Syazrul Ezat Idrus : ಟಿ20 ವಿಶ್ವಕಪ್ ಕ್ವಾಲಿಫೈಯರ್, ಚೀನಾ 23ಕ್ಕೆ ಆಲೌಟ್; 8 ರನ್ನಿಗೆ 7 ವಿಕೆಟ್ ಕಬಳಿಸಿದ ಮಲೇಷ್ಯಾ ಬೌಲರ್

ಕೌಲಾಲಂಪುರ: Syazrul Ezat Idrus : ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಬಿ ಕ್ವಾಲಿಫೈಯರ್ ಟೂರ್ನಿಯಲ್ಲಿ (ICC Men’s T20 World Cup Asia B Qualifier) ಚೀನಾ ಕ್ರಿಕೆಟ್ ತಂಡ ಮಲೇಷ್ಯಾ ವಿರುದ್ಧ ಕೇವಲ 23 ರನ್ನಿಗೆ ಆಲೌಟಾಗಿ ಹೀನಾಯ ಸೋಲು ಅನುಭವಿಸಿದೆ.

ಕೌಲಾಲಂಪುರದ ಬಯುಮೆಸ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೀನಾ ತಂಡ, ಮಲೇಷ್ಯಾದ ಬಲಗೈ ಮಧ್ಯಮ ವೇಗದ ಬೌಲರ್ ಸೈಯಾಜ್ರುಲ್ ಇದ್ರುಸ್ ಅವರ ಮಾರಕ ದಾಳಿಗೆ ತತ್ತರಿಸಿಸ ಕೇವಲ 23 ರನ್ನಿಗೆ ಆಲೌಟಾಯಿತು. ಚೀನಾ ಪರ ಯಾವೊಬ್ಬ ಆಟಗಾರನೂ ಸಿಂಗಲ್ ಡಿಜಿಟ್ ದಾಟಲಿಲ್ಲ. 11 ಮಂದಿ ಆಟಗಾರಲ್ಲಿ 6 ಮಂದಿ ಶೂನ್ಯಕ್ಕೆ ಔಟಾದರು.

ಮಾರಕ ದಾಳಿ ಸಂಘಟಿಸಿದ ಸೈಯಾಜ್ರುಲ್ ಇದ್ರುಸ್ 4 ಓವರ್’ಗಳಲ್ಲಿ ಕೇವಲ 8 ರನ್ ನೀಡಿ 7 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದರು. ಇದು ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಈವರೆಗಿನ ಬೆಸ್ಟ್ ಬೌಲಿಂಗ್ ಸಾಧನೆ. ಈ ಹಿಂದೆ ಭಾರತದ ದೀಪಕ್ ಚಹರ್ ಮತ್ತು ಯುಜ್ವೇಂದ್ರ ಚಹಲ್ ಸೇರಿದಂತೆ ಒಟ್ಟು 12 ಮಂದಿ ಬೌಲರ್’ಗಳು ಟಿ20 ಕ್ರಿಕೆಟ್’ನ ಇನ್ನಿಂಗ್ಸ್ ಒಂದರಲ್ಲಿ 6 ವಿಕೆಟ್’ಗಳ ಸಾಧನೆ ಮಾಡಿದ್ದರು. ನಂತರ ಗುರಿ ಬೆನ್ನಟ್ಟಿದ ಮಲೇಷ್ಯಾ ತಂಡ 4.5 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿ ಸುಲಭ ಗೆಲುವು ದಾಖಲಿಸಿತು.

ಟಿ20 ಅಂತರಾಷ್ಟ್ರೀಯ ಕ್ರಿಕೆಟ್”ನಲ್ಲಿ ಬೆಸ್ಟ್ ಬೌಲಿಂಗ್ ಸಾಧನೆ :

  • 7/8: ಸೈಯಾಜ್ರುಲ್ ಇದ್ರುಸ್ (ಮಲೇಷ್ಯಾ, 2023)
  • 6/5: ಪೀಟರ್ ಅಹೋ (ನೈಜೀರಿಯಾ, 2021)
  • 7/7: ದೀಪಕ್ ಚಹರ್ (ಭಾರತ, 2019)
  • 6/7: ದಿನೇಶ್ ನಕ್ರಾನಿ (ಉಗಾಂಡ, 2021)
  • 6/8: ಅಜಂತ ಮೆಂಡಿಸ್ (ಶ್ರೀಲಂಕಾ, 2012)

ಇದನ್ನೂ ಓದಿ : India Vs Pakistan World Cup match: ಭಾರತ Vs ಪಾಕಿಸ್ತಾನ ವಿಶ್ವಕಪ್ ಪಂದ್ಯ: 10 ಸೆಕೆಂಡ್ ಜಾಹೀರಾತಿಗೆ 30 ಲಕ್ಷ..!

ಇದನ್ನೂ ಓದಿ : India Vs West Indies ODI : ಭಾರತ Vs ವಿಂಡೀಸ್ ಪ್ರಥಮ ಏಕದಿನ: ಕೆನ್ನಿಂಗ್ಟನ್ ಓವಲ್ ಪಿಚ್ ರಿಪೋರ್ಟ್, ಲೈವ್ ಟೆಲಿಕಾಸ್ಟ್, ಪ್ಲೇಯಿಂಗ್ XI ಡೀಟೇಲ್ಸ್

Syazrul Ezat Idrus : T20 World Cup qualifier, China all out for 23; Malaysia bowler who took 7 wickets for 8 runs

Comments are closed.