T20 World Cup Defeat : ಟಿ20 ವಿಶ್ವಕಪ್ ಸೋಲು: ಈ ಆಟಗಾರರಿಗೆ ಇನ್ನು ಮುಂದೆ ಭಾರತ ಟಿ20 ತಂಡದಲ್ಲಿ ಸ್ಥಾನವಿಲ್ಲ!

ಬೆಂಗಳೂರು: (T20 World Cup Defeat) ಟಿ20 ವಿಶ್ವಕಪ್ (T20 World Cup 2022) ಗೆದ್ದೇ ಗೆಲ್ಲುವ ಪಣ ತೊಟ್ಟು ಆಸ್ಟ್ರೇಲಿಯಾಗೆ ಕಾಲಿಟ್ಟಿದ್ದ ಭಾರತದ ವಿಶ್ವಕಪ್ ಕನಸು ಮತ್ತೊಮ್ಮೆ ಭಗ್ನಗೊಂಡಿದೆ.

ಅಡಿಲೇಡ್ ಓವಲ್ ಮೈದಾನದಲ್ಲಿ ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್’ಗಳ ಹೀನಾಯ ಸೋಲು(T20 World Cup Defeat) ಕಾಣುವುದರೊಂದಿಗೆ ಭಾರತದ ಕನಸು ನುಚ್ಚು ನೂರಾಗಿದೆ. ಇದರೊಂದಿಗೆ ಸತತ 9 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲುವಿನ ಬರವನ್ನು ನೀಗಿಸಿಕೊಳ್ಳುವಲ್ಲಿ ಭಾರತ ಮತ್ತೊಮ್ಮೆ ವಿಫಲವಾಗಿದೆ. 2013ರಲ್ಲಿ ಎಂ.ಎಸ್ ಧೋನಿ ಅವರ ನಾಯಕತ್ವದಲ್ಲಿ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದ ನಂತರ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ.

ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್’ನಲ್ಲಿ ಭಾರತ ಸೆಮಿಫೈನಲ್’ನಲ್ಲಿ ಸೋತು ಹೊರಬೀಳುವುದರೊಂದಿಗೆ ಒಂದಷ್ಟು ಆಟಗಾರರ ಅಂತಾರಾಷ್ಟ್ರೀಯ ಟಿ20 ಕರಿಯರ್ ಇಲ್ಲಿಗೇ ಅಂತ್ಯಗೊಳ್ಳುವ ಸಾಧ್ಯತೆಯಿದೆ.

ದಿನೇಶ್ ಕಾರ್ತಿಕ್ (Dinesh Karthik):
38 ವರ್ಷದ ದಿನೇಶ್ ಕಾರ್ತಿಕ್ 3 ವರ್ಷಗಳ ನಂತರ ಭಾರತ ಟಿ20 ತಂಡಕ್ಕೆ ಕಂಬ್ಯಾಕ್ ಮಾಡಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ವಿಶ್ವಕಪ್’ನಲ್ಲಿ ನಿರೀಕ್ಷೆಗೆ ತಕ್ಕಂತೆ ಆಟವಾಡಲು ವಿಫಲರಾದ ಕಾರಣ 4 ಪಂದ್ಯಗಳಲ್ಲಿ ಮಾತ್ರ ಡಿಕೆಗೆ ಆಡುವ ಅವಕಾಶ ಸಿಕ್ಕಿತ್ತು. ಆ ಪೈಕಿ ಬ್ಯಾಟಿಂಗ್ ಅವಕಾಶ ಸಿಕ್ಕಿದ 3 ಇನ್ನಿಂಗ್ಸ್’ಗಳಲ್ಲಿ ದಿನೇಶ್ ಕಾರ್ತಿಕ್ ಗಳಿಸಿದ್ದು 14 ರನ್ ಮಾತ್ರ. ಹೀಗಾಗಿ ಮುಂದೆ ದಿನೇಶ್ ಕಾರ್ತಿಕ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಖಂಡಿತಾ ಇಲ್ಲ. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಟೀಮ್ ಇಂಡಿಯಾದಿಂದ ಡಿಕೆ ಹೊರ ಬಿದ್ದಿದ್ದು, ಇದು ಭಾರತ ತಂಡದ ಜೊತೆಗಿನ ಅವರ ಪ್ರಯಾಣ ಅಂತ್ಯವಾಗಲಿರುವುದರ ಸ್ಪಷ್ಟ ಮುನ್ಸೂಚನೆ.

