Virat Kohli : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಬ್ರಾಂಡ್ ಕೂಡ ಹೌದು. ಜಗತ್ತಿನಾದ್ಯಂತ ವಿರಾಟ್ ಕೊಹ್ಲಿಗೆ ಕೋಟ್ಯಂತರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ವಿರಾಟ್ ಕೊಹ್ಲಿಯ ಕ್ರೇಜ್, ಅವರ ಜನಪ್ರಿಯತೆ ಏನು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಐಸಿಸಿ ಟಿ20 ವಿಶ್ವಕಪ್ (ICC T20 World Cup 2024) ಟೂರ್ನಿಯಲ್ಲಿ ಭಾಗವಹಿಸಲು ನ್ಯೂ ಯಾರ್ಕ್ ತಲುಪಿರುವ ಕಿಂಗ್ ಕೊಹ್ಲಿಗೆ ಅಮೆರಿಕ ಶುಭಾಶಯ ಕೋರಿದೆ.

ವಿರಾಟ್ ಕೊಹ್ಲಿ ಅಮೆರಿಕಕ್ಕೆ ತೆರಳುವ ಮುನ್ನ ಮುಂಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗೆ ಕೊಹ್ಲಿ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಅಮೆರಿಕ ರಾಯಭಾರ ಕಚೇರಿಯ ಮುಖ್ಯಸ್ಥ ಮೈಕ್ ಹ್ಯಾಂಕಿ ವಿಶೇಷ ಕ್ಯಾಪ್ ಒಂದನ್ನು ವಿರಾಟ್ ಕೊಹ್ಲಿ ಅವರಿಗೆ ನೀಡಿ ವಿಶ್ವಕಪ್ ಟೂರ್ನಿಗೆ ಶುಭ ಹಾರೈಸಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತ್ಯಂತ ವೇಗವಾಗಿ 27 ಸಾವಿರ ರನ್ ಪೂರ್ತಿಗೊಳಿಸಲು ವಿರಾಟ್ ಕೊಹ್ಲಿ ಅವರಿಗೆ ಕೇವಲ 267 ರನ್’ಗಳ ಅವಶ್ಯಕತೆಯಿದೆ. 27,00 ರನ್’ಗಳ ಗಡಿಯನ್ನು ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲೇ ತಲುಪುವ ಸಾಧ್ಯತೆಯಿದೆ.ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಸಹಿತ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಇದುವರೆಗೆ 522 ಪಂದ್ಯಗಳನ್ನಾಡಿದ್ದು 80 ಶತಕ ಹಾಗೂ 139 ಅರ್ಧಶತಗಳ ಸಹಿತ 26,733 ರನ್ ಕಲೆ ಹಾಕಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗಾಗಿ ಗುರುವಾರ ಮುಂಬೈನಿಂದ ನ್ಯೂ ಯಾರ್ಕ್’ಗೆ ಪ್ರಯಾಣ ಬೆಳೆಸಿದ್ದ ವಿರಾಟ್ ಕೊಹ್ಲಿ ಶನಿವಾರ ಟೀಮ್ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಟೀಮ್ ಇಂಡಿಯಾ ಆಟಗಾರರು ಸೋಮವಾರವೇ ನ್ಯೂ ಯಾರ್ಕ್ ತಲುಪಿದ್ದರೂ, ವೈಯಕ್ತಿಕ ಕಾರಣ ನೀಡಿ ವಿರಾಟ್ ಕೊಹ್ಲಿ ಮುಂಬೈನಲ್ಲೇ ಉಳಿದುಕೊಂಡಿದ್ದರು. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಭಾನುವಾರ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಆರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 29ರಂದು ನಡೆಯಲಿದೆ.
ಇದನ್ನೂ ಓದಿ : Kohli Vs Rayudu: ವಿರಾಟ್ ಕೊಹ್ಲಿ ಮೇಲೆ ಅಂಬಾಟಿ ರಾಯುಡುಗೇಕೆ ಈ ಪರಿ ಕೋಪ ? ಇಲ್ಲಿದೆ ಅಸಲಿ ಸತ್ಯ !
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.
2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ ಭಾರತ ತಂಡ ನಿರಂತರ 11 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗುತ್ತಾ ಬಂದಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್’ನಲ್ಲಿ ನಿರೀಕ್ಷೆಗಳು ಮತ್ತೆ ಗರಿಗೆದರಿದ್ದು, 17 ವರ್ಷಗಳ ನಂತರ ಭಾರತಕ್ಕೆ ಟಿ20 ವಿಶ್ವಕಪ್ ಒಲಿಯಲಿದೆಯೇ ಎಂಬುದು ಕುತೂಹಲ ಕೆರಳಿಸಿದೆ.

ಐಸಿಸಿ ಟಿ20 ವಿಶ್ವಕಪ್-2024 ಟೂರ್ನಿಗೆ ಆಯ್ಕೆಯಾಗಿರುವ ಭಾರತ ತಂಡ:
1. ರೋಹಿತ್ ಶರ್ಮಾ (ನಾಯಕ)
2. ಯಶಸ್ವಿ ಜೈಸ್ವಾಲ್
3. ವಿರಾಟ್ ಕೊಹ್ಲಿ
4. ಸೂರ್ಯಕುಮಾರ್ ಯಾದವ್
5. ರಿಷಭ್ ಪಂತ್ (ವಿಕೆಟ್ ಕೀಪರ್)
6. ಹಾರ್ದಿಕ್ ಪಾಂಡ್ಯ
7. ರವೀಂದ್ರ ಜಡೇಜ
8. ಕುಲ್ದೀಪ್ ಯಾದವ್
9. ಜಸ್ಪ್ರೀತ್ ಬುಮ್ರಾ
10. ಮೊಹಮ್ಮದ್ ಸಿರಾಜ್
11. ಅರ್ಷದೀಪ್ ಸಿಂಗ್
12. ಅಕ್ಷರ್ ಪಟೇಲ್
13. ಯುಜ್ವೇಂದ್ರ ಚಹಲ್
14. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
15. ಶಿವಂ ದುಬೆ
ಐಸಿಸಿ ಟಿ20 ವಿಶ್ವಕಪ್ 2024: ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ (ICC Men’s T20 World Cup 2024)
ಜೂನ್ 05: ಭಾರತ Vs ಐರ್ಲೆಂಡ್ (ನ್ಯೂಯಾರ್ಕ್, ರಾತ್ರಿ 7.30ಕ್ಕೆ)
ಜೂನ್ 09: ಭಾರತ Vs ಪಾಕಿಸ್ತಾನ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 12: ಭಾರತ Vs ಅಮೆರಿಕ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 15: ಭಾರತ Vs ಕೆನಡಾ (ಲಾಡರ್’ಹಿಲ್, ರಾತ್ರಿ 8ಕ್ಕೆ)
T20 World Cup Virat Kohli Wishes America Good Luck With A Special Cap