Dark Circles :ಡಾರ್ಕ್ ಸರ್ಕಲ್ಸ್ ನಿಂದ ಮುಕ್ತಿ ಪಡೆಯಬೇಕಾ : ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

(Dark Circles )ಇತ್ತಿಚಿನ ದಿನಗಳಲ್ಲಿ ಹಲವರಲ್ಲಿ ಡಾರ್ಕ್ ಸರ್ಕಲ್ಸ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದನ್ನು ಮರೆಮಾಡುವುದಕ್ಕಾಗಿ ಎಷ್ಟೇ ಮೇಕಪ್ ಮಾಡಿದರು ಅದು ಆ ಸಮಯಕ್ಕೆ ಅಷ್ಟೇ ಸೀಮಿತ. ಡಾರ್ಕ್ ಸರ್ಕಲ್ಸ್ ಹಾಗೆ ಉಳಿದುಕೊಳ್ಳುತ್ತದೆ. ಈ ಡಾರ್ಕ್ ಸರ್ಕಲ್ಸ್ ಸಮಸ್ಯೆ ಮಹಿಳೆಯರಲ್ಲಿ ಅಷ್ಟೇ ಅಲ್ಲದೆ ಪುರುಷರಲ್ಲೂ ಕೂಡ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಆಧುನಿಕ ಜೀವನ ಶೈಲಿ ಕಾರಣವಾಗಿರಬಹುದು. ಮೊಬೈಲ್ ಬಳಕೆಯನ್ನು ಮಾಡುತ್ತಾ ತಡರಾತ್ರಿ ಮಲಗುವುದರಿಂದ ಪುರುಷರಲ್ಲಿ ಡಾರ್ಕ್ ಸರ್ಕಲ್ಸ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರವೇನು ಎಂಬುದನ್ನು ಈ ಲೇಖಕನ ಮೂಲಕ ತಿಳಿದುಕೊಳ್ಳಿ.

(Dark Circles )ಪಪ್ಪಾಯ ಹಣ್ಣಿನ ದಪ್ಪ ಭಾಗದ ಸಿಪ್ಪೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಪಿಂಚ್ ಅರಿಶಿಣ ಹಾಕಿ ಕಣ್ಣಿನ ಕೆಳ ಭಾಗದಲ್ಲಿ ನಿಮಿಷ ಗಳ ಕಾಲ ಇಟ್ಟುಕೊಳ್ಳಬೇಕು. ನಂತರ ಪಪ್ಪಾಯ ಸಿಪ್ಪೆಯಿಂದ ಕಣ್ಣಿನ ಸುತ್ತ ಐದು ನಿಮಿಷ ಮಾಸಾಜ್ ಮಾಡಬೇಕು. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ.

ಒಂದು ಬೌಲ್ ನಲ್ಲಿ ಒಂದು ಚಮಚ ಬಿಟ್ರೊಟ್ ಪೌಡರ್, ಅರ್ಧ ಚಮಚ ಬಾದಾಮಿ ಎಣ್ಣೆ, ಒಂದು ಚಮಚ ರೊಸ್ ವಾಟರ್ ಹಾಕಿ ಮಿಕ್ಸ್ ಮಾಡಿಕೊಂಡು ಕಣ್ಣಿನ ಕೆಳಗೆ ಹಚ್ಚಬೇಕು. ನಂತರ 20 ನಿಮಿಷಗಳ ಕಾಲ ಹಾಗೆ ಬಿಟ್ಟು ಮಾಸಾಜ್ ಮಾಡಬೇಕು. ಅನಂತರ ಮುಖವನ್ನು ತೊಳೆದು ಕಣ್ಣಿಗೆ ಹಚ್ಚುವ ಕ್ರಿಮ್ ಹಚ್ಚಬೇಕು. ಹೀಗೆ ವಾರಕ್ಕೆ ಎರಡು ಭಾರಿ ಮಾಡುವುದರಿಂದ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ.

ಒಂದು ಬೌಲ್ ನಲ್ಲಿ ಮೂರು ಚಮಚ ಬಾದಾಮಿ ಎಣ್ಣೆ, ಎರಡು ಮಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಅದನ್ನು ಒಂದು ಸಣ್ಣ ಬಾಟಲಿನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಪ್ರತಿನಿತ್ಯ ಕಣ್ಣಿನ ಸುತ್ತ ಮುತ್ತ ಹಚ್ಚಿಕೊಂಡು ಮಾಸಾಜ್ ಮಾಡುತ್ತಾ ಬಂದರೆ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ.

ಒಂದು ಬೌಲ್ ನಲ್ಲಿ ಎರಡು ಚಮಚ ಹಾಲು, ಒಂದು ಚಮಚ ರೊಸ್ ವಾಟರ್, ಒಂದು ಚಮಚ ಅಲವೇರಾವನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಹತ್ತಿಯನ್ನು ಅದ್ದಿಕೊಂಡು ಕಣ್ಣಿನ ಕೆಳ ಭಾಗದಲ್ಲಿ ಇಡುವುದರಿಂದ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ.

ಇದನ್ನೂ ಓದಿ:Green Tea:ಮುಖದ ಕಾಂತಿ ಅರಳಿಸುತ್ತೆ ಗ್ರೀನ್‌ ಟಿ

ಇದನ್ನೂ ಓದಿ:Rice Beauty tips :ಉಳಿದ ಅನ್ನ ಎಸೆಯುವ ಮುನ್ನ ಈ ಸ್ಟೋರಿ ಓದಿ

ಗ್ರೀನ್ ಟೀ ಕುಡಿದ ಮೇಲೆ ಗ್ರೀನ್ ಟೀ ಬ್ಯಾಗ್ ಅನ್ನು ಎಸೆಯುವ ಬದಲು ಹತ್ತು ನಿಮಿಷ ಪ್ರಿಡ್ಜನಲ್ಲಿ ಇಡಬೇಕು. ನಂತರ ಗ್ರೀನ್ ಟೀ ಬ್ಯಾಗ್ ನಲ್ಲಿ ಕಣ್ಣಿನ ಸುತ್ತ ಮುತ್ತ ಮಾಸಾಜ್ ಮಾಡಿದರೆ ಡಾರ್ಕ್ ಸರ್ಕಲ್ಸ್ ಅನ್ನು ಕಡಿಮೆ ಮಾಡುತ್ತದೆ.

ಆಲೂಗಡ್ಡೆಯನ್ನು ತುರಿದು ಅದರಲ್ಲಿ ಸಿಗುವ ನೀರನ್ನು ಒಂದು ಬೌಲ್ ನಲ್ಲಿ ಹಾಕಿಕೊಳ್ಳಬೇಕು ನಂತರ ಒಂದು ಹತ್ತಿಯನ್ನು ತೆಗೆದುಕೊಂಡು ಆ ಬೌಲ್ ನಲ್ಲಿ ಅದ್ದಿ ಕೊಂಡು ಕಣ್ಣಿನ ಕೆಳ ಭಾಗದಲ್ಲಿ 20 ನಿಮಿಷ ಇಟ್ಟು ಕೊಳ್ಳಬೇಕು. ಹೀಗೆ ಪ್ರತಿದಿನ ಮಾಡುವುದರಿಂದ ಕಾಲ ಕ್ರಮೇಣ ಡಾರ್ಕ್ ಸರ್ಕಲ್ಸ್ ಕಡಿಮೆಯಾಗುತ್ತದೆ

Want to get rid of dark circles: If so then follow these tips

Comments are closed.