Srilanka Cricket Ban : ಶ್ರೀಲಂಕಾದ ಮೂವರು ಕ್ರಿಕೆಟಿಗರು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧ

ಕೊಲಂಬೋ : ಇಂಗ್ಲೆಂಡ್‌ ಪ್ರವಾಸದ ವೇಳೆಯಲ್ಲಿ ಜೈವಿಕ ಸುರಕ್ಷಿತ ವಲಯವನ್ನುಉಲ್ಲಂಘಿಸಿದ ಹಿನ್ನೆಲೆಯಲ್ಲಿ ಶ್ರೀಲಂಕಾದ ನಾಲ್ವರು ಕ್ರಿಕೆಟ್‌ ಆಟಗಾರರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಒಂದು ವರ್ಷಗಳ ಕಾಲ ನಿಷೇಧ ಹೇರಲಾಗಿದೆ.

ಖ್ಯಾತ ಕ್ರಿಕೆಟಿಗರಾದ ದನುಷ್ಕಾ ಗುಣತಿಲಕ, ಕುಸಾಲ್ ಮೆಂಡಿಸ್ ಮತ್ತು ನಿರೋಶನ್ ಡಿಕ್ವೆಲ್ ಇದೀಗ ನಿಷೇಧಕ್ಕೆ ಒಳಗಾಗಿರುವ ಕ್ರಿಕೆಟ್‌ ಆಟಗಾರರು. ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಮೂವರು ಆಟಗಾರರನ್ನು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧ ಹೇರಿರುವುದು ಮಾತ್ರವಲ್ಲದೇ 10 ಮಿಲಿಯನ್ ಶ್ರೀಲಂಕಾದ ರೂಪಾಯಿ ದಂಡವನ್ನು ವಿಧಿಸಿದೆ.

ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಈ ಮೂವರು ಕ್ರಿಕೆಟಿಗರು ಡರ್ಹಾಮ್ ಬೀದಿಗಳಲ್ಲಿಸುತ್ತುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದು ಜೈವಿಕ ಬಬಲ್‌ ಉಲ್ಲಂಘನೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮೂವರನ್ನುಪ್ರವಾಸದ ಮಧ್ಯದಲ್ಲಿಯೇ ತವರಿಗೆ ಕಳುಹಿಸಲಾಗಿತ್ತು. ಈ ಕುರಿತು ನಿವೃತ್ತ ನ್ಯಾಯಾಧೀಶರ ನೇತೃತ್ವದ ಶಿಸ್ತು ಸಮಿತಿಯು ಮೆಂಡಿಸ್ ಮತ್ತು ಗುಣತಿಲಕ ಅವರಿಗೆ ಎರಡು ವರ್ಷಗಳ ನಿಷೇಧವನ್ನು ಹಾಗೂ ಡಿಕ್ವೆಲ್ಲಾಗೆ 18 ತಿಂಗಳ ಮಂಜೂರಾತಿಯನ್ನು ಶಿಫಾರಸು ಮಾಡಿತ್ತು.

ಎಸ್‌ಎಲ್‌ಸಿ ಸಮಿತಿಯು ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಒಂದು ವರ್ಷ ಮತ್ತು ದೇಶೀಯ ಕ್ರಿಕೆಟ್‌ನಿಂದ ಆರು ತಿಂಗಳು ನಿಷೇಧಿಸಲು ನಿರ್ಧರಿಸಿತು. ಒಂದು ವರ್ಷದ ಅಮಾನತು ಶಿಕ್ಷೆಯೂ ಇರುತ್ತದೆ, ಅದು ಆಟಗಾರರಿಂದ ಮತ್ತೊಂದು ಉಲ್ಲಂಘನೆಯಿದ್ದರೆ ಎರಡು ವರ್ಷಗಳವರೆಗೆ ಜಾರಿಯಾಗ ಸಾಧ್ಯತೆಯಿದೆ.

ಮೂವರು ಆಟಗಾರರು ರಾತ್ರಿಯ ವೇಳೆಯಲ್ಲಿ ಹೋಟೆಲ್‌ ಕೋಣೆಯಿಂದ ಹೊರೆ ಬಂದು ಕರ್ಪ್ಯೂ ಉಲ್ಲಂಘನೆ ಮಾಡಿದ್ದರು. ಈ ಮೂಲಕ ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಅಪಕೀರ್ತಿ ತಂದಿದ್ದಾರೆ ಅನ್ನೋ ಆರೋಪವಿದೆ.

Comments are closed.