Dinner Tips : ರಾತ್ರಿಯ ಊಟ ಹೇಗಿದ್ದರೆ ಉತ್ತಮ; ರಾತ್ರಿ ಈ ಐದು ಆಹಾರಗಳನ್ನು ತಿನ್ನಲೇಬೇಡಿ

ಕೆಲವು ಆಹಾರಗಳನ್ನು ರಾತ್ರಿ (Night) ಯ ಸಮಯದಲ್ಲಿ ಅತಿಯಾಗಿ ತಿನ್ನುವುದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ನಮ್ಮ ಜೀರ್ಣಕ್ರಿಯೆ, ತೂಕ ಮತ್ತು ನಿದ್ರೆಯು ನಾವು ಸೇವಿಸುವ ಆಹಾರದ ಮೇಲೆ ಪರಿಣಾಮ ಬೀರುತ್ತದೆ. ಕೆಲವರು ತೂಕ ಇಳಿಸಬೇಕೆಂದು ರಾತ್ರಿಯ ಊಟವನ್ನೇ (Dinner Tips) ಬಿಟ್ಟುಬಿಡುತ್ತಾರೆ. ಇದು ಸರಿಯಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಎದೆಯುರಿ, ಗ್ಯಾಸ್ಟ್ರಿಕ್‌ ನಂತಹ ಸಮಸ್ಯೆಗಳು ಕಾಣಿಸುತ್ತದೆ. ಇನ್ನು ಕೆಲವರು ಸೇವಿಸುವ ಆಹಾರದಿಂದಲೂ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವೆಲ್ಲವುಗಳು ನಿದ್ರೆಗೆ ಅಡ್ಡಿಪಡಿಸುತ್ತವೆ, ತೂಕ ಹೆಚ್ಚಾಗುವಂತೆ ಮಾಡುತ್ತದೆ ಮತ್ತು ಮುಂತಾದ ಆರೋಗ್ಯದ ತೊಂದರೆಗಳನ್ನೂ ಕಾಣಬಹುದಾಗಿದೆ.

ರಾತ್ರಿಯಲ್ಲಿ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ, ಬಹಳಷ್ಟು ಕೊಬ್ಬನ್ನು ಹೊಂದಿರುವ, ಅಥವಾ ಮಸಾಲೆ ಮತ್ತು ಕೊಬ್ಬು ಎರಡನ್ನೂ ಹೊಂದಿರುವ ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ. ತಜ್ಞರ ಪ್ರಕಾರ ರಾತ್ರಿಯ ಊಟವನ್ನು ತಡವಾಗಿ ಮಾಡುವುದರಿಂದ, ಕಾರ್ಬೋಹೈಡ್ರೇಟ್‌ಗಳು ಅತಿಯಾಗಿ ಮುಧುಮೇಹ, ಸ್ಥೂಲಕಾಯಗಳಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಾತ್ರಿಯ ಊಟವೂ ಸಹ ತೃಪ್ತಿಕರವಾಗಿಬೇಕು ಮತ್ತು ದೇಹಕ್ಕೆ ಅಗತ್ಯ ಪೊಷಕಾಂಶಗಳನ್ನು ನೀಡುವಂತಿರಬೇಕು. ಜೀರ್ಣವಾಗಲು ಕಷ್ಟವಾಗುವ, ಕ್ಯಾಲೋರಿ ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು.

ತಡರಾತ್ರಿಯ ಊಟದಲ್ಲಿ ಸೇವಿಸಲೇಬಾರದ ಆಹಾರಗಳು :
ಗೋಧಿ
ಮೊಸರು
ಸಂಸ್ಕರಿಸಿದ ಹಿಟ್ಟು (ಮೈದಾ)
ಸಿಹಿತಿಂಡಿಗಳು
ಹಸಿ ತರಕಾರಿಗಳು

ಲಘು ಆಹಾರ ಸೇವನೆಯು ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ಊಟವನ್ನು ತಡರಾತ್ರಿ ಮಾಡಿ ತಕ್ಷಣ ನಿದ್ದೆ ಮಾಡುವುದರ ಬದಲಿಗೆ ಊಟವನ್ನು ಸ್ವಲ್ಪ ಮುಂಚೆಯೇ ತಿಂದರೆ, ಆರೋಗ್ಯ ಸಮಸ್ಯೆಗಳು ಕಡಿಮೆ.

ರಾತ್ರಿಯ ಊಟದಲ್ಲಿ ಧಾನ್ಯಗಳು, ಡೈರಿ ಉತ್ಪನ್ನಗಳು, ಪ್ರೋಟೀನ್ ಮೂಲಗಳು ಮತ್ತು ರಾಗಿ ಸೇವಿಸಿ. ಈ ಆಹಾರಗಳು ಪ್ರೋಟೀನ್‌, ಫೈಬರ್, ಪ್ರಮುಖ ಜೀವಸತ್ವಗಳು, ಖನಿಜಗಳು ಮತ್ತು ಆಂಟಿಒಕ್ಸಿಡೆಂಟ್‌ ಗಳಿಂದ ಸಮೃದ್ಧವಾಗಿವೆ. ನಿಮ್ಮ ಆಹಾರದಲ್ಲಿ ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ. ಇವು ದೇಹಕ್ಕೆ ಆಂಟಿಒಕ್ಸಿಡೆಂಟ್‌ ಒದಗಿಸುವ ಮೂಲಕ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Calotropis gigantea Leaf Oil:ಮಂಡಿ ನೋವಿನಿಂದ ಬೇಸತ್ತಿದ್ದೀರಾ?ಎಕ್ಕ ಎಲೆಯ ಎಣ್ಣೆ ಬಳಸಿ ನೋಡಿ

ಇದನ್ನೂ ಓದಿ : Ayurvedic drink: ಚಳಿಗಾಲದಲ್ಲಿ ಕಾಡುವ ರೋಗಗಳಿಗೆ ಆಯುರ್ವೇದಿಕ್ ಪಾನೀಯಗಳು ಉತ್ತಮ

(Dinner Tips you must avoid 5 foods eating late at night)

Comments are closed.