ದಿಢೀರ್ ಅಂತಾ ಟೊಮ್ಯೋಟೋ ಉಪ್ಪಿನಕಾಯಿ ಮಾಡೋದು ಹೇಗೆ ?

ಫ್ರೆಂಡ್ಸ್ ಊಟಕ್ಕೆ ಉಪ್ಪಿನಕಾಯಿ ಇಲ್ಲಾ ಅಂದ್ರೆ ಊಟ ಕಂಪ್ಲೀಟ್ ಆಗೊದೇ ಇಲ್ಲ. ಮಾವಿನಕಾಯಿ, ನಿಂಬೆಹಣ್ಣು, ಸೌತೆಕಾಯಿ, ನೆಲ್ಲಿಕಾಯಿ, ಕರಂಡೆಕಾಯಿ ಹೀಗೆ ವಿವಿಧ ಉಪ್ಪಿನ ಕಾಯಿಗಳನ್ನ ನಾವು ಸಾಮಾನ್ಯವಾಗಿ ತಿಂದಿರ್ತೀವಿ. ನಾರ್ಮಲ್ ಗಿಂತ ಸ್ವಲ್ಪ ಡಿಫರೆಂಟ್ ಟೇಸ್ಟ್ ಇರೋದು ಅಷ್ಟೇ ಅಲ್ಲ ದಿಢೀರ್ ಆಗಿ ಮಾಡಬಹುದಾದ ಟೊಮ್ಯಾಟೋ ಪಿಕಲ್ ಬಗ್ಗೆ ಹೇಳ್ತೀನಿ. ಹಾಗಿದ್ರೆ ಪಿಕಲ್ಗೆ ಬೇಕಾಗಿರೋ ಸಾಮಾಗ್ರಿಗಳನ್ನ ನೋಡೋಣ

ಬೇಕಾಗುವ ಸಾಮಾಗ್ರಿಗಳು
ಟೊಮ್ಯಾಟೊ-6
ಮೆಂತೆ-3 ಚಮಚ
ಒಣಮೆಣಸಿನ ಕಾಯಿ-
ಬ್ಯಾಡಗಿ ಮೆಣಸು-6-7
ಗುಂಟೂರು-10
ಅರಶಿಣ-ಅರ್ಧ ಚಮಚ
ಇಂಗು-ಚಿಟಕಿ
ಸಾಸಿವೆ-3 ಚಮಚ
ಬೆಲ್ಲ- ರುಚಿಗೆ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ದಿಢೀರ್ ಅಂತಾ ಟೊಮ್ಯಾಟೊ ಉಪ್ಪಿನಕಾಯಿ ಮಾಡೋದು ಹೇಗೆ ಅಂತಾ ನೋಡೋದಿಕ್ಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

ಬಿಸಿಬಿಸಿ ಅನ್ನ ಅದ್ರಲ್ಲೂ ಕೆಂಪಕ್ಕಿ ಅನ್ನ ಜೊತೆ ಕಾಂಬಿನೇಷನ್ ತುಂಬಾ ಚೆನಾಗಿರತ್ತೆ. ಫ್ರೆಂಡಸ್ ಮಾರ್ಕೆಟ್ನಲ್ಲಿ ಸಿಗೋ ಬೆಳ್ಳಗಿರೋ ಅಕ್ಕಿಗಿಂತ ಪಾಲಿಶ್ ಆಗದೇ ಇರೋ ಅಕ್ಕಿಯನ್ನ ಬಳಸಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆದು.

ಹೀಗೆ ಅದೆಷ್ಟೋ ಬಾರಿ ನಾವು ದಿನಾ ಬಳಸೋ ಆಹಾರಗಳಲ್ಲಿರುವ ಔಷಧೀಯ ಗುಣಗಳ ಅರಿವು ನಮಗಿರುವುದೇ ಇಲ್ಲ. ನಾವು ಪ್ರತಿನಿತ್ಯ ಬಳಸೋ ತರಕಾರಿಗಳಲ್ಲಿ ಟೊಮ್ಯಾಟೋ ಕೂಡಾ ಒಂದು. ಚರ್ಮ ಆರೈಕೆಗೆ ಟೊಮ್ಯಾಟೋ ಒಂದು ಉತ್ತಮ ಮನೆಮದ್ದು, ಟೊಮ್ಯಾಟೋ ಸೇವನೆ ಅಥವಾ ಟೊಮ್ಯಾಟೋ ಪೇಸ್ಟ್ ಮುಖ ಹಾಗೂ ಕೈಗಳಿಗೆ ಹಚ್ಚಿದರೆ ಕಾಂತಿ ಹೆಚ್ಚಾಗುತ್ತದೆ. ಬಿಸಿಲಿನಲ್ಲಿ ಓಡಾಡಿ ಬಂದಾಗ ಟೊಮ್ಯಾಟೋ ಹಣ್ಣಿನಿಂದ ಮುಖ ಉಜ್ಜಿದರೆ ಟ್ಯಾನ್ ಆಗೋದನ್ನು ತಪ್ಪಿಸಬಹುದು.

Comments are closed.