ಇದನ್ನೂ ಓದಿ : Virat Kohli : ಕ್ಷಮಿಸಿ ಬಿಡು ಕೊಹ್ಲಿ… ನಿನ್ನ ಆಟಕ್ಕೆ ಕೊನೆಗೂ ನ್ಯಾಯ ಸಿಗಲಿಲ್ಲ

ರವಿಚಂದ್ರನ್ ಅಶ್ವಿನ್ (Ravichandran Ashwin):
2016ರ ಟಿ20 ವಿಶ್ವಕಪ್ ನಂತರ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತೆ ಚುಟುಕು ಕ್ರಿಕೆಟ್’ನಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದದ್ದೇ ಅಚ್ಚರಿ. ಯುವ ಸ್ಪಿನ್ನರ್’ಗಳನ್ನು ಹಿಂದಿಕ್ಕಿ ಭಾರತ ವಿಶ್ವಕಪ್ ತಂಡದಲ್ಲಿ ಅವಕಾಶ ಪಡೆದಿದ್ದ ಅಶ್ವಿನ್, ವಿಶ್ವಕಪ್’ನಲ್ಲಿ ಎಲ್ಲಾ 6 ಪಂದ್ಯಗಳಲ್ಲಿ ಆಡಿ ಕೇವಲ 6 ವಿಕೆಟ್ ಮಾತ್ರ ಉರುಳಿಸಿದ್ದಾರೆ. ಬೌಲಿಂಗ್ ಎಕಾನಮಿ 8.15. 36 ವರ್ಷದ ಅಶ್ವಿನ್ ಅವರಿಗೆ ಮತ್ತೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ.

ಇದನ್ನೂ ಓದಿ : Gautam Gambhir : T20 ವಿಶ್ವಕಪ್ ನಿಂದ ಹೊರಬಿದ್ದ ಭಾರತ : ಗೌತಮ್ ಗಂಭೀರ್ ರಹಸ್ಯ ಪೋಸ್ಟ್

ಮೊಹಮ್ಮದ್ ಶಮಿ (Mohammed Shami):
ವೇಗಿ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದ ಕಾರಣ ಟಿ20 ವಿಶ್ವಕಪ್ ತಂಡದ ಅಂತಿಮ 15ರ ಬಳಗದಲ್ಲಿ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ ವಿಶ್ವಕಪ್’ನಲ್ಲಿ ಆಡಿದ 6 ಪಂದ್ಯಗಳಲ್ಲಿ 7.15ರ ಉತ್ತಮ ಎಕಾನಮಿಯಲ್ಲಿ 6 ವಿಕೆಟ್’ಗಳನ್ನು ಪಡೆದಿದ್ದಾರೆ. ಆದರೆ 32 ವರ್ಷದ ಮೊಹಮ್ಮದ್ ಶಮಿ 2024ರ ಟಿ20 ವಿಶ್ವಕಪ್’ನಲ್ಲಿ ಆಡುವ ಸಾಧ್ಯತೆಗಳಿಲ್ಲ. ಹೀಗಾಗಿ ವಿಶ್ವಕಪ್ ಟೂರ್ನಿಯೇ ಶಮಿ ಅವರಿಗೆ ಭಾರತ ಪರ ಟಿ20 ಕ್ರಿಕೆಟ್’ನಲ್ಲಿ ಕೊನೆಯ ಸರಣಿಯಾಗಲಿದೆ.

(T20 World Cup Defeat) India’s World Cup dream that had entered Australia with the bet of winning the T20 World Cup (T20 World Cup 2022) has been shattered once again.

Comments are closed.