ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣಗೊಂಡಿದೆ. ಇದೇ ವೇಳೆ ಪಾಕಿಸ್ತಾನ ತಂಡದ ಹೊಸ ಜರ್ಸಿ ಕೂಡ ಬಿಡುಗಡೆ ಯಾಗಿದ್ದು, ಭಾರತ ಮತ್ತು ಪಾಕ್ ಕ್ರಿಕೆಟ್ ಪ್ರಿಯರ ಮಧ್ಯೆ ಜರ್ಸಿ ಜಟಾಪಟಿ (India Vs Pak Jersey Fight ) ಶುರುವಾಗಿದೆ. ಟಿ20 ವಿಶ್ವಕಪ್’ನಲ್ಲಿ ಪಾಕಿಸ್ತಾನ ತಂಡದ ಆಟಗಾರರು ಧರಿಸಲಿರುವ ಹೊಸ ಜರ್ಸಿ ಕಲ್ಲಂಗಡಿ ಹಣ್ಣಿನಂತಿದೆ ಎಂದು ಭಾರತದ ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿ ಮಾಡುತ್ತಿದ್ದಾರೆ. ಒಂದು ಕಡೆ ಪಾಕ್ ತಂಡದ ಜರ್ಸಿ, ಮತ್ತೊಂದು ಕಡೆ ಕಲ್ಲಂಗಡಿ ಹಣ್ಣಿನ ಫೋಟೋ ಹಾಕಿ, ಎರಡೂ ಒಂದೇ ರೀತಿ ಕಾಣುತ್ತಿದೆ ಎಂಬ ಪೋಸ್ಟ್’ಗಳನ್ನು ಟ್ವಿಟರ್’ನಲ್ಲಿ ಪ್ರಕಟಿಸಲಾಗಿದೆ.
Close enough !! 😂#Jersey pic.twitter.com/TnBXdhhPIA
— Schrodinger 🇮🇳 (@_troll_10) September 18, 2022
ಪಾಕಿಸ್ತಾನ ತಂಡದ ಜರ್ಸಿಯನ್ನು ಕಲ್ಲಂಗಡಿ ಹಣ್ಣಿಗೆ ಹೋಲಿಸಿರುವ ಭಾರತೀಯ ಕ್ರಿಕೆಟ್ ಪ್ರಿಯರಿಗೆ ಪಾಕ್ ತಂಡದ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ. ನಮ್ಮದು ಕಲ್ಲಂಗಡಿ ಜರ್ಸಿಯಾದ್ರೆ, ನಿಮ್ಮದು ಹಾರ್ಪಿಕ್ ಜರ್ಸಿ ಎಂದು ಲೇವಡಿ ಮಾಡಿದ್ದಾರೆ.
ಈ ಜರ್ಸಿ ಜಟಾಪಟಿ ಸಾಮಾಜಿಕ ಜಾಲತಾಣದಲ್ಲಿ ತಾರಕಕ್ಕೇರಿದ್ದು, ಪಾಕಿಸ್ತಾನದ ಕಲ್ಲಂಗಡಿ ಜರ್ಸಿಗಿಂತ ನಮ್ಮ ಜರ್ಸಿಯೇ ಬೆಸ್ಟ್ ಅಂತ ಭಾರತ ತಂಡದ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.
Still better than pakistani watermelon🍉 #ViratKohli #Jersey pic.twitter.com/4UyRcTectX
— aditya__edits__18 (@aditya_says_06) September 18, 2022
ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ (ICC T20 World Cup) ಟೂರ್ನಿ ಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಹೊಸ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದೆ. ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡದ ಜೆರ್ಸಿಯನ್ನು ಟೀಮ್ ಇಂಡಿಯಾದ ಅಧಿಕೃತ ಕಿಟ್ ಸ್ಪಾನ್ಸರ್ ಸಂಸ್ಥೆ ಎಂಪಿಎಲ್ ಸ್ಪೋರ್ಟ್ಸ್ (MPL Sports) ಮುಂಬೈನಲ್ಲಿ ಭಾನುವಾರ ಅನಾವರಣ ಮಾಡಿತ್ತು. ಟಿ20 ವಿಶ್ವಕಪ್’ಗಾಗಿ ಟೀಮ್ ಇಂಡಿಯಾ ಆಟಗಾರರಿಗೆ ತಿಳಿ ನೀಲಿ ಬಣ್ಣದ ಜೆರ್ಸಿಯನ್ನು ಸಮವಸ್ತ್ರ ಸಿದ್ದಪಡಿಸಲಾಗಿದೆ.
Which new Jersey is the better one?
— Cricket Universe (@CricUniverse) September 19, 2022
🤔#india #pakistan #jersey #t20 #worldcup #cricketuniverse pic.twitter.com/nSyN0ymHNs
2007ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡ ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಟೂರ್ನಿಗೂ ಮೊದಲು ರೋಹಿತ್ ಶರ್ಮಾ ಬಳಗ ಆಸ್ಟ್ರೇಲಿಯಾ (ಅಕ್ಟೋಬರ್ 17) ಮತ್ತು ನ್ಯೂಜಿಲೆಂಡ್ (ಅಕ್ಟೋಬರ್ 19) ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹರ್.
ಇದನ್ನೂ ಓದಿ : Virat Kohli New Hair Style: ಹೊಸ ಹೇರ್ ಸ್ಟೈಲ್ಗೆ ವಿರಾಟ್ ಕೊಹ್ಲಿ ಖರ್ಚು ಮಾಡಿದ ಮೊತ್ತ ₹80,000
ಇದನ್ನೂ ಓದಿ : KL Rahul Record in T20 : ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆ.ಎಲ್ ರಾಹುಲ್
T20 World Cup Watermelon Vs Harpic India Vs Pak Jersey Fight