Sports awards: 29 ಸಾಧಕರು, 3 ಸಂಸ್ಥೆಗಳಿಗೆ ಕ್ರೀಡಾ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ: ನಾಳೆ ರಾಜಭವನದಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು: Sports awards: 2021ನೇ ಸಾಲಿನ ಏಕಲವ್ಯ , ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ 2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರಕಟ ಮಾಡಲಾಗಿದೆ. ನಾಳೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಕ್ರೀಡಾ ಸಾಧಕರಿಗೆ ರಾಜ್ಯ ಸರ್ಕಾರ ಕೊಡಮಾಡುವ ಪ್ರಶಸ್ತಿ ಇದಾಗಿದೆ. ರಾಜ್ಯದ ಕ್ರೀಡಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಸಾಧಕರಿಗೆ ಏಕಲವ್ಯ ಪ್ರಶಸ್ತಿ, ಕ್ರೀಡಾ ರತ್ನ ಪ್ರಶಸ್ತಿ, ಕ್ರೀಡಾ ಪೋಷಕ ಪ್ರಶಸ್ತಿ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಏಕಲವ್ಯ ಪ್ರಶಸ್ತಿಗೆ 15, ಕ್ರೀಡಾ ರತ್ನ ಪ್ರಶಸ್ತಿಗೆ 8, ಜೀವಮಾನ ಸಾಧನೆ ಪ್ರಶಸ್ತಿಗೆ 6 ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ 3 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಕ್ರೀಡಾ ಸಚಿವ ಡಾ. ನಾರಾಯಣ ಗೌಡ ಈ ಪ್ರಶಸ್ತಿಯನ್ನು ಪ್ರಕಟಿಸಿದ್ದಾರೆ.

ಇದನ್ನೂ ಓದಿ: ICC Under-19 Women’s World Cup : ಐಸಿಸಿ ಮಹಿಳಾ U19 ವಿಶ್ವಕಪ್: ಭಾರತ ತಂಡಕ್ಕೆ ಶೆಫಾಲಿ ವರ್ಮಾ ನಾಯಕಿ

ನಾಳೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಸಾಧಕರಿಗೆ ಕ್ರೀಡಾ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಕ್ರೀಡಾ ಪ್ರಶಸ್ತಿಗಳಿಗೆ ಆಯ್ಕೆಯಾದ ಸಾಧಕರ ಪಟ್ಟಿ ಇಂತಿದೆ.

ಕ್ರೀಡಾ ರತ್ನ ಪ್ರಶಸ್ತಿ:

  1. ಕವನ ಎಂ.ಎಂ- ಬಾಲ್ ಬ್ಯಾಡ್ಮಿಂಟನ್
  2. ಬಿ.ಗಜೇಂದ್ರ- ಗುಂಡು ಎತ್ತುವುದು
  3. ಶ್ರೀಧರ್- ಕಂಬಳ
  4. ರಮೇಶ್ ಮಳವಾಡ್- ಖೋಖೋ
  5. ವೀರಭದ್ರ ಮುಧೋಳ್- ಮಲ್ಲಕಂಬ
  6. ಖುಷಿ ಹೆಚ್. – ಯೋಗ
  7. ಲೀನಾ ಅಂತೋಣಿ ಸಿದ್ದಿ
  8. ದರ್ಶನ್- ಕಬಡ್ಡಿ

ಏಕಲವ್ಯ ಪ್ರಶಸ್ತಿ:

  1. ಚೇತನ್ ಬಿ- ಅಥ್ಲೆಟಿಕ್ಸ್
  2. ಶಿಖಾ ಗೌತಮ್- ಬ್ಯಾಡ್ಮಿಂಟನ್
  3. ಕೀರ್ತಿ ರಂಗಸ್ವಾಮಿ- ಸೈಕ್ಲಿಂಗ್
  4. ಅದಿತ್ರಿ ವಿಕ್ರಾಂತ್ ಪಾಟೀಲ್- ಫೆನ್ಸಿಂಗ್
  5. ಅಮೃತ್ ಮುದ್ರಾಬೆಟ್- ಜಿಮ್ನಾಸ್ಟಿಕ್
  6. ಶೇಷೇಗೌಡ- ಹಾಕಿ
  7. ರೇಷ್ಮಾ ಮರೂರಿ- ಲಾನ್ ಟೆನ್ನಿಸ್
  8. ಟಿ.ಜೆ. ಶ್ರೀಜಯ್- ಶೂಟಿಂಗ್
  9. ತನೀಶ್ ಜಾರ್ಜ್ ಮ್ಯಾಥ್ಯೂ- ಈಜು
  10. ಯಶಸ್ವಿನಿ ಘೋರ್ಪಡೆ- ಟೇಬಲ್ ಟೆನ್ನಿಸ್
  11. ಹರಿಪ್ರಸಾದ್- ವಾಲಿಬಾಲ್
  12. ಸೂರಜ್ ಸಂಜು ಅಣ್ಣಿಕೇರಿ- ಕುಸ್ತಿ
  13. ಹೆಚ್.ಎಸ್. ಸಾಕ್ಷತ್- ನೆಟ್ ಬಾಲ್
  14. ಮನೋಜ್ ಬಿ.ಎಂ- ಬಾಸ್ಕೆಟ್ ಬಾಲ್
  15. ರಾಘವೇಂದ್ರ ಎಂ- ಪ್ಯಾರಾ ಅಥ್ಲೆಟಿಕ್

ಜೀವಮಾನ ಸಾಧನೆ ಪ್ರಶಸ್ತಿ:

  1. ಅಲ್ಕಾ ಎನ್. ಪಡುತಾರೆ- ಸೈಕ್ಲಿಂಗ್
  2. ಬಿ.ಆನಂದ್ ಕುಮಾರ್- ಪ್ಯಾರಾ ಬ್ಯಾಡ್ಮಿಂಟನ್
  3. ಶೇಖರಪ್ಪ- ಯೋಗ
  4. ಅಶೋಕ್ ಕೆ.ಸಿ- ವಾಲಿಬಾಲ್
  5. ರವೀಂದ್ರ ಶೆಟ್ಟಿ- ಕಬಡ್ಡಿ
  6. ಬಿ.ಜೆ. ಅಮರನಾಥ್- ಯೋಗ

ಕ್ರೀಡಾ ಪೋಷಕ ಪ್ರಶಸ್ತಿ

  1. ಬಿ.ಎಂ.ಎಸ್ ಮಹಿಳಾ ಕಾಲೇಜು- ಬೆಂಗಳೂರು ನಗರ
  2. ಮಂಗಳ ಫ್ರೆಂಡ್ಸ ಸರ್ಕಲ್- ಮಂಗಳೂರು
  3. ನಿಟ್ಟೆ ಎಜುಕೇಷನ್ ಟ್ರಸ್ಟ್- ಉಡುಪಿ

ಇದನ್ನೂ ಓದಿ: India Vs Bangladesh ODI series : 5 ಐಪಿಎಲ್ ಟ್ರೋಫಿ ಗೆದ್ದ ನಾಯಕನ ನೇತೃತ್ವದಲ್ಲಿ ಭಾರತ ತಂಡ ಬರ್ಬಾದ್!

Sports awards: State government announces sports awards for 29 achievers and 3 organizations: Awards will be presented at Raj Bhavan tomorrow

Comments are closed.