ಸೋಮವಾರ, ಏಪ್ರಿಲ್ 28, 2025
HomeSportsCricketT20 World cup 2022 : ಟಿ20 ವಿಶ್ವಕಪ್ : ಭಾರತ ಪರ ಟಾಪ್ ಸ್ಕೋರರ್,...

T20 World cup 2022 : ಟಿ20 ವಿಶ್ವಕಪ್ : ಭಾರತ ಪರ ಟಾಪ್ ಸ್ಕೋರರ್, ಬೆಸ್ಟ್ ಸ್ಟ್ರೈಕ್‌ರೇಟ್, ಟಾಪ್ ವಿಕೆಟ್ ಟೇಕರ್ ಯಾರು? ಇಲ್ಲಿದೆ ಕಂಪ್ಲೀಟ್ ಮಾಹಿತಿ

- Advertisement -

ಬೆಂಗಳೂರು: ಟಿ20 ವಿಶ್ವಕಪ್ ಟೂರ್ನಿಯಲ್ಲಿ (Cricket T20 World cup 2022) ಭಾರತದ ಅಭಿಯಾನ ಆರಂಭಕ್ಕಿನ್ನು ಎರಡನೇ ದಿನ ಬಾಕಿ. ಸೂಪರ್ ಸಂಡೇ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಟಿ20 ಕ್ರಿಕೆಟ್ ಅಂದ್ರೆ ಬೌಂಡರಿ, ಸಿಕ್ಸರ್’ಗಳ ಸುರಿಮಳೆ. ಅದ್ರಲ್ಲೂ ಚುಟುಕು ವಿಶ್ವಕಪ್ ಅಂದ್ರೆ ಕ್ರಿಕೆಟ್ ಪ್ರಿಯರ ಪಾಲಿಗೆ ಹಬ್ಬ. ಈ ಟಿ20 ವಿಶ್ವಕಪ್’ನಲ್ಲಿ ಭಾರತ ಪರ ಬ್ಯಾಟಿಂಗ್ ಮತ್ತು ಬೌಲಿಂಗ್’ನಲ್ಲಿ ದಾಖಲಾದ ಒಂದಷ್ಟು ಮಾಹಿತಿಗಳನ್ನು ನಿಮ್ಮ ಮುಂದಿಡ್ತೀವಿ.

Cricket T20 World cup 2022 : ಟಾಪ್ ಸ್ಕೋರರ್: ರೋಹಿತ್ ಶರ್ಮಾ

ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಪರ ಅತೀ ಹೆಚ್ಚು ರನ್ ಗಳಿಸಿರುವ ದಾಖಲೆ ನಾಯಕ ರೋಹಿತ್ ಶರ್ಮಾ ಹೆಸರಲ್ಲಿದೆ. 2007ರಿಂದ ಎಲ್ಲಾ ಟಿ20 ವಿಶ್ವಕಪ್’ಗಳಲ್ಲಿ ಆಡಿರುವ ರೋಹಿತ್ ಒಟ್ಟು 847 ರನ್ ಕಲೆ ಹಾಕಿದ್ದಾರೆ.

ಟಾಪ್ ವಿಕೆಟ್ ಟೇಕರ್: ಆರ್.ಅಶ್ವಿನ್
ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ಪರ ಅತೀ ಹೆಚ್ಚು ವಿಕೆಟ್’ಗಳನ್ನು ಪಡೆದ ಬೌಲರ್ ರವಿಚಂದ್ರನ್ ಅಶ್ವಿನ್. ಅನುಭವಿ ಅಶ್ವಿನ್ ಚುಟುಕು ವಿಶ್ವಕಪ್’ನಲ್ಲಿ ಒಟ್ಟು 26 ವಿಕೆಟ್’ಗಳನ್ನು ಕಬಳಿಸಿದ್ದಾರೆ.

T20 World cup 2022
ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಟಿ29 ವಿಶ್ವಕಪ್’ನಲ್ಲಿ ಭಾರತ ಪರ ಬೆಸ್ಟ್ ಬ್ಯಾಟಿಂಗ್ ಸರಾಸರಿ ದಾಖಲೆ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿ. ಕೊಹ್ಲಿ 76.80 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ.

ಬೆಸ್ಟ್ ಬೌಲಿಂಗ್ ಅವರೇಜ್: ಆರ್.ಪಿ ಸಿಂಗ್
ಬೌಲಿಂಗ್ ಸರಾಸರಿ ದಾಖಲೆ ಮಾಜಿ ಎಡಗೈ ವೇಗದ ಬೌಲರ್ ರುದ್ರಪ್ರತಾಪ್ ಸಿಂಗ್ ಅವರ ಹೆಸರಲ್ಲಿದೆ (13.30).

