ಮೆಲ್ಬೋರ್ನ್ : ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಕಿಂಗ್. ತಮ್ಮನ್ನು ಕ್ರಿಕೆಟ್ ಪ್ರಿಯರೇಕೆ ಕಿಂಗ್ ಎಂದು ಕರೆಯುತ್ತಾರೆ ಎಂಬುದನ್ನು ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ (T20 World Cup 2022) ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ನಡೆದಿದ್ದ ರೋಚಕ ಪಂದ್ಯದಲ್ಲಿ ಭಾರತ ತಂಡ, ವಿರಾಟ್ ಕೊಹ್ಲಿ ಅವರ ಸಾಹಸದಿಂದ ಪಾಕಿಸ್ತಾನ ವಿರುದ್ಧ 4 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿತ್ತು. ಕಿಂಗ್ ಕೊಹ್ಲಿ ಕೇವಲ 53 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಅಜೇಯ 82 ರನ್ ಗಳಿಸಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ರನ್ ಚೇಸಿಂಗ್’ನಲ್ಲಿ ಮತ್ತೊಂದು ಅಮೋಘ ಇನ್ನಿಂಗ್ಸ್ ಆಡಿದ್ದ ಕೊಹ್ಲಿ, ತಮ್ಮ ಅಸೀಮ ಬ್ಯಾಟಿಂಗ್ ತಾಕತ್ತನ್ನು ತೋರಿಸಿದ್ದರು.
ಅಂದ ಹಾಗೆ ಟಿ20 ವಿಶ್ವಕಪ್ ಸಕ್ಸಸ್’ಫುಲ್ ರನ್ ಚೇಸಿಂಗ್’ಗಳಲ್ಲಿ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಎಷ್ಟು ಗೊತ್ತಾ? 518. 2ನೇ ಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ಓಪನರ್ ಡೇವಿಡ್ ವಾರ್ನರ್. ಟಿ20 ವಿಶ್ವಕಪ್ ಸಕ್ಸಸ್’ಫುಲ್ ರನ್ ಚೇಸಿಂಗ್’ನಲ್ಲಿ ವಾರ್ನರ್ ಅವರ ಬ್ಯಾಟಿಂಗ್ ಸರಾಸರಿ 41.66. ಅಂದ್ರೆ 2ನೇ ಸ್ಥಾನದಲ್ಲಿರುವ ವಾರ್ನರ್ ಅವರಿಗಿಂತ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಅವರೇಜ್ ಬರೋಬ್ಬರಿ 12 ಪಟ್ಟು ಹೆಚ್ಚು. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಪ್ರಭುತ್ವಕ್ಕೆ ಇದು ಮತ್ತೊಂದು ಸಾಕ್ಷಿ.
ಟಿ20 ವಿಶ್ವಕಪ್ ಸಕ್ಸಸ್’ಫುಲ್ ರನ್ ಚೇಸಿಂಗ್: ಬೆಸ್ಟ್ ಬ್ಯಾಟಿಂಗ್ ಸರಾಸರಿ (ಕನಿಷ್ಠ 5 ಪಂದ್ಯ)
- 518.00: ವಿರಾಟ್ ಕೊಹ್ಲಿ (ಭಾರತ)
- 104.00: ಕ್ಯಾಮರೂನ್ ವೈಟ್ (ಆಸ್ಟ್ರೇಲಿಯಾ)
- 103.00: ಕುಮಾರ ಸಂಗಕ್ಕಾರ (ಶ್ರೀಲಂಕಾ)
- 86.00: ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್)
- 82.00: ಎಂ.ಎಸ್ ಧೋನಿ (ಭಾರತ)
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ರನ್ ಚೇಸಿಂಗ್ ವೇಳೆ ಒಟ್ಟು 9 ಇನ್ನಿಂಗ್ಸ್ ಆಡಿರುವ ಕೊಹ್ಲಿ 139.62ರ ಸ್ಟ್ರೇಕ್’ರೇಟ್ ಹಾಗೂ 518ರ ಅಮೋಘ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 9 ಇನ್ನಿಂಗ್ಸ್’ಗಳಲ್ಲಿ 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ರನ್ ಚೇಸಿಂಗ್ ಸಂದರ್ಭದಲ್ಲಿ ಆಡಿರುವ 9 ಇನ್ನಿಂಗ್ಸ್’ಗಳಲ್ಲಿ ಕೊಹ್ಲಿ ಕೇವಲ ಒಮ್ಮೆ ಮಾತ್ರ ಔಟಾಗಿದ್ದಾರೆ.
ಇದನ್ನೂ ಓದಿ : Special Gift for King Kohli : ತ್ರಿವರ್ಣ ಧ್ವಜ + ವಿರಾಟ್ ಕೊಹ್ಲಿ = ರಂಗೋಲಿ, ಕಿಂಗ್ ಕೊಹ್ಲಿಗೆ ಅಭಿಯಾನಿಯ ವಿಶೇಷ ಗೌರವ
ಇದನ್ನೂ ಓದಿ : Dhoni and Kohli : “ಧೋನಿ ಆ ಕೆಲಸ ಮಾಡಿರದಿದ್ದರೆ ನಾನು ಇಲ್ಲಿ ಇರುತ್ತಲೇ ಇರಲಿಲ್ಲ”, ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ರನ್ ಚೇಸಿಂಗ್’ನಲ್ಲಿ ಕಿಂಗ್ ಕೊಹ್ಲಿ
- ಇನ್ನಿಂಗ್ಸ್: 09
- ಸರಾಸರಿ: 518
- ಸ್ಟ್ರೈಕ್’ರೇಟ್: 139.62
- ಅರ್ಧಶತಕ: 07
T20 World Cup 2022: Kohli’s batting average is more than 500 in the ‘full chase’ of success!