು 113 ರನ್‌ಗಳಿಂದ ಗೆದ್ದುಕೊಂಡಿತ್ತು. ಜೋಹನ್ಸ್‌ಬರ್ಗ್ ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 7 ವಿಕೆಟುಗಳಿಂದ ಸೋಲನುಭವಿಸಿತ್ತು. ಬೆನ್ನುನೋವಿನ ಕಾರಣ ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಆಡದಿರುವುದು ಭಾರತ ತಂಡಕ್ಕೆ ಹಿನ್ನಡೆಯಾಗಿತ್ತು. ಇವರ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಿದ್ದರು.
ಇದನ್ನೂ ಓದಿ: Virat Kholi: ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಪಡೆಯೋ ಸಂಭಾವನೆ ಎಷ್ಟು?
ಸದ್ಯ ಬೆನ್ನುನೋವಿನಿಂದ ಚೇತರಿಸಿಕೊಂಡಿರುವ ವಿರಾಟ್ ಕೊಹ್ಲಿ ಭಾನುವಾರ ಉತ್ತಮವಾಗಿ ಅಭ್ಯಾಸ ನಡೆಸಿದ್ದಲ್ಲದೆ, ಫುಟ್ಬಾಲ್ ಸಹ ಆಡಿದ್ದಾರೆ. ಫೀಲ್ಡಿಂಗ್, ಕ್ಯಾಚಿಂಗ್ ಅಭ್ಯಾಸ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಅವರು ಸಂಪೂರ್ಣವಾಗಿ ಫಿಟ್ ಆಗಿರುವ ಬಗ್ಗೆ ವಿಶ್ವಾಸವಿದೆ. ಮುಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುವ ನಿರೀಕ್ಷೆಯೂ ಇದೆ. ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.
ಇಶಾಂತ್ ಶರ್ಮಾ ಕೂಡ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಿದ್ದು, ವೇಗಿ ಮೊಹಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಜೊತೆಗೆ ಕೊಹ್ಲಿ ತಂಡವನ್ನು ಕೂಡಿಕೊಳ್ಳುವುದರಿಂದ, ಹನುಮ ವಿಹಾರಿ ಕೂಡ ಸ್ಥಾನ ಬಿಟ್ಟುಕೊಡಬೇಕಾದ ಬಹುದು.
ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವು ಈವರೆಗೆ ಟೆಸ್ಟ್ ಸರಣಿ ಗೆದ್ದಿಲ್ಲ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ಗಳಲ್ಲಿ ದಾಖಲೆ ಮಾಡಿರುವ ಭಾರತ ತಂಡ ದಕ್ಷಿಣ ಆಫ್ರಿಕಾದಲ್ಲಿ ಕೂಡ ಇತಿಹಾಸ ಬರೆಯುವ ನಿರೀಕ್ಷೆಯಲ್ಲಿದೆ. ವಿರಾಟ್ ಕೊಹ್ಲಿ ಬೆನ್ನುನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು ಮಾಡುತ್ತಿರುವುದು ಕೂಡ ಟೀಮ್ ಇಂಡಿಯಾ ಆಟಗಾರರಲ್ಲಿ ಉತ್ಸಾಹ ಹೆಚ್ಚಿಸಿದೆ.
( south Africa vs India Test Cricket : Virat Kohli Hits Nets In Cape Town Ahead Of Test vs South Africa)