IPL 2024 Suresh Raina: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಅದ್ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಇದೀಗ ಐಪಿಎಲ್‌ಗೆ ರೀ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ. ಅದ್ರಲ್ಲೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೂಲಕ ರೈನಾ ಐಪಿಎಲ್ ಎಂಟ್ರಿ ಪಕ್ಕಾ ಎಲ್ಲಾಗುತ್ತಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಾಜಿ ಚೆನ್ನೈ ಸೂಪರ್ ಕಿಂಗ್ಸ್ (CSK) ಆಲ್ ರೌಂಡರ್ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಗೆ ಮರಳಲಿದ್ದಾರೆ. ಸುರೇಶ್ ರೈನಾ ಐಪಿಎಲ್ 2024ಕ್ಕೆ ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ಮೆಂಟರ್ ಆಗಲಿದ್ದಾರೆ. ಈ ಕುರಿತು ಮಾಧ್ಯಮಗಳು ವರದಿ ಮಾಡಿವೆ.

ಸಿಎಸ್‌ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರ್ಪಡೆಯ ಕುರಿತು ಸುಳಿವು ನೀಡಿದ್ದಾರೆ. ಆದರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಕುರಿತು ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಇನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗೌತಮ್ ಗಂಭೀರ್ ಈ ಬಾರಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ : ಐಪಿಎಲ್ 2024 : ಡೆಲ್ಲಿ ಕ್ಯಾಪಿಟಲ್ಸ್ ಗೆ 18 ಕೋಟಿ ರೂ.ಗೆ ಸೂರ್ಯಕುಮಾರ್ ಯಾದವ್ ಸೇಲ್
ಗೌತಮ್ ಗಂಭೀರ್ ಕೆಕೆಆರ್ ತಂಡ ಸೇರ್ಪಡೆ ಆದ ಬೆನ್ನಲ್ಲೇ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಮೆಂಟರ್ ಹುದ್ದೆ ಖಾಲಿ ಉಳಿದಿದೆ. ಹೀಗಾಘಿ ಸುರೇಶ್ ರೈನಾ ಲಕ್ನೋ ತಂಡದ ಮೆಂಟರ್ ಆಗುವುದು ಖಚಿತ ಎನ್ನಲಾಗುತ್ತಿದೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸುರೇಶ್ ರೈನಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ ಆರಂಭದಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ಸುರೇಶ್ ರೈನಾ ಮಿಸ್ಟರ್ ಐಪಿಎಲ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಇದೀಗ ಖ್ಯಾತ ಆಲ್‌ರೌಂಡರ್ ಸುರೇಶ್ ರೈನಾ ಕನ್ನಡಿಗ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೆಂಟರ್ ಆಗುತ್ತಿರುವುದು ಲಕ್ನೋಗೆ ಹೊಸ ಉತ್ಸಾಹವನ್ನು ಮೂಡಿಸಿದೆ.
ಇದನ್ನೂ ಓದಿ : IPL 2024 : ಐಪಿಎಲ್‌ನಲ್ಲಿ ಈ ಬಾರಿ ಯಾವ ತಂಡ ಬೆಸ್ಟ್ : ಇಲ್ಲಿದೆ ಎಲ್ಲಾ 10 ತಂಡಗಳ ಆಟಗಾರರ ಸಂಪೂರ್ಣ ವಿವರ
ಪತ್ರಕರ್ತರೋರ್ವರು ಟ್ವೀಟರ್‌ನಲ್ಲಿ ಸುರೇಶ್ ರೈನಾ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರ್ಪಡೆಯ ಕುರಿತು ಟ್ವೀಟ್ ಮಾಡಿದ್ದರು. ಇದಕ್ಕೆ ಸುಳ್ಳು ಸುದ್ದಿ ಎಂಬ ಕಮೆಂಟ್ ಬಂದಿದೆ. ಆದರೆ ಖುದ್ದು ಸುರೇಶ್ ರೈನಾ ಅವರೇ ಈ ಸುದ್ದಿ ಯಾಕೆ ನಿಜವಾಗಬಾರದು ಎಂದಿದ್ದಾರೆ. ರೈನಾ ಅವರ ಈ ಕಮೆಂಟ್ ನಿಂದಲೇ ರೈನಾ ಲಕ್ನೋ ಸೇರ್ಪಡೆಯ ಮಾತು ಖಚಿತವಾದಂತಿದೆ.

ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು 2022 ಮತ್ತು 2023 ರ ಸೀಸನ್‌ಗಳಿಗೆ ಲಕ್ನೋ ಸೂಪರ್ ಜೈಂಟ್ಸ್‌ನ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಐಪಿಎಲ್ 2024 ಹರಾಜಿನ ಮೊದಲು ಹುದ್ದೆಗೆ ರಾಜೀನಾಮೆ ನೀಡಿದರು. ಅಲ್ಲದೇ ತಮ್ಮ ಹಳೆಯ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಸುರೇಶ್ ರೈನಾ ಐಪಿಎಲ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಆರಂಭದಿಂದಲೂ ಸಿಎಸ್‌ಕೆ ತಂಡದ ಪರ ಬ್ಯಾಟ್ ಬೀಸಿದ್ದಾರೆ. 2016 ಮತ್ತು 2017 ರಲ್ಲಿ ಸಿಎಸ್‌ಕೆ ಬ್ಯಾನ್ ಆಗಿರುವ ಬೆನ್ನಲ್ಲೇ ಗುಜರಾತ್ ಲಯನ್ಸ್ ತಂಡಕ್ಕೆ ನಾಯಕರಾಗಿದ್ದರು. ಆದರೆ ಬ್ಯಾನ್ ನಿಷೇಧದ ಬೆನ್ನಲ್ಲೇ ಮತ್ತೆ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದರು. IPL 2022 ರಿಂದ ನಿವೃತ್ತಿ ಘೋಷಿಸಿದರು. ಅಂದಿನಿಂದ ಅವರು ಕ್ರಿಕೆಟ್ ವಿವರಣೆಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ : IPL 2024 : ಚೆನ್ನೈ ಸೂಪರ್ ಕಿಂಗ್ಸ್‌ಗೆ ರೋಹಿತ್ ಶರ್ಮಾ : CSK ಸಿಇಓ ಮಹತ್ವದ ಹೇಳಿಕೆ
ಐಪಿಎಲ್‌ನಲ್ಲಿ ಸುರೇಶ್ ರೈನಾ ಒಟ್ಟು 205 ಪಂದ್ಯಗಳನ್ನು ಆಡಿದ್ದು, ಈ ಪೈಕಿ 5,528 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು 39 ಅರ್ಧಶತಕಗಳು ಒಳಗೊಂಡಿವೆ. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲಿಯೂ ಸುರೇಶ್ ರೈನಾ ಮಿಂಚಿದ್ದಾರೆ. ಐಪಿಎಲ್‌ನಲ್ಲಿ ರೈನಾ ಒಟ್ಟು 25 ವಿಕೆಟ್ ಕಬಳಿಸಿದ್ದಾರೆ. ಅಷ್ಟೇ ಅಲ್ಲದೇ ನಾಲ್ಕು ಬಾರಿ ಸಿಎಸ್‌ಕೆ ಐಪಿಎಲ್ ಪ್ರಶಸ್ತಿ ಪಡೆದಾಗಲೂ ಸುರೇಶ್ ರೈನಾ ಪ್ರಮುಖ ಪಾತ್ರವಹಿಸಿದ್ದಾರೆ.
Suresh Raina entered the IPL 2024 through Lucknow Super giants as a mentor