ಬೆಸ್ಟ್ ಬ್ಯಾಟಿಂಗ್ ಸ್ಟ್ರೈಕ್’ರೇಟ್: ಕೆ.ಎಲ್ ರಾಹುಲ್
ಬಾರತ ಪರ ಚುಟುಕು ವಿಶ್ವಕಪ್’ನಲ್ಲಿ ಬೆಸ್ಟ್ ಬ್ಯಾಟಿಂಗ್ ಸ್ಟ್ರೈಕ್’ರೇಟ್ ಹೊಂದಿರುವ ಆಟಗಾರ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್, ಟಿ20 ವರ್ಲ್ಡ್’ಕಪ್’ನಲ್ಲಿ 152.8ರ ಅಮೋಘ ಸ್ಟ್ರೈಕ್’ರೇಟ್ ಹೊಂದಿದ್ದಾರೆ.

ಬೆಸ್ಟ್ ಎಕಾನಮಿ ರೇಟ್: ಆರ್.ಅಶ್ವಿನ್
ಮತ್ತೆ ಬೌಲಿಂಗ್ ವಿಭಾಗಕ್ಕೆ ಬಂದರೆ ಭಾರತ ಪರ ಬೆಸ್ಟ್ ಎಕಾನಮಿ ರೇಟ್ ಹೊಂದಿರುವುದು ಅನುಭವಿ ಆಫ್’ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಅಶ್ವಿನ್ ಪ್ರತೀ ಓವರ್’ಗೆ ಸರಾಸರಿ 6ರ ಎಕಾನಮಿ ಹೊಂದಿದ್ದಾರೆ.

ಅತ್ಯುತ್ತಮ ಜೊತೆಯಾಟ: ರೋಹಿತ್ ಶರ್ಮಾ+ಕೆ.ಎಲ್ ರಾಹುಲ್
ಟಿ20 ವಿಶ್ವಕಪ್’ನಲ್ಲಿ ಭಾರತ ಪರ ದಾಖಲಾಗಿರುವ ಅತೀ ದೊಡ್ಡ ಜೊತೆಯಾಟ 140. ಇದು ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಅವರ ಹೆಸರಲ್ಲಿದೆ.

ಅತ್ಯಧಿಕ ತಂಡದ ಮೊತ್ತ : 218/4
ಇದು ಟಿ20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾಗಿರುವ ಭಾರತದ ಅತೀ ಹೆಚ್ಚಿನ ಮೊತ್ತ. 2007ರ ಟಿ20 ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಸೂಪರ್ 8 ಪಂದ್ಯದಲ್ಲಿ ಭಾರತ ಈ ಮೊತ್ತ ದಾಖಲಿಸಿತ್ತು. ಆ ಪಂದ್ಯದಲ್ಲಿ ಸಿಕ್ಸರ್ ಸರ್ದಾರ ಯುವರಾಜ್ ಸಿಂಗ್ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್’ನಲ್ಲಿ ಆರು ಸಿಕ್ಸರ್’ಗಳನ್ನು ಸಿಡಿಸಿದ್ದರು. ಅಷ್ಟೇ ಅಲ್ಲ, ಕೇವಲ 12 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿ ವಿಶ್ವದಾಖಲೆ ನಿರ್ಮಿಸಿದ್ದರು

ಇದನ್ನೂ ಓದಿ : India vs Pakistan Rain threat : ಭಾರತ Vs ಪಾಕಿಸ್ತಾನ ಪಂದ್ಯದ ಮೇಲೆ ಮಳೆಯ ಕರಿನೆರಳು, ಭಾನುವಾರ 80% ಮಳೆ ಪಕ್ಕಾ

ಇದನ್ನು ಓದಿ : Rahul Dravid Roger Binny: ಒಬ್ಬ ಬೆಂಗಳೂರಿಗ ಟೀಮ್ ಇಂಡಿಯಾ ಕೋಚ್, ಮತ್ತೊಬ್ಬ ಬಿಸಿಸಿಐ ಬಾಸ್; ಸೂಪರ್ ಫೋಟೋ ಶೇರ್ ಮಾಡಿದ ಆರ್‌ಸಿಬಿ

T20 World cup 2022 Top Scorer, best Strick rate Top wicket Taker in India cricket team Complete details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular